32.8 C
ಪುತ್ತೂರು, ಬೆಳ್ತಂಗಡಿ
October 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅ. 25- 26:ಯಲ್ಲಾಪುರದಲ್ಲಿ ಆದಿವಾಸಿಗಳ ನಾಲ್ಕನೇ ರಾಜ್ಯ ಸಮ್ಮೇಳನ

ಆದಿವಾಸಿ- ಬುಡಕಟ್ಟು ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ‘ ಆದಿವಾಸಿಗಳ ಸಬಲೀಕರಣ, ಭೂಮಿ ಮತ್ತು ಬದುಕುವ ಹಕ್ಕಿಗಾಗಿ’  2026 ಅ. 25 ಮತ್ತು 26ರಂದು ಯಲ್ಲಾಪುರದ ಕಾರ್ಮಿಕ ಸಮುದಾಯ ಭವನದಲ್ಲಿ ರಾಜ್ಯ ಮಟ್ಟದ ಆದಿವಾಸಿಗಳ ಸಾಂಸ್ಕೃತಿಕ ಸಮ್ಮಿಲನ- ಸಮ್ಮೇಳನವನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ನಡೆಯಲಿದೆ.

ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 500 ಪ್ರತಿನಿಧಿಗಳು ಭಾಗವಹಿಸಲಿದ್ದುಅ. 25 ರಂದು ನಡೆಯುವ ಉದ್ಘಾಟನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 1000 ಕ್ಕೂ ಅಧಿಕ ಆದಿವಾಸಿ ಹಾಗೂ ಬೆಂಬಲಿಸುವ ಹಿತೈಷಿಗಳು, ಪಾಲ್ಗೊಳ್ಳಲಿದ್ದಾರೆ.

ಆದಿವಾಸಿಗಳ ಅಭಿವೃದ್ಧಿಗೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಡಿಯಲ್ಲಿ ಅನೇಕ ಯೋಜನೆಗಳಿವೆ, ಲಕ್ಷಾಂತರ ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಮೀಸಲಿಡಲಾಗುತ್ತಿದೆ. ಟಿ.ಎಸ್.ಪಿ ಯನ್ನು ಒಳಗೊಂಡು ಹತ್ತಾರು ಯೋಜನೆಗಳು ರೂಪಿತಗೊಂಡಿವೆ. ಆದರೆ ಇವು ಯಾವುವೂ ಕೂಡ ಆದಿವಾಸಿಗಳ ಬದುಕಿನಲ್ಲಿ ಭಾರಿ ಮಹತ್ತರವಾದ ಬದಲಾವಣೆಗಳನ್ನು ತರಲಿಲ್ಲ. ಮೂಲಭೂತವಾಗಿ ಈ ಸಮುದಾಯಗಳು ನೆಲೆಗೊಂಡಿರುವ ಅರಣ್ಯದಲ್ಲಿ ಅವರ ಬದುಕಿಗೆ ಭದ್ರತೆಯು ಪೂರ್ಣವಾಗಿ ಸಿಕ್ಕಿಲ್ಲ. ಶತಶತಮಾನಗಳಿಂದಲೂ ಬ್ರಿಟಿಷರ ಮತ್ತು ದೇಶಿಯ ಸುಲಿಗೆಗಾರರ ದಾಳಿ, ದಬ್ಬಾಳಿಕೆಗೆ ಒಳಗಾಗಿ ನೊಂದು ಬಳಲಿದ ಜನತೆಯ ಸಾಂತ್ವನಕ್ಕಾಗಿ ತರಲಾದ ಸಂವಿಧಾನಬದ್ಧ ಹಾಗೂ ಕಾನೂನುಗಳು ಸಮರ್ಪಕವಾಗಿ ಜಾರಿಯಾಗಲಿಲ್ಲ. ಆದಿವಾಸಿಗಳ ಮೇಲೆ ನಡೆದ ನೂರಾರು ವರ್ಷಗಳ ದಬ್ಬಾಳಿಕೆ ದಾಳಿಗಳನ್ನು ಗಮನದಲ್ಲಿರಿಸಿ ಈ ಸಮುದಾಯಗಳಿಗೆ ಪಾರಂಪರಿಕವಾದ ಅನ್ಯಾಯಗಳನ್ನು ಸರಿಪಡಿಸಿ ನ್ಯಾಯ ಒದಗಿಸಲೆಂದು ತರಲಾದ 2006ರ ಅರಣ್ಯ ಹಕ್ಕುಗಳ ಕಾಯ್ದೆ ಇಲ್ಲಿಯವರೆಗೂ ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡಂತೆ ಎಸ್. ಟಿ .ಸಮುದಾಯಗಳಿಗೆ , ಅರಣ್ಯವಾಸಿಗಳಿಗೆ ಭೂಮಿಯ ಹಕ್ಕು ಮತ್ತು ಸಮುದಾಯಗಳ ಹಕ್ಕುಗಳು ದೊರೆಯಲಿಲ್ಲ. ಕಾಯ್ದೆಗೆ ಅನುಸಾರವಾಗಿ ಮತ್ತು ವಾಸ್ತವಿಕ ಬದುಕಿನ ಹಿನ್ನೆಲೆಯಲ್ಲಿ ಕ್ಲೇಮಗಳನ್ನು ಸಲ್ಲಿಸಿದರೂ ಬಹುತೇಕ ತಿರಸ್ಕೃತಗೊಂಡಿದೆ. ಮತ್ತು ಅವುಗಳನ್ನು ನಿರ್ಲಕ್ಷಿಸಿ ನಿರಾಕರಿಸಲಾಗುತ್ತಿದೆ. ಹೀಗೆ ಬದುಕಿಗೆ ಭದ್ರತೆಯನ್ನ ಕಲ್ಪಿಸಿಕೊಡಲು ಆಗದ ಸರ್ಕಾರದ  ನೀತಿಗಳು, ಅನುಷ್ಠಾನದಲ್ಲಿನ ನಿರ್ಲಕ್ಷ್ಯತನ ಆದಿವಾಸಿಗಳನ್ನು ಮತ್ತೆ ಅದೇ ತೀವ್ರ ಸಂಕಷ್ಟದಲ್ಲಿ ಮತ್ತು ಅತ್ಯಂತ ದುಃಸ್ಥಿತಿಯಲ್ಲಿ ಇರುವಂತೆ ಮಾಡಿದೆ. ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಲಾಗದೆ ಅದರಲ್ಲೂ ಉತ್ತಮ ಅವಕಾಶಗಳು ಸಿಗದೇ ಇರುವ ಸ್ಥಿತಿಯಲ್ಲಿ ಮೀಸಲಾತಿಯು ದಕ್ಕುತ್ತಿಲ್ಲ. ಸರ್ಕಾರ ಮೀಸಲಾತಿ ನೀತಿಯನ್ನು ಜಾರಿಗೆ ತರುವಲ್ಲಿಯೂ ತೋರುತ್ತಿರುವ ವಿಳಂಬ ಮತ್ತು ನಿರ್ಲಕ್ಷ್ಯ ಇವುಗಳು ಆದಿವಾಸಿಗಳನ್ನು ಅವರ ಹಕ್ಕುಗಳಿಂದ ವಂಚಿಸಲ್ಪಡುತ್ತಿವೆ. ಈಗಲೂ ಮಲೆಕುಡಿಯ , ಕೊರಗರು, ಸೋಲಿಗರು, ಮತ್ತು ಜೇನು ಕುರುಬರಂತಹ ಸಮುದಾಯಗಳ ಜನಸಂಖ್ಯೆ ಕುಸಿಯುತ್ತಿದೆ. ಆಹಾರದ ಅಭಾವ, ಅಪೌಷ್ಟಿಕತೆ ಕಾಡುತ್ತಿದೆ. ಹೀಗೆ ಅಪಾರವಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಭಾರತದ ಆದಿವಾಸಿ ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಭಾಷೆ, ಸಂಸ್ಕೃತಿ ಮತ್ತು ಬದುಕಿನ ವೈಶಿಷ್ಟ್ಯತೆಗಳನ್ನು ಹೊಂದಿವೆ. ಅವರ ಅಸ್ಮಿತತೆ ಸಂರಕ್ಷಣೆ, ಬೆಳವಣಿಗೆಗೆ ಹೆಚ್ಚಿನ ಆದ್ಯತೆ ಸಿಗಬೇಕು.

ಅಲ್ಲದೇ ವಿವಿಧ ಯೋಜನೆಗಳಲ್ಲಿ ನಿರ್ವಸತಿಯಾದ ಆದಿವಾಸಿಗಳ ಸಮಸ್ಯೆ, ವಸತಿ ಪ್ರಶ್ನೆ, ಟಿ.ಎಸ್.ಪಿ.ಯೋಜನೆಯ ಸಮರ್ಪಕ ಜಾರಿ, ಅಪೌಷ್ಟಿಕತೆ, ಇಂತಹ ಪ್ರಮುಖ‌ ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚಿಸಿ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಸವಣಾಲು ತಿಳಿಸಿದ್ದಾರೆ.

Related posts

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ನಾರಾವಿ ವಲಯದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಡಿ.17: ನಾರಾವಿ ಎನ್ ಎಸ್ ಎಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ಸುದ್ದಿ ಉದಯ ಪತ್ರಿಕೆಯ ಪ್ರತಿನಿಧಿ ಕರುಣಾಕರ ಶಿಶಿಲ ರವರ ನೂತನ ಗೃಹ “ಮತ್ಸ್ಯ ಕೃಪಾ” ಕ್ಕೆ ಶಾಸಕ ಹರೀಶ್ ಪೂಂಜ ಹಾಗೂ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ, ಶುಭಹಾರೈಕೆ

Suddi Udaya

ಪೆರಿಂಜೆ: ಕಣಜದ ಹುಳ ಕಡಿದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಲಾಯಿಲ: ಸಾರಿ ಫೋಲ್ಡಿಂಗ್, ಬ್ರೈಡಲ್ ಮೇಕಪ್ ಹಾಗೂ ಸಾರಿ ಗೊಂಡೆ ತರಬೇತಿಯ ಸಮಾರೋಪ ಕಾರ್ಯಕ್ರಮ

Suddi Udaya

ನಡ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ 12 ಕ್ಷೇತ್ರಗಳಲ್ಲೂ ಜಯಭೇರಿ, 1 ಕ್ಷೇತ್ರಕ್ಕೆ ಅವಿರೋಧ ಆಯ್ಕೆ

Suddi Udaya
error: Content is protected !!