32.8 C
ಪುತ್ತೂರು, ಬೆಳ್ತಂಗಡಿ
October 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ಯಾಡಿ -ll ಯುವ ಫ್ರೆಂಡ್ಸ್ “ವತಿಯಿಂದ ಬಾಲವನಕ್ಕೆ ರೂ.10ಸಾವಿರ ಕೊಡುಗೆ

ಕನ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ -ll ಧರ್ಮಸ್ಥಳ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ “ಯುವ ಫ್ರೆಂಡ್ಸ್ ಕನ್ಯಾಡಿ “ವತಿಯಿಂದ ಆಯೋಜಿಸಲಾದ ಶ್ರೀ ಶಾರದಾಂಭ ಟ್ರೋಫಿ 2K26 ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆಸಿ , ಉಳಿದ ಮೊತ್ತದಲ್ಲಿ ರೂ.10,000/- ಗಳನ್ನು ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ “ಬಾಲವನ”ದಲ್ಲಿ ಮಕ್ಕಳ ಮನರಂಜನೆಗಾಗಿ ಅಗತ್ಯವಿರುವ ಹೊರಾಂಗಣ ಆಟದ ಸಾಮಾಗ್ರಿಗಳನ್ನು ಅಳವಡಿಸಲು ಮೊತ್ತವನ್ನು ” 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ” ಕಾರ್ಯಕ್ರಮದಲ್ಲಿ ಯುವ ಫ್ರೆಂಡ್ಸ್ ಕನ್ಯಾಡಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಜೊತೆಗೂಡಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಇವರಿಗೆ ಹಸ್ತಾಂತರ ಮಾಡಿದರು.

ಮಕ್ಕಳ ಮುಖದಲ್ಲಿ ನಗು ಮೂಡಿಸುವ, ಶಾಲೆಯ ಅಭಿವೃದ್ಧಿಗೆ ನೆರವಾಗುವ ಸದುದ್ದೇಶದಿಂದ ಯುವ ಫ್ರೆಂಡ್ಸ್ ಕನ್ಯಾಡಿ ಈ ಸಮಾಜಮುಖಿ ಕಾರ್ಯವನ್ನು ಕೈಗೊಂಡಿರುವುದು ನಮಗೆಲ್ಲ ಬಹಳ ಹೆಮ್ಮೆಯ ವಿಷಯವಾಗಿದೆ. ಇನ್ನಷ್ಟು ಸಮಾಜಮುಖಿ ಸೇವೆಗಳು ಇವರ ತಂಡದ ವತಿಯಿಂದ ನಡೆಯಲು ಆ ಭಗವಂತ ಶಕ್ತಿಯನ್ನು ತುಂಬಲಿ ಎಂದು ನಮ್ಮೆಲ್ಲರ ಶುಭ ಹಾರೈಸಿದರು.

Related posts

ಚಿಕ್ಕೋಡಿ ದಿಗಂಬರ ಜೈನ ಮುನಿ ಹತ್ಯೆ : ಬಂಗೇರ ಖಂಡನೆ

Suddi Udaya

ಕುವೆಟ್ಟು, ಉಜಿರೆ, ಇಳಂತಿಲ ಗ್ರಾಪಂ 3 ಸದಸ್ಯ ಸ್ಥಾನಕ್ಕೆ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳ ಜಯ

Suddi Udaya

ಎಸ್ ವಿ ಟಿ ಟೀಮ್ ಪಟ್ರಮೆ ವತಿಯಿಂದ ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ

Suddi Udaya

ಜು. 13: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ “ಶ್ರೀ ಗುರುಸಾನಿಧ್ಯ” ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಹಾಗೂ ಆಡಳಿತ ಕಚೇರಿಯ ಉದ್ಘಾಟನೆ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸ.ಸಂಘದ-ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತ ಸದಸ್ಯರಾಗಿ ಹರೀಶ್ ರಾವ್ ಕಾಯಡ ಆಯ್ಕೆ

Suddi Udaya
error: Content is protected !!