24.6 C
ಪುತ್ತೂರು, ಬೆಳ್ತಂಗಡಿ
October 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಾಲಿಬಾಲ್ ಪಂದ್ಯಾಟ: ಕೀರ್ತಿಕಾ ಮತ್ತು ಯಶ್ಮಿತಾ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ಉತ್ತರ ಕನ್ನಡ ಜಿಲ್ಲೆ ಕುಮಟಾ ಮಹಾತ್ಮಾ ಗಾಂಧಿ ಕ್ರೀಡಾoಗಣದಲ್ಲಿ ಅ. 17 ರಂದು ನಡೆದ 17 ರ ವಯೋಮಾನದ ರಾಜ್ಯಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಂದಾರು ಗ್ರಾಮದ ಪಾಣೆಕಲ್ಲು ನಿವಾಸಿ ಕು. ಕೀರ್ತಿಕಾ ಮತ್ತು ಮೊಗ್ರು ಗ್ರಾಮದ ಪರಕ್ಕಾಜೆ ನಿವಾಸಿ ಯಶ್ಮಿತಾ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಂದಾರು ಗ್ರಾಮದ ಪಾಣೆಕಲ್ಲು ನಿವಾಸಿ ಸುಮಿತ್ರಾ ಮತ್ತು ಶಿವಪ್ಪ ದಂಪತಿಯ ಪುತ್ರಿ ಕು. ಕೀರ್ತಿಕಾ ಹಾಗೂ ಮೊಗ್ರು ಗ್ರಾಮದ ಪರಕ್ಕಾಜೆ ನಿವಾಸಿ ನೀಲಾವತಿ ಮತ್ತು ರಾಮಣ್ಣ ಗೌಡ ದಂಪತಿಯ ಪುತ್ರಿ ಕು. ಯಶ್ಮಿತಾ ಇವರಿಬ್ಬರು ಬಂದಾರು ಪ್ರಾಥಮಿಕ ಶಾಲೆಯಲ್ಲಿ 8 ನೇ ತರಗತಿ ವಿದ್ಯಾಭ್ಯಾಸ ಪೂರೈಸಿ, ಮುಂಡಾಜೆ ಪ್ರೌಢಶಾಲೆಯಲ್ಲಿ 10 ತರಗತಿ ವ್ಯಾಸಂಗ ಮಾಡುತಿದ್ದಾರೆ.
ಇದೇ ಬರುವ ಡಿಸೆಂಬರ್ ರಾಜಸ್ಥಾನದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.
ಇವರಿಬ್ಬರು ಬಾಲ್ಯದಿಂದಲೇ ವಾಲಿಬಾಲ್ ಪಂದ್ಯಾಟದಲ್ಲಿ ಹಲವಾರು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

17ರ ವಯೋಮಾನದ ರಾಜ್ಯ ಮಟ್ಟದ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನ ಪ್ರಶಸ್ತಿ ಪಡೆದು ಇವರಿಬ್ಬರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ರಾಷ್ಟ ಮಟ್ಟದ ಪಂದ್ಯಾಟದಲ್ಲಿ ಆಡಲಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಇಬ್ಬರ ಸಾಧನೆಗೂ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.

Related posts

ವೇಣೂರು : 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಾಲೋಚನಾ ಸಭೆ

Suddi Udaya

ಹಳೆಕೋಟೆ ವಾಣಿ ಕಾಲೇಜು ಮುಂಭಾಗ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ತೆಗೆಯಲಾದ ಹೋಂಡಕ್ಕೆ ಕಾರು ಉರುಳಿ ಬಿದ್ದು ಬೆಂಗಳೂರಿನ ತಂದೆ- ಮಗಳು ಅಪಾಯದಿಂದ ಪಾರು

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ

Suddi Udaya

ಮುಂಡಾಜೆ: ಕೃಷಿಕ ಸದಾಶಿವ ನೇಕಾರ ನಿಧನ

Suddi Udaya

ಕೊಕ್ಕಡ ಸ.ಪ. ಪೂ. ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆದೂರು ಪೇರಲ್ ನ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ದೇವರಿಗೆ ವಿಶೇಷ ಭಜನಾ ಕಾರ್ಯಕ್ರಮ

Suddi Udaya
error: Content is protected !!