23.8 C
ಪುತ್ತೂರು, ಬೆಳ್ತಂಗಡಿ
October 23, 2026
ಅಪರಾಧ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಪುತ್ತೂರಿನ ಸತ್ತಿಕಲ್ಲು ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಇಂದಬೆಟ್ಟು ನಾಗಂಡ ನವೀನ್‌ರವರ ಬೈಕ್ ಕಳವು

ಬೆಳ್ತಂಗಡಿ: ಪುತ್ತೂರಿನ ಸತ್ತಿಕಲ್ಲು ಪೆಟ್ರೋಲ್ ಬಂಕ್ ಬಳಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಇಂದಬೆಟ್ಟು ಗ್ರಾಮದ ನಾಗಂಡ ನಿವಾಸಿ ನವೀನ್ ಎಂಬವರ ಯಮಹಾ ಬೈಕ್‌ನ್ನು ಕಳ್ಳರು ಕಳವುಗೈದ ಘಟನೆ ಅ.೨೧ರಂದು ನಡೆದಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನವೀನ್ ಅವರು ತಮ್ಮ ಬೈಕನ್ನು ತನ್ನ ಸಂಬಂದಿ ಪುತ್ತೂರು ತಾಲೂಕು ಕಬಕ ಗ್ರಾಮದ ಪಂಜುರ್ಲಿ ಪಾದೆ ನಿವಾಸಿ ಹರೀಶ್ ಎಂಬವರಿಗೆ ಉಪಯೋಗಿಸಲು ನೀಡಿದ್ದರು. ಹರೀಶ್‌ರವರು ಟ್ಯಾಂಕರ್ ಲಾರಿಯಲ್ಲಿ ಚಾಲಕನಾಗಿ ಕೆಲಸಮಾಡುತ್ತಿದ್ದು, ತಮ್ಮ ಮನೆಯಿಂದ ಬೈಕ್‌ನಲ್ಲಿ ಬಂದು ಸತ್ತಿಕಲ್ಲು ಭಾರತ್ ಪೆಟ್ರೋಲ್‌ಬಂಕ್‌ನ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಟ್ಯಾಂಕರ್‌ನಲ್ಲಿ ಚಾಲಕರಾಗಿ ಹೋಗುತ್ತಿದ್ದರು.

ಅ.೨೧ ರಂದು ಎಂದಿನಂತೆ ಬಂದು ಬೈಕ್‌ನ್ನು ಸತ್ತಿಕಲ್ಲು ಭಾರತ್ ಪೆಟ್ರೋಲ್ ಬಂಕ್ ಪಾರ್ಕ್‌ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ಮಂಗಳೂರಿನಲ್ಲಿ ರಿಪೇರಿಗೆ ಇಟ್ಟಿರುವ ಟ್ಯಾಂಕರ್ ಲಾರಿಯನ್ನು ನೋಡಿಕೊಂಡು ಬರಲು ತೆರಳಿದ್ದರು. ಸಂಜೆ ಸುಮಾರು ೩.೩೦ಕ್ಕೆ ಪುತ್ತೂರಿನ ಸತ್ತಿಕಲ್ಲಿಗೆ ಬಂದು ನೋಡಿದಾಗ ಬೈಕ್ ಪಾರ್ಕಿಂಗ್ ಸ್ಥಳದಲ್ಲಿರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ, ಯಾರೋ ವಾಹನ ಕಳ್ಳರು ಬೈಕ್‌ನ್ನು ಕಳವು ಮಾಡಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Related posts

ಸೌಜನ್ಯ ತಾಯಿ ಕುಸುಮಾವತಿ ವಿರುದ್ಧ ಎಸ್‌ಐಟಿಗೆ ದೂರು

Suddi Udaya

ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ನಿರ್ಗಮಿತ ಟ್ರಸ್ಟಿಗಳಿಗೆ ಬೀಳ್ಕೊಡುಗೆ

Suddi Udaya

ಡಿ.12: ವಿದ್ಯುತ್ ನಿಲುಗಡೆ

Suddi Udaya

ರಾಜ್ಯಮಟ್ಟದ ಸಾಹಿತ್ಯೋತ್ಸವ: ಮಂಜೊಟ್ಟಿ ಸ್ಟಾರ್ ಲೈನ್ ಶಾಲೆಯ ವಿದ್ಯಾರ್ಥಿ ಸಯ್ಯದ್ ಮುಹಮ್ಮದ್ ಉವೈಸ್ ಉರ್ದು ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಮಿತ್ತಬಾಗಿಲು ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ವಾಸುದೇವ ರಾವ್ ಕಕ್ಕೆನೇಜಿ

Suddi Udaya

ಬಳಂಜ–ನಾಲ್ಕೂರಿನ ಯುವಕರಿಂದ ಅಮರನಾಥ ಯಾತ್ರೆ ಪವಿತ್ರ ಹಿಮಲಿಂಗ ದರ್ಶನದೊಂದಿಗೆ ವೈಷ್ಣೋದೇವಿ, ಶಿವಖೋರಿ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ

Suddi Udaya
error: Content is protected !!