ಬೆಳ್ತಂಗಡಿ: ಪುತ್ತೂರಿನ ಸತ್ತಿಕಲ್ಲು ಪೆಟ್ರೋಲ್ ಬಂಕ್ ಬಳಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಇಂದಬೆಟ್ಟು ಗ್ರಾಮದ ನಾಗಂಡ ನಿವಾಸಿ ನವೀನ್ ಎಂಬವರ ಯಮಹಾ ಬೈಕ್‌ನ್ನು ಕಳ್ಳರು ಕಳವುಗೈದ ಘಟನೆ ಅ.೨೧ರಂದು ನಡೆದಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನವೀನ್ ಅವರು ತಮ್ಮ ಬೈಕನ್ನು ತನ್ನ ಸಂಬಂದಿ ಪುತ್ತೂರು ತಾಲೂಕು ಕಬಕ ಗ್ರಾಮದ ಪಂಜುರ್ಲಿ ಪಾದೆ ನಿವಾಸಿ ಹರೀಶ್ ಎಂಬವರಿಗೆ ಉಪಯೋಗಿಸಲು ನೀಡಿದ್ದರು. ಹರೀಶ್‌ರವರು ಟ್ಯಾಂಕರ್ ಲಾರಿಯಲ್ಲಿ ಚಾಲಕನಾಗಿ ಕೆಲಸಮಾಡುತ್ತಿದ್ದು, ತಮ್ಮ ಮನೆಯಿಂದ ಬೈಕ್‌ನಲ್ಲಿ ಬಂದು ಸತ್ತಿಕಲ್ಲು ಭಾರತ್ ಪೆಟ್ರೋಲ್‌ಬಂಕ್‌ನ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಟ್ಯಾಂಕರ್‌ನಲ್ಲಿ ಚಾಲಕರಾಗಿ ಹೋಗುತ್ತಿದ್ದರು.
ಅ.೨೧ ರಂದು ಎಂದಿನಂತೆ ಬಂದು ಬೈಕ್‌ನ್ನು ಸತ್ತಿಕಲ್ಲು ಭಾರತ್ ಪೆಟ್ರೋಲ್ ಬಂಕ್ ಪಾರ್ಕ್‌ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ಮಂಗಳೂರಿನಲ್ಲಿ ರಿಪೇರಿಗೆ ಇಟ್ಟಿರುವ ಟ್ಯಾಂಕರ್ ಲಾರಿಯನ್ನು ನೋಡಿಕೊಂಡು ಬರಲು ತೆರಳಿದ್ದರು. ಸಂಜೆ ಸುಮಾರು ೩.೩೦ಕ್ಕೆ ಪುತ್ತೂರಿನ ಸತ್ತಿಕಲ್ಲಿಗೆ ಬಂದು ನೋಡಿದಾಗ ಬೈಕ್ ಪಾರ್ಕಿಂಗ್ ಸ್ಥಳದಲ್ಲಿರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ, ಯಾರೋ ವಾಹನ ಕಳ್ಳರು ಬೈಕ್‌ನ್ನು ಕಳವು ಮಾಡಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.













