25.9 C
ಪುತ್ತೂರು, ಬೆಳ್ತಂಗಡಿ
October 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು ಸ.ಹಿ. ಪ್ರಾ. ಹಾಗೂ ಪ್ರೌಢಶಾಲೆಯಲ್ಲಿ “ಗುರುವಂದನಾ ಮತ್ತು ಸ್ನೇಹ ಸಮ್ಮಿಲನ” ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ನಾವೂರು : ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಾವೂರು ಸಂಸ್ಥೆಯ 2009-2010ನೇ (2009-2010) ಸಾಲಿನ ಬ್ಯಾಚ್ ವಿದ್ಯಾರ್ಥಿಗಳು ಆಯೋಜಿಸಲಿರುವ “ಗುರುವಂದನಾ ಮತ್ತು ಸ್ನೇಹ ಸಮ್ಮಿಲನ” ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಬಿಡುಗಡೆ ಹಾಗೂ ಉದ್ಘಾಟನಾ ಸಮಾರಂಭವು ಶಾಲಾ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. 

16 ವರ್ಷಗಳ ಸುದೀರ್ಘ ಅವಧಿಯ ನಂತರ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ತಮಗೆ ಅಕ್ಷರ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸುವ ಹಾಗೂ ಬಾಲ್ಯದ ನೆನಪುಗಳನ್ನು ಮೆಲಕು ಹಾಕುವ ಉದ್ದೇಶದಿಂದ ಈ ಸಮ್ಮಿಲನವನ್ನು ಹಮ್ಮಿಕೊಳ್ಳಲಾಗಿದೆ. 
ಈ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್‌ಡಿಎಮ್‌ಸಿ (SDMC) ಅಧ್ಯಕ್ಷ ಡಾ. ಪ್ರದೀಪ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ರೋಹಿಣಿ , ಪ್ರೌಢಶಾಲೆಯ ಉಪಾಧ್ಯಕ್ಷ ಉಮೇಶ್ ಪ್ರಭು ಹಾಗೂ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಗಣೇಶ್ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಭಿತ್ತಿಪತ್ರವನ್ನು ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ಗೌರವಾನ್ವಿತ ಶಿಕ್ಷಕ-ಶಿಕ್ಷಕಿಯರು, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ 2009-10ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು. 

Related posts

ಏ.23-24: ಇಚ್ಚಿಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ-ಗುರುಮಂದಿರ ಲೋಕಾರ್ಪಣೆ

Suddi Udaya

ಇಂದಿನಿಂದ ಐಪಿಎಲ್ ಕ್ರಿಕೆಟ್ ಧಮಾಕಾ

Suddi Udaya

ನಾವೂರು ಆರೋಗ್ಯ ಕ್ಲಿನಿಕ್‌ಗೆ ದುಷ್ಕರ್ಮಿಗಳಿಂದ ಬೆಂಕಿ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಖಂಡನೆ

Suddi Udaya

ತೋಟತ್ತಾಡಿಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

Suddi Udaya

ಕೊಯ್ಯೂರು: ಪೆರುಂಬುಡೇಲು ನಿವಾಸಿ ನಾರಾಯಣ ಮಡಿವಾಳ ನಿಧನ

Suddi Udaya

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿ ಹೋರಾಟ ಸಮಿತಿಯಿಂದ ಶಾಸಕ ಹರೀಶ್ ಪೂಂಜರ ಭೇಟಿ, ಮನವಿ ಸಲ್ಲಿಕೆ

Suddi Udaya
error: Content is protected !!