ಬೆಳ್ತಂಗಡಿ: ಕರ್ನಾಟಕ ಗಮಕ ಕಲಾ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆ, ಉಜಿರೆ ಇವರ ಆಶ್ರಯದಲ್ಲಿ ಜಿಲ್ಲಾ ಗಮಕ ಸಮ್ಮೇಳನವನ್ನು ಅ.24ರಂದು ಶ್ರೀ ಧರ್ಮಸ್ಥಳ

ಮಂಜುನಾಥೇಶ್ವರ ಸೆಕೆಂಡರಿ ಶಾಲೆ, ಉಜಿರೆಯಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ತೋಟಕಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಕಾಸರಗೋಡಿನ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.


ದ. ಕ. ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಪ್ರೊ.ಮಧೂರು ಮೋಹನ ಕಲ್ಲೂರಾಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ತಾಲೂಕಿನ ಹಿರಿಯ ಗಮಕಿಗಳಾದ ಗಮಕಿ ಜಯರಾಮ ಕುದ್ರೆತ್ತಾಯರು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಪೂರ್ವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಸಮ್ಮೇಳನದ ಸ್ಮರಣ ಸಕಚಿಕೆಯಾದ “ಗಮಕ ಜನಾರ್ದನ”ವನ್ನು ಅನಾವರಣಗೊಳಿಸಿದರು. ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ಸಾಹಿತಿ ಮುಳಿಯ ಶಂಕರ ಭಟ್, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ


ಪ್ರದೀಪ್ ಕುಮಾರ್ ಕಲ್ಕೂರ, ಮೂಡಬಿದ್ರೆ ತಾಲೂಕಿನ ಗಮಕ ಕಲಾ ಪರಿಷತ್ತಿನ ಗೌರವಾಧ್ಯಕ್ಷ ಶ್ರೀಪತಿ ಭಟ್, ಮೂಡಬಿದ್ರೆ, ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶಶಿಧರ ಜಿ.ಎಸ್. ಮತ್ತು ಎಸ್‌ಡಿಎಂ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕರಾದ ವಿದ್ಯಾ ಕಿರಣ್ ಭಾಗವಹಿಸಿದ್ದಾರೆ.
ಕಲ್ಕೂರ ಪ್ರತಿಷ್ಠಾನ ಪ್ರಾಯೋಜಿತ ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿಯನ್ನು ಗಮಕ ಕ್ಷೇತ್ರಕ್ಕೆ ವಿಶೇಷ ಕೊಡುಗೆಯನ್ನು ನೀಡಿದ ಕೆ. ಸುರೇಶ್ ಕುದ್ರೆಂತಾಯ, ಪ್ರೊ. ವೇದವ್ಯಾಸ ರಾಮಕುಂಜ, ಹರಿದಾಸ ತೋನ್ಸೆ ಪುಷ್ಕಳ ಕುಮಾರ್, ಕೆಯ್ಯೂರು ನಾರಾಯಣ ಭಟ್, ಗಮಕಿ ಸುವರ್ಣ ಕುಮಾರಿ ಕೆ.ಆರ್. ಗಮಕಿ ಎ.ಡಿ ಸುರೇಶ್‌ರಿಗೆ ನೀಡಿ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು.
ಎ.ಡಿಸುರೇಶ್‌ರ ಶಿಷ್ಯರ ಪ್ರಾರ್ಥನೆ ಬಳಿಕ ಕ.ಗ.ಕ.ಪ ಬೆಳ್ತಂಗಡಿ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಸ್ವಾಗತಿಸಿದರು.ಕಿರಿಯಾಡಿ ಶಿಕ್ಷಕಿ ಶ್ರೀಮತಿ ರಾಜೇಶ್ವರಿ ಸವಾ೯ಧ್ಯಕ್ಷರನ್ನು ಪರಿಚಯಿಸಿದರು.ಶ್ರೀಮತಿ ವಿದ್ಯಾ ಕಿರಣ್ ವಂದಿಸಿದರು. ಎಸ್ ಡಿ.ಎಂ ಸನಿವಾಸ ಪಿ.ಯು ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಕಾಯ೯ಕ್ರಮ ನಿರೂಪಿಸಿದರು.
ಅ.25ರಂದು ಅಪರಾಹ್ನ 3:30ಗೆ ಕರ್ನಾಟಕ ಕಲಾ ಶ್ರೀಮಧೂರು ಮೋಹನ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ಗಮಕಲಾಪರಿಷತ್ ಬೆಂಗಳೂರು ಇಲ್ಲಿಯ ನಿಕಟ ಪೂರ್ವ ರಾಜ್ಯ ಕಾರ್ಯದರ್ಶಿಗಳಾದ ದಕ್ಷಿಣಾ ಮೂರ್ತಿಯವರು ಸಮಾರೋಪ ಭಾಷಣ ಮಾಡಲಿದ್ದಾರೆ. ಡಿ ಹರ್ಷೇಂದ್ರ ಕುಮಾರ್ ಧರ್ಮಸ್ಥಳ, ಹರೀಶ್ ಕುಮಾರ್ ಮೆಸ್ಕಾಂ ಅಧ್ಯಕ್ಷರು, ಡಾ ಸತೀಶ್ಚಂದ್ರ ಎಸ್. ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರರಾದ ಶರತ್ ಕೃಷ್ಣ ಪಡುವೆಟ್ನಾಯ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕೆ ಪ್ರತಾಪ್ ಸಿಂಹ ನಾಯಕ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶ್ರೀನಾಥ್ ಎಂಪಿ., ಪಾವಂಜೆ ಹರಿದಾಸ ಲಕ್ಷ್ಮಿ ನಾರ್ಣಪ್ಪಯ್ಯ ಪ್ರತಿಷ್ಠಾನದ ಪ್ರದೀಪ್ ಕುಮಾರ ಕಲ್ಕೂರ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ರಾಜಶ್ರೀ ಬಿ. ಶ್ರೀಶ ಮುಚ್ಚಿನ್ನಾಯ, ಭುಜಬಲಿ ಮತ್ತಿತರರು ಉಪಸ್ಥಿತರಿರುವರು.













