ಉರುವಾಲು: ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಶಾರದೋತ್ಸವದ ಸಂದರ್ಭದಲ್ಲಿ, ಟೀಮ್ ನವಕೇಸರಿ ಮಲೆಂಗಲ್ಲು ಇದರ ವತಿಯಿಂದ ಸಾರ್ವಜನಿಕರ ಸೇವೆಗಾಗಿ ಆಂಬುಲೆನ್ಸ್ ಅನ್ನು ಲೋಕಾರ್ಪಣೆಗೊಳಿಸಲಾಯಿತು.
ಸಮಾಜದ ಆರೋಗ್ಯ ಮತ್ತು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನೆರವಾಗುವ ಸದುದ್ದೇಶದಿಂದ ನವಕೇಸರಿ ಸಂಘವು ಕೈಗೊಂಡ ಈ ಸೇವಾ ಕಾರ್ಯವು ಸಂಘದ ಸಾಮಾಜಿಕ ಬದ್ಧತೆ ಹಾಗೂ ಜನಸೇವೆಯ ಸಂಕಲ್ಪಕ್ಕೆ ಸಾಕ್ಷಿಯಾಯಿತು.
ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಚಾಲಕರು, ಪುತ್ತೂರು ಜಿಲ್ಲಾ ಸಂಘಚಾಲಕರು ಹಾಗೂ ಮುಂಡಾಜೆ ಶ್ರೀ ರಾಮ ಶಾಲೆಯ ಸಂಚಾಲಕ ವಿನಯ ಚಂದ್ರ ಉಜಿರೆ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಊರಿನ ಗಣ್ಯರು, ನಾಗರಿಕರು, ಟೀಮ್ ನವಕೇಸರಿ ಮಲೆಂಗಲ್ಲು ಸರ್ವ ಸದಸ್ಯರು, ಸಾವರ್ಕರ್ ಬ್ರಿಗೇಡ್ ಉರುವಾಲು ಘಟಕದ ಸದಸ್ಯರು ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪದ್ಮುಂಜ ಘಟಕದ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.













