ಬೆಳ್ತಂಗಡಿ : ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಬೆಳ್ತಂಗಡಿ ಇದರ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಅ. 24 ರಂದು ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಬೆಳ್ತಂಗಡಿ ಶಾಖೆಯಲ್ಲಿ ನೆರವೇರಿತು.
ಉದ್ಘಾಟನೆಯನ್ನು ಬೆಳ್ತಂಗಡಿ ಗುರುದೇವ ವಿವಿದೋದ್ದೇಶ ಸಹಕಾರ ಸಂಘ ಅಧ್ಯಕ್ಷ ಹಿರಿಯ ನ್ಯಾಯವಾದಿ ಭಗೀರಥ ಜಿ ನೆರವೇರಿಸಿದರು.
ಉಡುಪಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ರೀಜನಲ್ ಪ್ರಾಡಕ್ಟ್ ಹೆಡ್ ಅವಿನಾಶ್ ಹಾಸ್ಪಾರೆ ಪ್ರಾಸ್ತಾವಿಕ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಟೆಂಪೋ ಚಾಲಕ ಮತ್ತು ಮಾಲಕರ ಸಂಘ ಅಧ್ಯಕ್ಷ ಗಣೇಶ್ ಪ್ರಸಾದ್ , ಬೆಳ್ತಂಗಡಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಅಧ್ಯಕ್ಷ ಅಬ್ದುಲ್ ರಜಾಕ್, ಬೆಳ್ತಂಗಡಿ ಟೀಮ್ ಲೀಡರ್ ಭಾರತ್ ಆಟೋ ಕಾರ್ಸ್ ಮಂದಾರ ಉಪಸ್ಥಿತರಿದ್ದರು.
ಸುಮಾರು 13 ಲಕ್ಷ ವಿದ್ಯಾರ್ಥಿ ವೇತನವನ್ನು 300 ವಿದ್ಯಾರ್ಥಿಗಳಿಗೆ, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ 4,000 ರೂ. ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ 4,500 ರೂ. ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ – ನೀಡಲಾಯಿತು.
ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಶಾಖಾಧಿಕಾರಿ ಶರತ್ ಕುಮಾರ್ , ಕಲೆಕ್ಷನ್ ಮ್ಯಾನೇಜರ್ ರಿಜೇಶ್ ಕುಮಾರ್ , ಅಕ್ಷಯ್ , ಆನಂದ್ ನಾಯ್ಕ್ , ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಶಿಲ್ಪ ಸ್ವಾಗತಿಸಿದರು.













