25.1 C
ಪುತ್ತೂರು, ಬೆಳ್ತಂಗಡಿ
October 24, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಧಾರ್ಮಿಕವರದಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ: ‘ಧಮ೯ಸ್ಥಳ ಶ್ರೀ ಮಂಜುನಾಥೇಶ್ವರ ಸಂಶೋಧನಾ ಸಂಸ್ಕೃತಿ ಪ್ರತಿಷ್ಠಾನದ ಪ್ರಕಟಿತ ಮುಹೂರ್ತಪದವೀ’ ಗ್ರಂಥ ಲೋಕಾರ್ಪಣೆ: ಉಜಿರೆಯಲ್ಲಿ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ಹಾಗೂ ನಸಿ೯ಂಗ್ ಕಾಲೇಜು ಆರಂಭ: ಡಾ.ಹೆಗ್ಗಡೆ

ಧರ್ಮಸ್ಥಳ: ಶ್ರೀ ಕ್ಷೇತ್ರದ ಧರ್ಮಾಧಿಕಾರಿ, ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವದ ಸಭಾ ಕಾರ್ಯಕ್ರಮಅ.24ರಂದು ಶನಿವಾರ ಶ್ರೀ ಕ್ಷೇತ್ರದ ಮಹೋತ್ಸವ ಸಭಾಭವನದಲ್ಲಿ ಅತ್ಯಂತ ಭಕ್ತಿ-ಗೌರವಗಳೊಂದಿಗೆ ಸಂಪನ್ನಗೊಂಡಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ಭಕ್ತರಿಂದ ಗೌರವ ಸ್ವೀಕರಿಸಿ ಮಾತನಾಡಿ,ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ದಾನ ಪರಂಪರೆ ಮುಂದುವರೆಯಲಿದ್ದು,ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹಾಗ ಕರ್ನಾಟಕ ಸರ್ಕಾರದ ಅನುಮತಿಯೊಂದಿಗೆ ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಪಿಟಿಯನ್ನು (ಬ್ಯಾಚುಲರ ಆಫ್ ಫಿಸಿಯೋಥೆರಪಿ) ಹಾಗೂ ನಸಿ೯ಂಗ್ ಕಾಲೇಜು 2027-28ನೇ ಸಾಲಿನಲ್ಲಿ ಹೊಸದಾಗಿಪ್ರಾರಂಭಿಸಲಾಗುವುದು. ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮೂಲಕ ಹಣಕಾಸಿನ ವ್ಯವಹಾರ ಸುಲಭವಾಗಿ ಮಾಡಲು ಎ.ಟಿ.ಎಂ‌ ವ್ಯವಸ್ಥೆ, ಉಜಿರೆಯಲ್ಲಿ 300 ವಿದ್ಯಾರ್ಥಿ, ವಿದ್ಯಾರ್ಥಿನಿಯರ ಎಸ್.ಡಿ.ಎಂ. ಕ್ರೀಡಾ ವಸತಿ ನಿಲಯವನ್ನು ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ನಿಮಾ೯ಣ,ಆಸ್ಪತ್ರೆಗಳ ಹಳೇ ಕಟ್ಟಡಗಳ ನವೀಕರಣ ಸೇರಿದಂತೆ ಹಲವುಹೊಸ ಯೋಜನೆ ಪ್ರಕಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಘವೇಂದ್ರ ಶ್ರೀನಿವಾಸ್ ಭಟ್ ಅವರು ಶುಭಾಶಂಸನೆ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ ಪೂಜ್ಯ ಖಾವಂದರ ಜನಸೇವೆ ಹಾಗೂ ಧಾರ್ಮಿಕ ಚಿಂತನೆಗಳು ಜಗತ್ತಿಗೆ ಮಾದರಿಯಾಗಿದ್ದು, ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರವಾಗಿರಲಿ ದೊರೆಯಲಿ ಎಂದು ಶುಭ ಹಾರೈಸಿದರು.

ನಿವೃತ್ತ ನೌಕರರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸಂಸೆಯ ಹೊಸನೆಲ ಎಸ್ಟೇಟ್‌ನ ಪ್ರಬಂಧಕರಾದ ಶ್ರೀವರ್ಮ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತುಗ್ರಂಥ ಬಿಡುಗಡೆ:ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ವತಿಯಿಂದ ಸಿದ್ಧಪಡಿಸಲಾದ ಮಹತ್ವದ ಕೃತಿ “ಮುಹೂರ್ತಪದವೀ (ಸಟೀಕಾ)” ಕೃತಿಯನ್ನು ಲೋಕಾರ್ಪಣೆಗೊಳಿ ಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಮತಿ ಹೇಮಾವತಿ ವೀ. ಹೆಗ್ಗಡೆ, ಡಿ.ಹಷೇಂದ್ರ‌ಕುಮಾರ್, ಶ್ರೀ ಮತಿ ಶ್ರದ್ದಾ ಅಮಿತ್, ಸುಪ್ರೀಯ ಹರ್ಷೇಂದ್ರ ಕುಮಾರ್, ಅಮಿತ್ ಕುಮಾರ್ ಹಾಗೂ ಕುಟುಂಬಸ್ಥರು, ಕ್ಷೇತ್ರದ ಸಿಬ್ಬಂದಿಗಳು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. ವಸಂತ ಮಂಜಿತ್ತಾಯ ಹಾಗೂ ಮಣೆಗಾರರ ಬಳಗದವರಿಂದವೇದಘೋಷದ ಬಳಿಕ ಉಜಿರೆಯ ಎಸ್.ಡಿ.ಎಂ.ಇ. ಸೊಸೈಟಿಯ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್. ಅವರು ಆಗಮಿಸಿದ ಸರ್ವ ಗಣ್ಯರನ್ನು ಮತ್ತು ಭಕ್ತಾದಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಿತಿಯ ಸಂಚಾಲಕರಾದ ಲಕ್ಷ್ಮೀನಾರಾಯಣ ರಾವ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ಪದ್ಮಶ್ರೀ ಆರ್. ಜೈನ್ ಮತ್ತು ಶ್ರೀಮತಿ ದಿವ್ಯ ಅವರು ಅತ್ಯಂತ ನಿರೂಪಿಸಿದರು.

Related posts

ಮಾ.1: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಎಲ್‌.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ವಚ್ಚತಾ ಅಭಿಯಾನ:

Suddi Udaya

ಡಿ.16: ಮರೋಡಿ ಶಾರದಾಂಬ ಪ್ಲೇಯರ್ಸ್ ಆಶ್ರಯದಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ, “ಸ್ಪಂದನಾ ಟ್ರೋಫಿ-2023”

Suddi Udaya

ಕೋರಂ ಕೊರತೆ ಹಾಗೂ ಅಧಿಕಾರಿಗಳು ಲೇಟಾಗಿ ಭಾಗವಹಿಸಿದ್ದರಿಂದ ನೆರಿಯ ಗ್ರಾಮಸಭೆ ಮುಂದೂಡಿಕೆ

Suddi Udaya

ಸುಲ್ಕೇರಿ: 43ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಗುರುರಾಜ್ ಗುರಿಪಳ್ಳ, ಕಾರ್ಯದರ್ಶಿಯಾಗಿ ಮಧುರ ರಾಘವ ಆಯ್ಕೆ

Suddi Udaya
error: Content is protected !!