34.3 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಡನೀರು ಮಠದ ಸ್ವಾಮೀಜಿಗಳು ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿಗೆ ಭೇಟಿ

ಉಜಿರೆ: ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳು ಜಗದ್ಗುರು ಶಂಕರಾಚಾರ್ಯ ಶ್ರೀ ತೋಟಕಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ, ಕಾಸರಗೋಡು ಇಲ್ಲಿನ ಸ್ವಾಮೀಜಿಗಳು ಅ.24 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪ್ರಾಧ್ಯಾಪಕ ಹಾಗೂ ತರಗತಿ ಪ್ರತಿನಿಧಿಗಳಿಗೆ ಆಶೀರ್ವದಿಸಿದರು.

ಆಶೀರ್ವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಲೇಜಿನ ಮೌಲ್ಯಯುತ ಶಿಕ್ಷಣ ನೀತಿಯನ್ನು ಪ್ರಶಂಶಿಸಿದರು. ವೀರೇಂದ್ರ ಹೆಗ್ಗಡೆಯವರ ಕಾರ್ಯ ವೈಖರಿಗಳನ್ನು ನೆನಪಿಸುತ್ತಾ ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಧನ್ಯರು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪರಮಪೂಜ್ಯ ಸ್ವಾಮೀಜಿಗಳನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ ಸ್ವಾಗತಿಸಿ, ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ ವಂದಿಸಿದರು. ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ನಿಹಾರಿಕಾ ಜಿ ಎನ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಪಹಲ್ಗಾಮ್ ಪೈಶಾಚಿಕ ಕೃತ್ಯ ಹೇಯ ಮತ್ತು ಖಂಡನೀಯ : ನಿವೃತ್ತ ಎಸ್ಪಿ ಪೀತಾಂಬರ ಹೆರಾಜೆ

Suddi Udaya

ಕಲ್ಮಂಜ : ಮದ್ಮಲ್‌ ಕಟ್ಟೆಯಲ್ಲಿ ನಿಲ್ಲಿಸಿದ ರೂ.65 ಸಾವಿರ ಮೌಲ್ಯದ ಮೋಟಾರ್‌ ಸೈಕಲ್‌ ಕಳವು

Suddi Udaya

ಗುರುವಾಯನಕೆರೆ ವಲಯದ ಪವಿತ್ರ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ದಿನ ಕಾರ್ಯಕ್ರಮ

Suddi Udaya

ಮೂಲಭೂತ ಸೌಕರ್ಯ ವಂಚಿತ ಪುಳಿತ್ತಡಿ, ಎರ್ಮಲೆ ಪ್ರದೇಶ ಆದಿವಾಸಿ ಕುಟುಂಬಗಳಿಂದ ನೋಟಾ ಅಭಿಯಾನಕ್ಕೆ ನಿರ್ಧಾರ

Suddi Udaya

ಆ.21 : ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಉಜಿರೆ ಭಜನಾ ಪರಿಷತ್ತಿನ ತಾಲೂಕು ಹಾಗೂ ವಲಯ ಪದಾಧಿಕಾರಿಗಳ ಸಭೆ

Suddi Udaya
error: Content is protected !!