25.2 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಜಾತ್ರೋತ್ಸವದ ಉಳಿಕೆ ಹಣದಲ್ಲಿ ಕ್ಷೇತ್ರದ ದೈವಗಳಿಗೆ ಆಭರಣ ಸಮರ್ಪಣೆ

ಕಲ್ಮಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಪಜೀರಡ್ಕದಲ್ಲಿ 2026ರ ಫೆಬ್ರವರಿ ತಿಂಗಳಲ್ಲಿ ನಡೆದ ಧ್ವಜಸ್ಥಂಭ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವದ ಖರ್ಚು ವೆಚ್ಚಗಳ ಬಳಿಕ ಉಳಿಕೆಯಾದ ಹಣದಲ್ಲಿ ಕ್ಷೇತ್ರದ ದೈವಗಳಿಗೆ (ಪದ್ದಾಯಿ) ಆಭರಣಗಳನ್ನು ಖರೀದಿಸಿ ದೇವಸ್ಥಾನದ ಆಡಳಿತ ಮಂಡಳಿಯ ಮೂಲಕ ಕ್ಷೇತ್ರಕ್ಕೆ ಸಮರ್ಪಿಸಲಾಯಿತು.

ಜಾತ್ರೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳ ಸಹಕಾರ ಹಾಗೂ ಸಮಿತಿಯ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಉಳಿದ ಹಣವನ್ನು ಕ್ಷೇತ್ರದ ದೈವಗಳ ಆಭರಣ ಖರೀದಿಗೆ ವಿನಿಯೋಗಿಸಿರುವುದು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸುನಿಲ್ ಕನ್ಯಾಡಿ, ಉಪಾಧ್ಯಕ್ಷ ಜಯಂತ್ ರಾವ್ ಕೋತ್ತಳಿಕೆ, ಕಾರ್ಯದರ್ಶಿ ದಿನೇಶ್ ಗೌಡ ಮೂಡಾಯಿಬೆಟ್ಟು, ಕೋಶಾಧಿಕಾರಿ ಮಂಜುನಾಥ ಗುಡಿಗಾರ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಗೌಡ ಹುಂಕ್ರೋಟ್ಟು, ದೇಸಿ ಕೇಂದ್ರ ಧರ್ಮೋತ್ಥಾನ ಟ್ರಸ್ಟ್‌ನ ಅಧ್ಯಕ್ಷ ನವೀನ್ ಪ್ರಕಾಶ್, ಪ್ರದೀಪ್ ಚಿಪ್ಳುಣ್ಕರ್, ಶೇಖರ್ ಟಿ., ಶಶಿಧರ್ ಎಂ. ಕಲ್ಮಂಜ, ಯತೀಶ್ ಲಿಂಗಾಯಿತ, ಅರುಣ್ ಗುತ್ತು ಮನೆ, ಮೋನಪ್ಪ. ಟಿ, ರಮಾನಂದ ಪೂಜಾರಿ ಗಾಡಿಕೊಟ್ಟಿಗೆ, ಯೋಗೀಶ್ ಹುಂಕ್ರೋಟ್ಟು, ಗೋಪಾಲಕೃಷ್ಣ ಗುತ್ತು ಮನೆ, ಯಶವಂತ ಗುಡಿಗಾರ್, ಚಂದ್ರಶೇಖರ ಗೌಡ ಗುಲ್ಲೋಡಿ, ಸತೀಶ್ ಗುಡಿಗಾರ್, ಸುಂದರೇಶ್ ಪಜೀರಡ್ಕ, ದಿವಾಕರ ಗೌಡ ಕಲ್ಲಲಾಯಿ, ದೇವಸ್ಥಾನದ ಸಿಬ್ಬಂದಿ ಅರುಣಾ ಪಜೀರಡ್ಕ ಹಾಗೂ ಸುರೇಶ್ ಗೌಡ ಉಪಸ್ಥಿತರಿದ್ದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಾಧಾಕೃಷ್ಣ ಗೌಡ, ಸದಸ್ಯರಾದ ಗಂಗಾಧರ ಗೌಡ ಕರೀಂಬಿತ್ತಿಲ್, ಪ್ರವೀಣ್ ಪೂಜಾರಿ ಆರ್ಲ, ಮಹಾಲಕ್ಷ್ಮಿ ಹೊಳ್ಳ, ರಘುಚಂದ್ರ ಗುಡಿಗಾರ್, ಅರ್ಚಕರಾದ ರಾಜೇಶ್ ಹೊಳ್ಳ, ಪ್ರಕಾಶ್ ಭಟ್ ಸೇರಿದಂತೆ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ, ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ

Suddi Udaya

ಮದ್ದಡ್ಕ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಪಲ್ಟಿ

Suddi Udaya

ಮುಗೇರಡ್ಕ ದೈವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಮಚ್ಚಿನ: ಪೆರ್ನಡ್ಕ ನಿವಾಸಿ ದುಗ್ಗಪ್ಪ ಮೂಲ್ಯ ನಿಧನ

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ಬಾಲಕರ ಪುಟ್ ಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ರೈತ ಸದಸ್ಯರಿಗೆ ಉಚಿತ ತರಕಾರಿ ಬೀಜ ವಿತರಣಾ ಕಾರ್ಯಕ್ರಮ

Suddi Udaya
error: Content is protected !!