34.3 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ. ಬಿ.ಎಡ್. ಹಾಗೂ ಡಿ.ಎಡ್. ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆ(ಡಿ.ಎಡ್.) ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್) ದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ಪ್ರಾಂಶುಪಾಲ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ರಾಮಾಯಣವು ಭಾರತೀಯರ ಜೀವನ ಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅದ್ಭುತ ಮಹಾಕಾವ್ಯ. ನಮ್ಮ ಬದುಕಿನ ಕೈಗನ್ನಡಿಯಂತಿದ್ದು ನಾವು ಮೌಲ್ಯಗಳನ್ನು ಅಳಡಿಸಿಕೊಂಡು ಹೇಗೆ ಬದುಕಬೇಕೆಂಬುದನ್ನು ಸಾರಿ ಹೇಳುವ ಬದುಕಿನ ಗ್ರಂಥವಾಗಿದೆ. ಜಗದ ಕವಿ ಮಹರ್ಷಿ ವಾಲ್ಮೀಕಿಯ ಪೂರ್ವ ವೃತ್ತಾಂತ ನೈಜತೆಗಿಂತ ದಂತಕಥೆಯಾಗಿ ಪುರಾಣವಾಗಿ ಹೇಳುವುದನ್ನು ಇಂದಿಗೂ ಕಾಣುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ಆದಿತ್ಯ ಬಿ ಆರ್ ಮಾತನಾಡುತ್ತಾ ವಾಲ್ಮೀಕಿ ಬರೆದ ರಾಮಾಯಣದ ಆಧಾರದ ಮೇಲೆ ಹಲವಾರು ಭಾಷೆಗಳಲ್ಲಿ ಸಾಹಿತ್ಯ ಪ್ರಕಾರಗಳು ರಚನೆಯಾಗಿರುವುದನ್ನು ಕಾಣುತ್ತೇವೆ. ವಾಲ್ಮೀಕಿಯ ಕಾವ್ಯ ಇತರರಿಗೆ ಸ್ಫೂರ್ತಿಯಾಗಿದ್ದು ಹಲವಾರು ಸಾಹಿತಿಗಳು ತಮ್ಮ ಅನುಭವ, ಜ್ಞಾನದ ಆಧಾರದ ಮೇಲೆ ರಾಮಾಯಣವನ್ನು ಕಾಲಾನುಘಟ್ಟಕ್ಕೆ ಅನುಗುಣವಾಗಿ ತಮ್ಮದೇ ದೃಷ್ಠಿಕೋನದಲ್ಲಿ ಸಾಹಿತ್ಯವನ್ನು ರಚಿಸಿದ್ದಾರೆ. ಕುವೆಂಪು ರಚಿಸಿದ ಶ್ರೀ ರಾಮಾಯಣದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಜೈನ ಕವಿ ನಾಗಚಂದ್ರ ರಚಿಸಿದ ಪಂಪ ರಾಮಾಯಣ, ಹದಿನಾರನೇಯ ಶತಮಾನದ ಕವಿ ಕುಮಾರ ವಾಲ್ಮೀಕಿಯ ತೊರವೆ ರಾಮಾಯಣದಲ್ಲಿ ಕಂಡು ಬರುವ ಅನೇಕ ಉದಾಹರಣೆಗಳು, ನಿದರ್ಶನಗಳು ಹಾಗೂ ಉಪಕಥೆಗಳನ್ನು ಹೇಳುವುದರ ಮೂಲಕ ಕಾವ್ಯದ ಸಾರವನ್ನು ಮನಮುಟ್ಟುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಮುಖ್ಯ ಅತಿಥಿಗಳು ಹಾಗೂ ಡಿ.ಎಡ್., ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿಯರಿಂದ ಮಹರ್ಷಿ ವಾಲ್ಮಿಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.


ಪ್ರಶಿಕ್ಷಣಾರ್ಥಿಗಳಾದ ಸುಕನ್ಯ ಮತ್ತು ಬಳಗ ಪ್ರಾರ್ಥಿಸಿ, ಜಯಂತಿ ಸ್ವಾಗತಿಸಿ, ಯಶವಂತ್ ಆರ್ ಅತಿಥಿ ಪರಿಚಯಿಸಿ, ಭುವನೇಶ್ವರಿ ವಂದಿಸಿ, ಚೈತ್ರ ಹೂಗಾರ್ ನಿರೂಪಿಸಿದರು.

Related posts

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

Suddi Udaya

ನಾಳ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ: ಸಂಘದ ಸದಸ್ಯರಿಗೆ ಶೇ. 13 ಡಿವಿಡೆಂಟ್ ಘೋಷಣೆ

Suddi Udaya

ಖೇಲೋ ಇಂಡಿಯಾ ವೇಟ್  ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ: ನಿಡ್ಲೆಯ ಪ್ರತ್ಯುಶ್ ರವರಿಗೆ ಕಂಚಿನ ಪದಕ

Suddi Udaya

ಗೀತೆ ಜತೆ ಸಾಹಿತ್ಯ ಸಾಂಗತ್ಯ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಉಪನ್ಯಾಸ ಮಾಲಿಕೆಯ ಮೂರನೆಯ ಅಧ್ಯಾಯ

Suddi Udaya

ಬೆಳ್ತಂಗಡಿ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದಲ್ಲಿ ನಿರಂತರ ವಿವಿಧ ಭಜನಾ ತಂಡದಿಂದ ಭಜನಾ ಸೇವೆ

Suddi Udaya

ಉಜಿರೆಯಲ್ಲಿ ಕೇರಳ ಸಂಪ್ರದಾಯ ವಿಷು ಕಣಿ ಉತ್ಸವ, ಸಾವಿರಾರು ಮಂದಿ ಭಾಗಿ

Suddi Udaya
error: Content is protected !!