September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಾಮ ಸಭೆ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತದ 2023-24 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾಪಂ ಅಧ್ಯಕ್ಷೆ ವಿಮಲ ರವರ ಅಧ್ಯಕ್ಷತೆಯಲ್ಲಿ, ಧರ್ಮಸ್ಥಳ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಮಾ.1 ರಂದು ನಡೆಯಿತು.
ನೋಡೆಲ್ ಅಧಿಕಾರಿಯಾಗಿ ಕೊಕ್ಕಡ ಹೋಬಳಿ ಕೇಂದ್ರದ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಗ್ರಾಮಸಭೆ ನಡೆಸಿಕೊಟ್ಟರು.

ಈ ವೇಳೆ ಇಲಾಖಾ ಅಧಿಕಾರಿಗಳು, ಆಶಾಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದು ಮಾಹಿತಿ ನೀಡಿದರು. ಗ್ರಾ.ಪಂ. ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾ.ಪಂ. ಸಿಬ್ಬಂದಿಗಳು ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಗ್ರಾಮಸಭೆಯಲ್ಲಿ ಭಾಗವಹಿಸಿದರು.

ಗ್ರಾಮ ಸಭೆ ವರದಿ ಹಾಗೂ ಅನುಪಾಲನಾ ವರದಿಯನ್ನು ಗುಮಾಸ್ತ ದೇವಿಪ್ರಸಾದ್ ಬೊಳ್ಮ ಮಂಡಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಸ್ವಾಗತಿಸಿ, ಜಮಾ ಖರ್ಚು ಹಾಗೂ ವಾರ್ಡು ಸಭೆಯ ವರದಿಯನ್ನು ಪಂ. ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಮಂಡಿಸಿದರು.

Related posts

ಶ್ರೀ ಶಾರದಾಂಭ ಭಜನಾ ಮಂಡಳಿಯಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದ ಸಂಜನಾ ಪೈ ಗೆ ಸನ್ಮಾನ

Suddi Udaya

ಕರಾಯ: ಸೈಕಲ್ ರಿಪೇರಿ ಮಾಡಿಸಿಕೊಟ್ಟಿಲ್ಲ ಎಂದು ನೇಣಿಗೆ ಶರಣಾದ ಹೈಸ್ಕೂಲ್ ವಿದ್ಯಾರ್ಥಿ

Suddi Udaya

ಪುಂಜಾಲಕಟ್ಟೆಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಶವ ಪತ್ತೆ: ವಾರೀಸುದಾರರು ಪತ್ತೆಗೆ ಮನವಿ

Suddi Udaya

ಪಡಂಗಡಿಯ ಮನೆಯೊಂದರಿಂದ ರೂ.25 ಸಾವಿರ ನಗದು ಹಾಗೂ ರೂ.9.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಬಂದಾರು ಸ.ಹಿ. ಪ್ರಾ. ಶಾಲೆಯಲ್ಲಿ ಬೂತ್ ಸಂಖ್ಯೆ 217ರಲ್ಲಿ ತ್ರಾಂತಿಕ ದೋಷದಿಂದ ಮತದಾನ ಸ್ಥಗಿತ

Suddi Udaya
error: Content is protected !!