31.8 C
ಪುತ್ತೂರು, ಬೆಳ್ತಂಗಡಿ
October 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಸಂಸ್ಕೃತ ಸಂಘದ ವತಿಯಿಂದ ವಾಲ್ಮೀಕಿ ಜಯಂತಿ

ಉಜಿರೆ: ಭಾರತದ ಜ್ಞಾನಪರಂಪರೆಗೆ ಸರಿಸಾಟಿಯಾದ ದೇಶವೇ ಇನ್ನೊಂದಿಲ್ಲ. ಪ್ರಾಚೀನ ಋಷಿಗಳಿಂದ ಇಲ್ಲಿಯ ವರೆಗೆ ಜ್ಞಾನ ಹಾಗೂ ವಿಜ್ಞಾನದಲ್ಲಿ ಸಾಧಿಸದೇ ಇರುವ ವಿಷಯ ಇಲ್ಲ. ವಾಲ್ಮೀಕಿ ಋಷಿಗಳಿಂದ ನಾವು ತಿಳಿಯಬೇಕಾದದ್ದು ಬಹಳಷ್ಟಿವೆ. ಸಾಮಾನ್ಯನೂ ಕೂಡ ಒಬ್ಬ ಋಷಿಯಾಗಿ ಕವಿಯಾಗಿ ಬೆಳೆಯಲು ಸಾಧ್ಯ ಎಂದು ತೋರಿಸಿಕೊಟ್ಟವರು ಅವರು. ಇವರ ರಾಮಾಯಣ ಕಾವ್ಯದಿಂದ ನೂರಾರು ಇತರ ರಾಮಾಯಣ ಗ್ರಂಥಗಳು ಬರೆಯಲ್ಪಟ್ಟಿವೆ. ಇದರಿಂದ ನೂರಾರು ಕವಿಗಳು ಹುಟ್ಟಲು ಸಾಧ್ಯವಾಗಿದೆ. ಇಂತವರ ಅಧ್ಯಾತ್ಮ ಅನುಭೂತಿಯಿಂದಲೇ ಭಾರತ ಪ್ರಸಿದ್ಧಿಯಾಗಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ವಿಜ್ಞಾನ ಹಾಗೂ ಪ್ರಕೃತಿ ಚಿಕಿತ್ಸೆ ವಿದ್ಯಾಲಯ ಇದರ ಯೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಉದಯಸುಬ್ರಹ್ಮಣ್ಯ ಇವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಸಂಘದ ವತಿಯಿಂದ ನಡೆದ ‘ ವಾಲ್ಮೀಕಿ ಸಾಂಗತ್ಯ ‘ ಎನ್ನುವ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದರು.

ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಅಧ್ಯಕ್ಷತೆ ವಹಿಸಿದ್ದರು.

ಶ್ರೇಯಾ ಮರಿಯಾ, ಹರಿಣಿ ಹಾಗೂ ಕವನಾ ಪ್ರಾರ್ಥಿಸಿದರು. ಸಂಸ್ಕೃತ ಸಂಘದ ಕಾರ್ಯದರ್ಶಿ ವಿಹಾನ್ ಕೆ.ಸಿ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಕವನಾ ಎಸ್ ಭಟ್ ನಿರೂಪಿಸಿ , ವಿಕ್ರಮ್ ಸಾಯ ವಂದಿಸಿದರು.

Related posts

ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸ. ಹಿ. ಪ್ರಾ. ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿ  ಮಾಸಿಕ ಸಭೆ: ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

Suddi Udaya

ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 12 ವರ್ಷ: ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಅಳದಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಹಾಗೂ ಸೇವಾ ಸಿಂಧು ಕೇಂದ್ರದ ಉದ್ಘಾಟನೆ

Suddi Udaya

ವೇಣೂರು: ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಉದ್ಘಾಟನೆ

Suddi Udaya

ಮಾ 11: ಶ್ರೀ ಜನಾರ್ದನ ದೇವರ ಬ್ರಹ್ಮಕಲಶೋತ್ಸವ ದಿನ ಉಜಿರೆಯಲ್ಲಿ ನಡೆಯಲಿದೆ ಐತಿಹಾಸಿಕ ಶೋಭಾಯಾತ್ರೆ “ಧರ್ಮಯಾನ”

Suddi Udaya
error: Content is protected !!