33.2 C
ಪುತ್ತೂರು, ಬೆಳ್ತಂಗಡಿ
October 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ರಥ ನಿರ್ಮಾಣ ಯೋಜನೆಗೆ ಪುಷ್ಪಾವತಿ ಕೇದೆ ಮತ್ತು ಮಕ್ಕಳಿಂದ ರೂ.1 ಲಕ್ಷ ದೇಣಿಗೆ

ಪಡಂಗಡಿ: ​ ಪರಮ ಪಾವನ ಕ್ಷೇತ್ರವಾದ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಉತ್ಸವದ ಸಲುವಾಗಿ ಭವ್ಯವಾದ ಚಂದ್ರಮಂಡಲ ರಥ, ಪಲ್ಲಕ್ಕಿ ಹಾಗೂ ಬ್ರಹ್ಮರಥವನ್ನು ಸಮರ್ಪಿಸಲು ಭಕ್ತಾದಿಗಳ ಸಹಕಾರದೊಂದಿಗೆ ಹಿರಿಯರು ಯೋಜನೆಯನ್ನು ರೂಪಿಸಿದ್ದಾರೆ.

ಈ ಐತಿಹಾಸಿಕ ರಥಗಳ ನಿರ್ಮಾಣಕ್ಕೆ ಅಂದಾಜು 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗವ ಈ ಯೋಜನೆಗೆ ಪುಷ್ಪಾವತಿ ಕೇದೆ ಮತ್ತು ಮಕ್ಕಳು 1 ಲಕ್ಷ ರೂಪಾಯಿ ದೇಣಿಗೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಅನಂತ ಎಸ್ ಇರ್ವತ್ರಾಯ ತoಗೋಯಿ. ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

Related posts

ಅಳದಂಗಡಿ: ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಸಮಾಜಮುಖಿ ಕಾರ್ಯ: ಕರಂಬಾರು ಗ್ರಾಮದ ಲಲಿತಾ ಪೂಜಾರಿಯವರಿಗೆ ಆರೋಗ್ಯ ನಿಧಿ ಹಸ್ತಾಂತರ

Suddi Udaya

ಉಜಿರೆ ರುಡ್‌ ಸೆಟ್ ಸಂಸ್ಥೆಯಲ್ಲಿ ವಿಶೇಷ ಸಂವಾದ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ: ನಿವೃತ್ತ ತ್ಯಾಂಪಣ್ಣ ಶೆಟ್ಟಿಗಾರ್ ರಿಗೆ ವಿವಿಧ ಸಹಕಾರಿ ಸಂಘಗಳಿಂದ, ಸಿಬ್ಬಂದಿ ವರ್ಗದವರಿಂದ ಗೌರವಾರ್ಪಣೆ

Suddi Udaya

ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪೊಸಂದೋಡಿ ಹರಿಕೃಪಾ ಪಿ. ದುಗ್ಗಪ್ಪ ಗೌಡ ಮತ್ತು ಶ್ರೀಮತಿ ಜಾಜೀವಿಯವರ ವೈವಾಹಿಕ ಜೀವನದ ‘ ಸುವರ್ಣ ಸಂಭ್ರಮ’: ಆದಿಚುಂಚನಗಿರಿ ಶಾಖಾ ಮಠಾ ಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ದೀಪಾವಳಿ ಆಚರಣೆ

Suddi Udaya
error: Content is protected !!