24.5 C
ಪುತ್ತೂರು, ಬೆಳ್ತಂಗಡಿ
October 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ರೋಟರಿ ಕ್ಲಬ್ ನಿಂದ “ರೋಟರಿ ನವರಂಗ್” ಕಾರ್ಯಕ್ರಮ

ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿ ,ಆನ್ಸ್ ಕ್ಲಬ್ ಬೆಳ್ತಂಗಡಿ ಜೊತೆಯಾಗಿ “ರೋಟರಿ ನವರಂಗ್ ” ಎನ್ನುವ ನವರಾತ್ರಿಯ ವಿಶೇಷ ದಾಂಡಿಯಾ ಕಾರ್ಯಕ್ರಮವನ್ನು ಆಯೋಜಿಸಿತು.

ಕಾರ್ಯಕ್ರಮವು ರೋಟರಿಯ ಮೀಟಿಂಗ್ ಮುಖಾಂತರ ಆರಂಭವಾಯಿತು. ಈ ಸಂಧರ್ಭದಲ್ಲಿ ರೋಟರಿಯ ಕಾರ್ಯದರ್ಶಿ ರೊ. ಡಾ ರಾಘವೇಂದ್ರ ಪಿದಮಲೆ , ಆನ್ಸ್ ಕ್ಲಬ್ ಅಧ್ಯಕ್ಷೆ ಆನ್ ರಾಜಶ್ರೀ ರಾವ್, ಕಾರ್ಯದರ್ಶಿ ಆನ್ ಅಪರ್ಣಾ ವಾಟ್ವೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂತರ ನವರಾತ್ರಿಯ ನವರಂಗ್ ಕಾರ್ಯಕ್ರಮ ಆರಂಭವಾಯಿತು . ಉಜಿರೆಯ ಎಸ್.ಡಿ.ಎಂ ಕಲಾ ವೈಭವದ ವಿದ್ಯಾರ್ಥಿಗಳ ದಾಂಡಿಯಾ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು. ನಂತರ ರೋಟರಿ ಬೆಳ್ತಂಗಡಿಯ ಸದಸ್ಯರುಗಳು ಹಾಗೂ ಆನ್ಸ್ ಕ್ಲಬ್ ಸದಸ್ಯೆಯರು ಒಂದರ ನಂತರ ಒಂದರಂತೆ ಬೇರೆ ಬೇರೆ ಹಾಡುಗಳಿಗೆ ದಾಂಡಿಯಾ ನೃತ್ಯ ಮಾಡುತ್ತಾ ನಲಿದಾಡಿದರು.

ಈ ನಡುವೆ ರೋಟರಿ ಸದಸ್ಯರಾದ ಜಗದೀಶ ಪ್ರಸಾದ್ ಹಾಗೂ ಶೈಲಾ ಜಗದೀಶ್ , ನಾರಾಯಣ ಭಟ್ ಹಾಗೂ ಡಾ ಅನುರಾಧಾ ಭಟ್, ಅರವಿಂದ ಕಾರಂತ್ ಹಾಗೂ ಉಷಾ ಕಿರಣ ಕಾರಂತ್, ಶ್ರೀಮತಿ ರೇಶ್ಮಾ ಹೆಗ್ಡೆ ಹಾಗೂ ಗಣರಾಜ ಕಾಮತ್ , ಡಾ ವಿಶು ಕುಮಾರ ಶೆಟ್ಟಿ ಹಾಗೂ ಡಾ ತಾರಕೇಶ್ವರಿ ಇವರುಗಳ ವೈವಾಹಿಕ ದಿನದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ನಂತರ ರೋಟರಿ ಕ್ಲಬ್ ಆನ್ಸ್ ಕ್ಲಬ್ ಜೊತೆಯಾಗಿ ಪುಂಜಾಲಕಟ್ಟೆಯ ಬಳಿಯ ಊರ್ಲಾ ಎಂಬಲ್ಲಿಯ ಅಂಗನವಾಡಿಯೊಂದರ ರಿಪೇರಿ ಹಾಗೂ ಪೈಂಟಿಂಗ್ ಕೆಲಸವನ್ನು‌ ಉಚಿತವಾಗಿ ಮಾಡಿದ ಮುಖೇಶ್ ಅವರನ್ನು ಸನ್ಮಾನಿಸಲಾಯಿತು.
ಹಾಗೇಯೆ ಕಾರ್ಯಕ್ರಮದ ನಿರೂಪಕರಾದ ವಿನ್ಯಾಸ್ ಭಂಡಾರಿ ಅವರ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು. ಅದೇ ರೀತಿ ರೋಟರಿ ಕ್ಲಬ್ ನ ಆನೆಟ್ ಆದ್ಯಾತ್ಮಿ ಅವಳನ್ನು ಎಂ.ಬಿ.ಎ. ಕೋರ್ಸ್ ಮುಗಿಸಿ IDFC FIRST ಬ್ಯಾಂಕ್ ನಲ್ಲಿ ನೌಕರಿ ಸಿಕ್ಕಿದ ಹಿನ್ನಲೆಯಲ್ಲಿ ಕ್ಲಬ್ ಪರವಾಗಿ ಅಭಿನಂದಿಸಲಾಯಿತು.

ಅಧ್ಯಕ್ಷ ರೊ. ಶ್ರೀಧರ ಕೆವಿ ಸ್ವಾಗತಿಸಿದರು. ಕಾರ್ಯದರ್ಶಿ ರೊ ಡಾ ರಾಘವೇಂದ್ರ ಪಿದಮಲೆ ವಂದಿಸಿದರು.

Related posts

ಧರ್ಮಸ್ಥಳ ಬುರುಡೆ ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದಲ್ಲಿ ವರದಿಯ ವಿಚಾರಣೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯುವದಿನಾಚರಣೆ

Suddi Udaya

ಅಂಡಿಂಜೆ ನಿಸರ್ಗ ಸಂಜೀವಿನಿ ಒಕ್ಕೂಟದಲ್ಲಿ ಸ್ವಉದ್ಯೋಗ ಆರಿವರ್ಕ್ ತರಬೇತಿ ಕಾರ್ಯಗಾರ ಉದ್ಘಾಟನೆ

Suddi Udaya

ಉಜಿರೆ ಎಸ್‌ಡಿಎಮ್ ಆಂಗ್ಲಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ಮಟ್ಟದಲ್ಲಿ ಬಹುಮಾನ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಲ್ಯಾನ್ಸಿ ಫೆರ್ನಾಂಡಿಸ್ ಇಸ್ರೇಲ್ ನಲ್ಲಿ ನಿಧನ

Suddi Udaya

ಕುಕ್ಕೇಡಿ ಗ್ರಾ.ಪಂ. ನಿಂದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya
error: Content is protected !!