24.5 C
ಪುತ್ತೂರು, ಬೆಳ್ತಂಗಡಿ
October 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಗೆ ಭೇಟಿ

ಬೆಳ್ತಂಗಡಿ: ಖ್ಯಾತ ಚಲನಚಿತ್ರ ನಟ ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ರಾಯಭಾರಿಯೂ ಆಗಿರುವ ರಮೇಶ್ ಅರವಿಂದ್ ಮತ್ತು ಶ್ರೀಮತಿ ಅರ್ಚನಾ ರಮೇಶ್ ದಂಪತಿಗಳು ಅ. 26 ರಂದು ಬೆಳ್ತಂಗಡಿಯ ಸಿರಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಗೆ ಭೇಟಿ ನೀಡಿದರು.

ದೀಪಾವಳಿ ಹಬ್ಬದ ಪ್ರಯುಕ್ತ ಪೂಜ್ಯರು ಸಿರಿ ಸಿಬ್ಬಂದಿಗಳಿಗೆ ಕೊಡಮಾಡಿರುವ ಉಡುಗೊರೆಗಳನ್ನು ಸಿಬ್ಬಂದಿಗಳಿಗೆ ಹಸ್ತಾಂತರಿಸಿ, ಈ ದೀಪಾವಳಿ ಹಬ್ಬವು ಎಲ್ಲರ ಜೀವನದಲ್ಲೂ ಸುಖ ಸಮೃದ್ಧಿಯನ್ನು ತರಲಿ ಎಂದು ಸಿರಿ ಸಿಬ್ಬಂದಿಗಳಿಗೆ ಶುಭ ಹಾರೈಸಿದರು. ನಂತರ ಸಿರಿ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಅರವಿಂದರವರು ಹೆಗ್ಗಡೆಯವರು ಒಂದೇ ಸೂರಿನಡಿ ಸಿರಿಯ ಎಲ್ಲಾ ಉತ್ಪಾದನಾ ಘಟಕಗಳನ್ನೂ ಸ್ಥಾಪಿಸಿ. ಇಲ್ಲಿ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಮೆಷಿನರಿಗಳನ್ನು ಅಳವಡಿಸಿ ಸಿರಿಯ ಎಲ್ಲಾ ಸಿಬ್ಬಂದಿಗಳಿಗೂ ಕೆಲಸಕಾರ್ಯಗಳನ್ನು ನಿರ್ವಹಿಸಲು ಒಂದು ವಿಶ್ವಮಟ್ಟದ ಮೂಲಸೌಕರ್ಯವನ್ನು ಒದಗಿಸಿಕೊಟ್ಟಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಆಸರೆ, ಆಶೀರ್ವಾದ ಸಹಕಾರ ನಮಗೆ ಇರಬೇಕಾದ್ರೆ, ನಾವು ಮಾಡೋ ಪ್ರತಿಯೊಂದು ಕೆಲಸದಲ್ಲೂ ಪ್ರೀತಿ ಶ್ರದ್ಧೆಯನ್ನಿಟ್ಟು ಮನಃಪೂರ್ವಕವಾಗಿ ಸಂಸ್ಥೆಯ ಕೆಲಸಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಮಾತ್ರ ಉತ್ತಮ ಗುಣಮಟ್ಟವನ್ನು ಹೊಂದಿರುವ ಸಿರಿ ಉತ್ಪನ್ನಗಳನ್ನು ತಯಾರಿಸಿ, ಈ ಎಲ್ಲಾ ಉತ್ಪನ್ನಗಳೂ ಜನಮನ್ನಣೆ ಗಳಿಸುವ ಮೂಲಕ ಒಂದು ಅದ್ಬುತವಾದ ಯಶಸ್ಸನ್ನು ಕಾಣಲು ಸಾಧ್ಯ. ಆಗ ಮಾತ್ರ ಕರ್ನಾಟಕ ರಾಜ್ಯದಲ್ಲಿ ಮನೆಮಾತಾಗಿರುವ ಸಿರಿ ಬ್ರಾಂಡ್ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಲು ಸಾಧ್ಯವಾಗಿರುತ್ತದೆ. ಹಾಗಾಗಿ ನಾವೆಲ್ಲರೂ ಜೊತೆ ಸೇರಿ ಇಷ್ಟಪಟ್ಟು ದುಡಿಯುವ ಮೂಲಕ ಸಿರಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸೋಣ ಎಂದು ಸಿರಿ ಸಿಬ್ಬಂದಿಗಳಿಗೆ ಸ್ಪೂರ್ತಿ ತುಂಬಿದರು.

ಸಿರಿ ಸಂಸ್ಥೆಯ ಉಪ್ಪಿನಕಾಯಿ ಘಟಕ, ಶುಚಿಕಾರಕ ಉತ್ಪನ್ನಗಳ ಘಟಕ, ಶೇಂಗಾ ಚಿಕ್ಕಿ ಉತ್ಪಾದನಾ ಘಟಕ, ಸಿರಿ ಪುಷ್ಠಿ , ಮಸಾಲಾ ಉತ್ಪನಗಳು, ಸೇವರೀಸ್ ಉತ್ಪನ್ನಗಳ ಘಟಕ ಹಾಗೂ ಸಿದ್ಧ ಉಡುಪು ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿದ ರಮೇಶ್ ಸಿರಿಯಲ್ಲಿ ನಡೆಯುತ್ತಿರುವ ವಿವಿಧ ಉತ್ಪಾದನಾ ಕಾರ್ಯಚಟುವಟಿಕೆಗಳನ್ನು, ಇಲ್ಲಿ ಉತ್ಪಾದಿಸಲಾಗುತ್ತಿರುವ ಉತ್ತಮ ಗುಣಮಟ್ಟದ ವಿವಿಧ ಬಗೆಯ ಸಿರಿ ಉತ್ಪನ್ನಗಳನ್ನು ವೀಕ್ಷಿಸಿ, ಸಿರಿ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು, ನಾನು ಸಿರಿ ಬ್ರ್ಯಾಂಡ್ ರಾಯಭಾರಿ ಮಾತ್ರ ಅಲ್ಲ, ಸ್ವತಃ ಸಿರಿ ಉತ್ಪನ್ನಗಳನ್ನು ಖರೀದಿಸಿ ಪ್ರತಿನಿತ್ಯ ನನ್ನ ಮನೆಯಲ್ಲಿ ಬಳಸುವ ಜೊತೆಗೆ, ನಾನು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿಯು ಕೂಡ ನನ್ನ ಸ್ನೇಹಿತರಿಗೆ, ಅಭಿಮಾನಿಗಳಿಗೆ ಸಿರಿ ಉತ್ಪನ್ನಗಳ ಬಗ್ಗೆ ಪ್ರಚಾರ ಪಡಿಸಿ ಎಲ್ಲರಿಗೂ ನಮ್ಮ ಸಿರಿಯ ಉತ್ಪನ್ನಗಳನ್ನು ಉಪಯೋಗಿಸಲು ಪ್ರೇರೇಪಿಸುತ್ತಿದ್ದೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನರವರು ರಮೇಶ್ ಅರವಿಂದ್ ಮತ್ತು ಶ್ರೀಮತಿ ಅರ್ಚನಾ ರಮೇಶ್ ದಂಪತಿಗಳನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿ, ಗೌರವಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ರಾಜೇಶ್ ಪೈ, ಕರ್ನಾಟಕದ ಪ್ರಸಿದ್ಧ ಹಿರಿಯ ಪತ್ರಕರ್ತರಾದ ಕೆ ಸದಾಶಿವ ಶೆಣೈ, ರಮೇಶ್ ಅರವಿಂದರವರ ಸಹೋದರ ಶ್ರೀಧರ್ & ಶ್ರೀಮತಿ ವಿಜಯಾ ದಂಪತಿ, ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ, ಸಿರಿಯ ವಿವಿಧ ವಿಭಾಗಗಳ ಮೇಲಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸಿರಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ರಮೇಶ್ ಅರವಿಂದ್ ರವನ್ನು ಅಭಿನಂದಿಸಿ, ಸಂಭ್ರಮಿಸಿದರು.

ಸಿರಿ ಗೋದಾಮು ವಿಭಾಗದ ಜನರಲ್ ಮ್ಯಾನೇಜರ್ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Related posts

ಮಚ್ಚಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ: ರೂ.4.83 ಲಕ್ಷ ಲಾಭ, ಸದಸ್ಯರಿಗೆ ಶೇ. 14 ಡಿವಿಡೆಂಟ್

Suddi Udaya

ಕಳೆಂಜ: ಬರೆಮೇಲು ನಿವಾಸಿ ಗಣಪನ ಗೌಡ ನಿಧನ

Suddi Udaya

ಬಳಂಜ: ಅಸೌಖ್ಯದಿಂದ ಮಹಿಳೆ ಸಾವು

Suddi Udaya

ನಾರಾವಿ ಮತ್ತು ಕುತ್ಲೂರು ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತಾಭಿಮಾನಿಗಳಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ

Suddi Udaya

ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಮಕ್ಕಳ ಗ್ರಾಮಸಭೆ

Suddi Udaya

ರಾಜ್ಯಮಟ್ಟದ ಕ್ರೀಡಾಕೂಟ: ಮುಂಡಾಜೆ ಸರಸ್ವತಿ ಶಾಲಾ ವಿದ್ಯಾರ್ಥಿ ಜೀವಿತ ಬಿ.ಎಸ್ ಕುಮಿಟಿ ಮತ್ತು ಕಟದಲ್ಲಿ ದ್ವಿತೀಯ ಸ್ಥಾನ

Suddi Udaya
error: Content is protected !!