24.5 C
ಪುತ್ತೂರು, ಬೆಳ್ತಂಗಡಿ
October 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏಕಪಾತ್ರ ಅಭಿನಯ ಸ್ಪರ್ಧೆ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದ ಇಂಟರಾಕ್ಟ್ ಕ್ಲಬ್ ಹಾಗೂ ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಏಕಪಾತ್ರ ಅಭಿನಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವು ಶ್ರಾವ್ಯ ಮತ್ತು ವೈದೇಹಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳ ಎಂ. ವಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ ಕಾರ್ಯದರ್ಶಿ ಅಪರ್ಣಾ ವಾಟ್ವೆ ಹಾಗೂ ಬೆಳ್ತಂಗಡಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಮತ್ತು ಸಹಾಯಕ ಲೆಕ್ಕಾಧಿಕಾರಿ ಪ್ರಭಾರಿ ಗಾಯತ್ರಿ ಪಿ. ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಸ್ಪರ್ಧಿಗಳು ತಮ್ಮ ನಟನಾ ಕೌಶಲ್ಯ, ಸೃಜನಶೀಲತೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ತಮ್ಮ ಅಭಿನಯದ ಮೂಲಕ ಪ್ರದರ್ಶಿಸಿದರು. ತೀರ್ಪುಗಾರರು ವಿದ್ಯಾರ್ಥಿಗಳ ಪ್ರದರ್ಶನವನ್ನು ಶ್ಲಾಘಿಸಿ, ಅರ್ಥಪೂರ್ಣ ಮತ್ತು ಆಕರ್ಷಕ ಕಾರ್ಯಕ್ರಮವನ್ನು ಆಯೋಜಿಸಿದ ಸಂಘಟಕರನ್ನ ಪ್ರಶಂಸಿದರು.ಸ್ಪರ್ಧೆಯಲ್ಲಿ 9ನೇ ತರಗತಿಯ ಅಮೀತ್ ಪ್ರಥಮ ಬಹುಮಾನ, 8ನೇ ತರಗತಿಯ ಆರಾಧ್ಯ ಪಿ. ಜೋಶಿ ದ್ವಿತೀಯ ಬಹುಮಾನ ಮತ್ತು 6ನೇ ತರಗತಿಯ ಶ್ರವಣ್ ತೃತೀಯ ಬಹುಮಾನ ಪಡೆದರು.

ಆಧ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಾನ್ಯ ಸ್ವಾಗತಿಸಿ ಗೌತಮ್ ಮತ್ತು ಡಿಯೋನ್ ಅತಿಥಿಗಳನ್ನು ಪರಿಚಯಿಸಿದರು.
ಧನಲಕ್ಷ್ಮಿ ವಂದಿಸಿದರು.

Related posts

ಉಜಿರೆ ಶ್ರೀ ಧ. ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ: ಬದುಕಿನ ಸ್ಫೂರ್ತಿ ಪಡೆಯಲು ಎನ್ನೆನ್ನೆಸ್ ಅಡಿಪಾಯ – ಎ. ಜೀವಂಧರ ಕುಮಾರ್

Suddi Udaya

ಉಜಿರೆ  ಅತ್ತಾಜೆ ಕೇಶವ ಭಟ್ ಅವಿಭಕ್ತ ಕುಟುಂಬಕ್ಕೆ ಉಂಡೆಮನೆ ಪ್ರಶಸ್ತಿ   

Suddi Udaya

ರಿಕ್ಷಾ ಅಪಘಾತದಲ್ಲಿ ಮೃತರಾದ ವಿದ್ಯಾರ್ಥಿ ತನ್ವಿತ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ನಡ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಬಗ್ಗೆ ಸಮಾಲೋಚನ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆ

Suddi Udaya

ಕೊಕ್ಕಡ: ಮಿಯಾವಕಿ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

Suddi Udaya
error: Content is protected !!