29.9 C
ಪುತ್ತೂರು, ಬೆಳ್ತಂಗಡಿ
October 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದುಶ್ಚಟ ಬಿಡುವುದರೊಂದಿಗೆ ಒಳ್ಳೆಯ ಅಭ್ಯಾಸ ಬೆಳೆಸಿಕೊಳ್ಳಿ: ಡಾ. ವೀರೇಂದ್ರ ಹೆಗ್ಗಡೆಯವರು

ಉಜಿರೆ: ದುಶ್ಚಟಗಳು ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ,ಮಾನಸಿಕ, ಕೌಟುಂಬಿಕ ಮತ್ತು ಸಾಮಾಜಿಕ ಜೀವನದ ಮೇಲೆ ತೀವ್ರತರದ ಪರಿಣಾಮ ಬೀರುವ ಶಾರೀರಿಕ ಹಾಗೂ ಮಾನಸಿಕ ಕಾಯಿಲೆಯಾಗಿದೆ. ಚಟವುಳ್ಳ ವ್ಯಕ್ತಿಯು ಕೌಟುಂಬಿಕವಾಗಿ, ಆರ್ಥಿಕವಾಗಿ ಬಹಳಷ್ಟು ಕ್ಷೀಣಿಸುವುದರ ಜೊತೆಗೆ ತನ್ನ ಬದುಕನ್ನು ಸಂಪೂರ್ಣವಾಗಿ ನಾಶಮಾಡುವ ಸ್ಥಿತಿಗೆ ತಲುಪುತ್ತಾನೆ. ಈ ಚಟದಿಂದ ಮುಕ್ತಿ ಹೊಂದಲು ದೃಢಸಂಕಲ್ಪ, ಆತ್ಮವಿಶ್ವಾಸದೊಂದಿಗೆ ಮನ:ಪರಿವರ್ತನೆ ಹೊಂದುವ ಅವಶ್ಯಕತೆ ಇರುತ್ತದೆ. ಚಟಗಳಿಂದಾದ ಸಮಸ್ಯೆಗಳಿಗೆ ಪರಿಹಾರವನ್ನು ಸ್ವಯಂ ಅರ್ಥೈಸಿಕೊಂಡಾಗ ಮಹತ್ತರವಾದ ಬದಲಾವಣೆಯನ್ನು ಕಂಡುಕೊಳ್ಳಬಹುದು. ಈ ವ್ಯಾಧಿಯಿಂದ ಮುಕ್ತಿಹೊಂದಲು ನಡೆಸಲ್ಪಡುವ ವಿಶಿಷ್ಟ ಕಾರ್ಯಕ್ರಮವೇ ಮದ್ಯವರ್ಜನ ಶಿಬಿರ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 281 ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ರಾಜ್ಯಾದ್ಯಂತ ಆಗಮಿಸಿದ 67 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಇದರ ವತಿಯಿಂದ ರಾಜ್ಯಾದ್ಯಂತ ವಾರ್ಷಿಕವಾಗಿ 150 ಶಿಬಿರಗಳನ್ನು ನಡೆಸಲಾಗುತ್ತಿದೆ. ಏಕಕಾಲದಲ್ಲಿ 15 ಶಿಬಿರಗಳನ್ನು ನಡೆಸುವ ಚಿಕಿತ್ಸಾ ತಂಡ ವೇದಿಕೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ. ಈ ಶಿಬಿರಗಳ ಆಯೋಜನೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ದಾನಿಗಳು, ಯೋಜನೆಯ ಫಲಾನುಭವಿಗಳು, ಸಮಾಜಪರ ಚಿಂತಕರು ಸಹಕರಿಸುತ್ತಿದ್ದಾರೆ. ವೇದಿಕೆಯ ಸಮಗ್ರ ಚಟುವಟಿಕೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾರ್ಷಿಕವಾಗಿ 3.೦೦ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ.ಪಾಯಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಯೋಜನಾಧಿಕಾರಿ ಮಾಧವ ಗೌಡ ವಂದಿಸಿದರು.

ಶಿಬಿರದಲ್ಲಿ ಜಯಾನಂದ, ಮಧು ಜಿ.ಆರ್, ಜಯಲಕ್ಷ್ಮಿ, ಕಿಶೋರ್ , ಕುಮಾರ್ ಮತ್ತಿತರರು ಸಹಕರಿಸಿದರು. ಶಿಬಿರದ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆಯ ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ.ಶಿಶಿರ್ ಕುಮಾರ್, ಸಲಹೆಗಾರರಾದ ಸುಮನಾ ಪಿಂಟೋ, ಮಂಜುನಾಥ್, ವೈದ್ಯಾಧಿಕಾರಿಗಳಾದ ಡಾ.ಮೋಹನದಾಸ ಗೌಡ, ಶ್ರೀ ಧ.ಮ.ಆಸ್ಪತ್ರೆ ಉಜಿರೆಯ ಡಾ.ಎಂ.ಎನ್.ಭಟ್ ಸಹಕರಿಸಿರುತ್ತಾರೆ.


ಈ ಸಂದರ್ಭದಲ್ಲಿ ಯೋಜನೆಯ ಟ್ರಸ್ಟಿಗಳಾದ ಹರೀಶ್ ಕೃಷ್ಣ ಸ್ವಾಮಿ, ಕೇಂದ್ರ ಕಚೇರಿಯ ಮಾಧ್ಯಮ ವಿಭಾಗದ ನಿರ್ದೇಶಕರಾದ ಪ್ರದೀಪ್, ಯೋಜನಾಧಿಕಾರಿಗಳಾದ ಅಜಿತ್ ಉಪಸ್ಥಿತರಿದ್ದರು. ಮುಂದಿನ ಶಿಬಿರ ನ.16ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

Related posts

ಬೆಳ್ತಂಗಡಿ: ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ರಾಜಕೇಸರಿ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರ

Suddi Udaya

ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ರಾಜ್ಯದಾದ್ಯಂತ ಸ್ವಾಸ್ಥ್ಯ ಸಂಕಲ್ಪ ಕೈಗೊಂಡ 1.31 ಲಕ್ಷ ವಿದ್ಯಾರ್ಥಿಗಳು

Suddi Udaya

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮುಖ್ಯ ಕಾರ್ಯಾಚರಣಾ ಅಧಿಕಾರಿ ರುಡ್ ಸೆಟ್ ಸಂಸ್ಥೆಗೆ ಭೇಟಿ

Suddi Udaya

ನಾಲ್ಕೂರು: ಯುವಶಕ್ತಿ ಫ್ರೆಂಡ್ಸ್ ವತಿಯಿಂದ ವಾಹನ ಪೂಜೆ

Suddi Udaya

“ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಆಡಳಿತ ನೀಡಲಿ – ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶುಭಾಶಯಗಳು”: ಅನಿಲ್ ಕುಮಾರ್ ಯು

Suddi Udaya
error: Content is protected !!