
ಬೆಳ್ತಂಗಡಿ: ನಿರೀಕ್ಷೆಯಂತೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದ್ದು, ಪರಿಷ್ಕೃತ ದರ ನ.1ರಿಂದಲೇ ಜಾರಿಗೆ ಬರಲಿದೆ.
ಹೈನುಗಾರಿಕೆ ನಿರತ ರೈತರ ಹಾಗೂ ಹಾಲು ಒಕ್ಕೂಟಗಳ ಬೇಡಿಕೆ ಆಧರಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನ.1 ರಿಂದ ಪ್ರತಿ ಲೀಟರ್ ಹಾಲಿನ ದರ ಈಗಿರುವ 48 ರೂ. ನಿಂದ 56 ರೂ.ಗೆ ಏರಿಕೆ ಆಗಲಿದೆ ಇದರಲ್ಲಿ 7ರೂ. ರೈತರಿಗೆ ಸಿಕ್ಕರೆ 1 ರೂ. ಒಕ್ಕೂಟಗಳ ನಿರ್ವಹಣೆಗೆ ಜಮೆ ಆಗಲಿದೆ. ಹೈನುಗಾರಿಕೆಗೆ ಉತ್ತೇಜನ ನೀಡಲು ಪ್ರತಿ ಲೀಟರ್ ಹಾಲಿಗೆ ರಾಜ್ಯ ಸರ್ಕಾರ ನೀಡುತ್ತಿರುವ 5 ರೂ. ಪ್ರೋತ್ಸಾಹಧನ ಯಥಾ ಪ್ರಕಾರ ಮುಂದುವರಿಯಲಿದೆ. ಬರಗಾಲದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕ ರೈತರ ಹಿತಕಾಯಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.











