ಬೆಳ್ತಂಗಡಿ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಡ ಸರಕಾರಿ ಪದವಿಪೂರ್ವ ಕಾಲೇಜಿನ ಬಾಲಕ ಬಾಲಕಿಯರು ಹಲವಾರು ಬಹುಮಾನಗಳನ್ನು ಗಳಿಸಿ ತಮ್ಮ ಸಾಧನೆಯನ್ನು ಮೆರೆದಿದ್ದಾರೆ.
ಲಾವಣ್ಯ ಬಾಲಕಿಯರ ವಿಭಾಗದಲ್ಲಿ 3000 ಮೀಟರ್ ನಡಿಗೆ ಹಾಗೂ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಬಾಲಕಿಯರ ವಿಭಾಗದ 4*400 ಮೀಟರ್ ರಿಲೇಯಲ್ಲಿ ಗಾಯತ್ರಿ ದೀಕ್ಷಿತ ಲಾವಣ್ಯ ಮತ್ತು ಸುಭಿಕ್ಷ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಗಾಯತ್ರಿ 400 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ 3000 ಮೀಟರ್ ಓಟದಲ್ಲಿ ತೃತೀಯ, ತ್ರಿಜಿಗಿತದಲ್ಲಿ ಚೈತ್ರ ತೃತೀಯ, ಮಹಮ್ಮದ್ ಸುಹೇಲ್ 200 ಮೀಟರ್ ಓಟದಲ್ಲಿ ದ್ವಿತೀಯ, ಮಹಮ್ಮದ್ ಮನ್ಸೂರ್ 100 ಮೀಟರ್ ಓಟದಲ್ಲಿ ತೃತೀಯ, ೪೧೦೦ ಮೀಟರ್ ಓಟದಲ್ಲಿ ಮಹಮ್ಮದ್ ಮನ್ಸೂರ್ ಮಹಮ್ಮದ್ ಸುಹೇಲ್ ಅಖಿಲೇಶ್ ಮತ್ತು ಸಚಿನ್ ತೃತೀಯ, 4*100 ಮೀಟರ್ ಓಟದಲ್ಲಿ ಗಾಯತ್ರಿ ವಿಕ್ಷಿತ ಲಾವಣ್ಯ ಮತ್ತು ಸುಭಿಕ್ಷ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಕಾಲೇಜಿನ ಕ್ರೀಡಾ ಮಾರ್ಗದರ್ಶಿ ವಸಂತಿ ಪಿ ಇವರ ನಿರಂತರ ಪ್ರೋತ್ಸಾಹದಿಂದ ಹಾಗೂ ಪ್ರಾಂಶುಪಾಲೆ ಲಿಲ್ಲಿ ಪಿ.ವಿ ಇವರ ಮಾರ್ಗದರ್ಶನದಲ್ಲಿ ಎಲ್ಲಾ ಉಪನ್ಯಾಸಕರ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ.











