32.5 C
ಪುತ್ತೂರು, ಬೆಳ್ತಂಗಡಿ
October 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆ: ಬಂದಾರುವಿನ ಸೃಷ್ಟಿ ಪಿ. ಹೊಳ್ಳ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

ಬಂದಾರು : ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ 2026ರ ಮೇ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪೆರ್ಲ -ಬೈಪಾಡಿಯ ನಿವಾಸಿ ಸೃಷ್ಟಿ ಪಿ ಹೊಳ್ಳ ರವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಇವರು ಭರತನಾಟ್ಯ ತರಬೇತಿಯನ್ನು ವಿದುಷಿ , ಶ್ರೀಮತಿ ಅಮೃತ ಆಚಾರ್ಯ ಕೊಯ್ಯೂರು ಹಾಗೂ ವಿದುಷಿ , ಶ್ರೀಮತಿ ಶಾಲಿನಿ ಆತ್ಮಭೂಷಣ್ ಪುತ್ತೂರು ಇವರಿಂದ ಪಡೆದಿರುತ್ತಾರೆ. ಕು. ಸೃಷ್ಟಿ.ಪಿ.ಹೊಳ್ಳ ರವರು ದೇವಸ್ಥಾನದ ಅರ್ಚಕರಾದ ಬಂದಾರು ಗ್ರಾಮದ ಪೆರ್ಲ -ಬೈಪಾಡಿಯ ಶ್ರೀ ದುರ್ಗಾನುಗ್ರಹ ನಿಲಯ ನಿವಾಸಿ ಶ್ರೀ ಪ್ರಶಾಂತ್ ಹೊಳ್ಳ ಹಾಗೂ ಶ್ರೀಮತಿ ಮೇಘನ ಪ್ರಶಾಂತ್ ಹೊಳ್ಳ ದಂಪತಿಯ ಪುತ್ರಿಯಾಗಿದ್ದು, ಉಜಿರೆ ಎಸ್‌.ಡಿ.ಎಂ (ಸಿಬಿಎಸ್ಸಿ ) ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Related posts

ರಾಜ್ಯ ಮಟ್ಟದ ಓಟ ಸ್ಪರ್ಧೆ: ಉಜಿರೆಯ ಎಸ್.ಡಿ.ಎಂ ಕ್ರೀಡಾ ಸಂಘದ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ ನಗರಕ್ಕೆಕುಡಿಯುವ ನೀರು ಸರಬರಾಜು ಮಾಡುವ ಸೋಮಾವತಿ ನದಿಯ ಗುಂಡಿಗೆ ಕಿಡಿಗೇಡಿಗಳಿಂದ ವಿಷ : ಸಾವಿರಾರು ಸಂಖ್ಯೆಯಲ್ಲಿ ಮೀನುಗಳ ಸಾವು

Suddi Udaya

ಉಪನ್ಯಾಸಕ ಕೇಶವ ಬಂಗೇರರಿಗೆ ಡಾಕ್ಟರೇಟ್ ಪದವಿ

Suddi Udaya

ಬೆಳಾಲು ಅಯ್ಯಪ್ಪ ಭಕ್ತ ವೃಂದ ಸಮಿತಿ ರಚನೆ: ಅಧ್ಯಕ್ಷರಾಗಿ ಶ್ರೀನಿವಾಸ್ ಗೌಡ, ಕಾರ್ಯದರ್ಶಿಯಾಗಿ ಶಶಿಧರ್ ಆಚಾರ್ಯ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ವಕೀಲ ನಾರಾಯಣ ಸ್ವಾಮಿ ಭೇಟಿ

Suddi Udaya

ನಡ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya
error: Content is protected !!