29.9 C
ಪುತ್ತೂರು, ಬೆಳ್ತಂಗಡಿ
October 30, 2026
Uncategorized

ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವ – ಸಾಮಾಜಿಕ ಚಿಂತನೆ ಅಭ್ಯುದಯಕ್ಕೆ ಪ್ರೇರಕ ಶಕ್ತಿ:ಡಾ.ವಾಮನ ಶೆಣೈ

ಬೆಳ್ತಂಗಡಿ: ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಆರ್ಥಿಕ ವ್ಯವಹಾರ ಮಾತ್ರವಲ್ಲದೆ ಗ್ರಾಹಕ ಕಾಳಜಿ ಹಾಗೂ ಸಾಮಾಜಿಕ ಚಿಂತನೆಯೊಂದಿಗೆ ಕಾರ್ಯಾಚರಿಸುತ್ತಿರುವುದು ಸಂಸ್ಥೆಯ ಅಭ್ಯುದಯಕ್ಕೆ ಪ್ರೇರಕ ಶಕ್ತಿಯಾಗಿದೆ ಎಂದು ದಕ್ಷಿಣ- ಮಧ್ಯ ಕ್ಷೇತ್ರ ಸಂಘಚಾಲಕ ಡಾ.ವಾಮನ ಶೆಣೈ ಹೇಳಿದರು.

ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ರಜತ ಮಹೋತ್ಸವ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿದ್ದರು. ಕ್ಯಾಂಪ್ರೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ 25 ಕಾರ್ಯಕ್ರಮಗಳ ಪಟ್ಟಿ ಅನಾವರಣಗೊಳಿಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಮಂಜುನಾಥ ಎಸ್.ಕೆ., ಭಾರತಿ ಜಿ.ಭಟ್, ಕುಡಾಳ ದೇಶಸ್ಥ ಅದ್ಯ ಗೌಡ್ ಬ್ರಾಹ್ಮಣ ಜಿಲ್ಲಾ ಸಂಘದ ಅಧ್ಯಕ್ಷ ಪ್ರವೀಣ್ ಸಂಜೀವ ದರ್ಬೆ, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ ಶ್ರೀಧರ ಸಾಮಂತ, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಅಧ್ಯಕ್ಷ ಭಾಸ್ಕರ ದೇವಸ್ಯ, ಪುರೋಹಿತ ಪ್ರಶಾಂತ ಭಟ್, ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಆಡಳಿತ ಮೊಕ್ತಸರ ಸುಧಾಕರ ಶೆಣೈ ಅತಿಥಿಗಳಾಗಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಾದ ಕೆ.ನಾರಾಯಣ ನಾಯಕ್, ಹರೇಕಳ ಹಾಜಬ್ಬ, ಡಾ.ಪಿ.ಅನಂತಕೃಷ್ಣ ಭಟ್, ಪಿ.ವಿನೋದ್ ಶೆಣೈ, ಅಶ್ಮಿತ್ ಎ.ಜೆ., ಭಾಸ್ಕರ ರೈ ಕುಕ್ಕುವಳ್ಳಿ, ಡಾ.ಕೆ.ಪ್ರೇಮಚಂದ್ರ ಶೆಣೈ, ಡಾ.ಪ್ರವೀಣ್‌ ಚಂದ್ರ ನಾಯಕ್, ಕಡಬ ಅಚ್ಯುತ ಪ್ರಭು, ಕಲ್ಲೇಗ ಸಂಜೀವ ನಾಯಕ್, ಪ್ರತೀಕ್ಷಾ ಡಿ.ನಾಯಕ್ ಅವರನ್ನು ಗೌರವಿಸಲಾಯಿತು. ಅಶಕ್ತ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಧನಸಹಾಯ ವಿತರಿಸಲಾಯಿತು.
ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಉಪೇಂದ್ರ ನಾಯಕ್, ಪ್ರಧಾನ ವ್ಯವಸ್ಥಾಪಕಿ ಅನಿತಾ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಅಧ್ಯಕ್ಷ ಗಣೇಶ್ ಶೆಣೈ ಸ್ವಾಗತಿಸಿದರು. ಹೃಷಿಕೇಶ್ ವಂದಿಸಿದರು. ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕಿಂತ ಮುನ್ನ ಅಶ್ಮಿತ್‌ ಎ.ಜೆ. ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Related posts

ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಸಿನ ಮನೆ ಶಿಶು ಪಾಲನಾ ಕೇಂದ್ರ ಉದ್ಘಾಟನೆ

Suddi Udaya

ಅರಸಿನಮಕ್ಕಿ: ಪುರೋಹಿತ ಅನಂತ ವೀರೇಶ್ವರ ತಾಮ್ಹನ್ಕಾರ್ ನಿಧನ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯದಲ್ಲಿ ಗರಿಗಳ ಹಬ್ಬ

Suddi Udaya

ಕಡಿರುದ್ಯಾವರ: ವಿದ್ಯುತ್ ತಂತಿಯಲ್ಲಿ ಕಾಣಿಸಿಕೊಂಡ ಬೆಂಕಿ

Suddi Udaya

ಅರಣ್ಯ ಇಲಾಖೆ ವತಿಯಿಂದ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ: ಸಾರ್ವಜನಿಕರಿಗೆ ಕೊಕ್ಕಡ ಗ್ರಾ.ಪಂ. ಹಾಗೂ ಅರಣ್ಯ ಇಲಾಖೆಯ ವತಿಯಿಂದ ಎಚ್ಚರಿಕೆಯ ಸಂದೇಶ

Suddi Udaya

ಕೆ.ಎಸ್.ಸಿ.ಎ 14 ವರ್ಷದಲ್ಲಿನ ಕ್ರಿಕೆಟ್ ತಂಡಕ್ಕೆ ಆಯ್ಕೆ ಟ್ರಯಲ್ಸ್ ಪ್ರಕ್ರಿಯೆಯಲ್ಲಿ ತಾಲೂಕಿನ 6 ವಿದ್ಯಾರ್ಥಿಗಳು ಭಾಗಿ

Suddi Udaya
error: Content is protected !!