October 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್ ಡಿ ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಕೊಡಿಯಾಲಬೈಲು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ ಇವರು ಶಿಬಿರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ರಾಷ್ಟೀಯ ಸೇವಾ ಯೋಜನೆಯ ಈ ವಿಶೇಷ ಶಿಬಿರ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಬೆಳವಣಿಗೆಗೆ ಉಪಯುಕ್ತವಾದುದು. ಗ್ರಾಮದಲ್ಲಿನ ಜನರ ಜೊತೆ ಬೆರೆತು ಉತ್ತಮ ಅನುಭವ ಪಡೆಯಲು ಸಾಧ್ಯ. ಶಿಬಿರಾರ್ಥಿಗಳು ಶಿಬಿರದಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಉತ್ತಮ ನಾಗರೀಕರಾಗಬಹುದು ” ಎoದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ಇವರು ಮಾತನಾಡಿ “ಎನ್ಎಸ್ ಎಸ್ ನ ಈ ಶಿಬಿರದ ಮೂಲಕ ವ್ಯಕ್ತಿಯ ಸಂಪೂರ್ಣವಾದ ಬೆಳವಣಿಗೆ ಆಗುತ್ತದೆ. ಶಿಬಿರದ ಪ್ರತಿಯೊಂದು ದಿನಗಳು ಒಂದೊಂದು ಅನುಭವ. ಗ್ರಾಮಗಳ ಅಭಿವೃದ್ಧಿ ಎನ್ ಎಸ್ ಎಸ್ ನ ಮೂಲ ಉದ್ದೇಶವಾಗಿದೆ ” ಎಂದು ಹೇಳಿದರು. ಭತ್ತ ತಳಿ ಸಂಗ್ರಹಕಾರಾದ ಪರಮೇಶ್ವರ ರಾವ್ ರವರು ನಶಾ ಮುಕ್ತ ಭಾರತ ಕುರಿತ ಕರ ಪತ್ರವನ್ನು ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಕಡಿರುದ್ಯಾವರ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ, ಚಿರಂಜೀವಿ ಯುವಕ ಮಂಡಲದ ಸಂಚಾಲಕರಾದ ರಾಮಚಂದ್ರ ಪಣಿಕ್ಕಲ್, ಎಸ್ ಡಿ ಎಂ ಸಿ ಅಧ್ಯಕ್ಷ ರಾಘವೇಂದ್ರ ಪಟವರ್ಧನ್, ಕೊಡಿಯಾಲ ಬೈಲು ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಾವತಿ ಎಂ ,ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ, ಉಪ ಪ್ರಾಚಾರ್ಯರಾದ ಡಾ. ರಾಜೇಶ್ ಬಿ ಉಪಸ್ಥಿತರಿದ್ದರು.

ಶಿಬಿರಾಧಿಕಾರಿ ವಿಶ್ವನಾಥ್ ಎಸ್ ಸ್ವಾಗತಿಸಿ ಸಹ ಶಿಬಿರಾಧಿಕಾರಿ ಶೋಭಾ ಪಿ ವಂದಿಸಿದರು. ಎನ್ ಎಸ್ ಎಸ್ ಶಿಬಿರಾರ್ಥಿ ಸೃಜನ್ ನಿರೂಪಿಸಿದರು.

Related posts

ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೆರವಣಿಗೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಕೆ

Suddi Udaya

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಡಂತ್ಯಾರಿನಲ್ಲಿ ಉಚಿತ ಯೋಗ ಶಿಕ್ಷಣ ಶಿಬಿರ

Suddi Udaya

ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ನಿಯೋಗದಿಂದ ಶಾಸಕ ಹರೀಶ್ ಪೂಂಜಾರಿಗೆ ಮನವಿ

Suddi Udaya

ಉಜಿರೆ : ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ ಒಂದು ದಿನದ ಪುನಶ್ಚೇತನ ಶಿಬಿರ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಜನಮಂಗಲ ಕಾರ್ಯಕ್ರಮದ ಮೂಲಕ ವಾಟರ್ ಬೆಡ್ ವಿತರಣೆ

Suddi Udaya
error: Content is protected !!