ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸುವ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿಪುಂಜಾಲಕಟ್ಟೆ ಕೆ.ಪಿ.ಎಸ್ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಪೂರ್ವಿಕಾ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಮಡಂತ್ಯಾರು ದೇವಿ ಕಿರಣ್ ಕಲಾನಿಕೇತನ ವಿದೂಷಿ ಶ್ರೀಮತಿ ಪ್ರಥ್ವಿ ಸತೀಶ್ ಇವರ ಶಿಷ್ಯೆಯಾಗಿರುತ್ತಾರೆ. ಇವರು ಪ್ರಮೀಳಾ ರಾಘು ಕುದ್ರಡ್ಕ ದಂಪತಿಯ ಪುತ್ರಿ.











