October 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅವ್ಯವಸ್ಥೆ : ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯಿಂದ, ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಭೇಟಿ

ಗುರುವಾಯನಕೆರೆ: ಕಳೆದ ಮೂರು ವರ್ಷಗಳಿಂದ ವಾಹನ ಸಂಚಾರರಿಗೆ, ನಾಗರಿಕರಿಗೆ ತಲೆ ನೋವಾಗಿ ಪರಿಣಮಿಸಿರುವ ಗುರುವಾಯನಕೆರೆ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಿಲಿಗೂಡು-ಕುಪ್ಪೆಟ್ಟಿ-ಉಪ್ಪಿನಂಗಡಿ ಭಾಗದ ಹತ್ತು ಕಿಲೋಮೀಟರ್ ರಸ್ತೆಯು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಸಂಚರಿಸಲು ಅಸಾಧ್ಯವಾಗುವಷ್ಟರ ಮಟ್ಟಿಗೆ ತಲುಪಿದೆ.

ದಿನನಿತ್ಯ ಸಹಸ್ರಾರು ವಾಹನಗಳು ಸಾಗುವ ಈ ರಸ್ತೆಯು ಹಲವು ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಕಛೇರಿಗಳನ್ನು ಅವಲಂಬಿಸಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ಕಾರ್ಮಿಕರು ಸಹಿತ ಸಹಸ್ರಾರು ನಾಗರಿಕರು ಕಂಗಾಲಾಗಿದ್ದಾರೆ. ಹಲವು ಬಾರಿ ಜನಪ್ರತಿನಿಧಿಗಳ, ಅಧಿಕಾರಿ ವರ್ಗದ, ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಇಲ್ಲ.
ಈ ನಿಟ್ಟಿನಲ್ಲಿ ಜಾತಿ ಧರ್ಮ ಪಕ್ಷ ಭೇದವಿಲ್ಲದೆ ನಾಗರಿಕರು, ಜನಪ್ರತಿನಿಧಿಗಳು ಹಾಗೂ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವ ಸಂಕಲ್ಪ ಮಾಡಿ, ನ. 06 ರಂದು ಕಲ್ಲೇರಿ ಜಂಕ್ಷನ್ ನಲ್ಲಿ, ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ, ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.


ಲೋಕೋಪಯೋಗಿ ಇಲಾಖೆಯ ಚೀಫ್ ಇಂಜಿನಿಯರ್ ಮಂಗಳೂರಿಗೆ ಬರುವ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳಿಂದ ಮಾಹಿತಿ ಪಡೆದ ನಾಗರಿಕ ಹೋರಾಟ ಸಮಿತಿ ನಾಯಕರು ಭೇಟಿ ನೀಡಿ ಮಾತುಕತೆ ನಡೆಸಿದ್ದು, ನಾಳೆಯೇ ಉನ್ನತ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಹಾರದ ಭರವಸೆಯ ಮಾತನ್ನಾಡಿದ್ದಾರೆ. ಸಂಪೂರ್ಣ ಡಾಮರೀಕರಣ ಮಾಡಿ ವ್ಯವಸ್ಥಿತವಾದ ರಸ್ತೆ ಮಾಡಿ ಕೊಡುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂಬ ದಿಟ್ಟ ನಿಲುವು ಹೋರಾಟ ಸಮಿತಿ ಹೊಂದಿದೆ.

ನಿಯೋಗದಲ್ಲಿ ಜಿ.ಪಂಚಾಯಿತಿ ಮಾಜಿ ಸದಸ್ಯರಾದ ಶಾಹುಲ್ ಹಮೀದ್ ಕರಾಯ, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಪ್ರಧಾನ ಕಾರ್ಯದರ್ಶಿ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್, ಉಪಾಧ್ಯಕ್ಷರಾದ ಆದಂ ಅಲ್ ಮದೀನಾ, ಅಬ್ದುರ್ರಹ್ಮಾನ್ ಬಂಡಸಾಲೆ, ಸ್ಥಳೀಯ ಜನ ಪ್ರತಿನಿಧಿಗಳಾದ ಅಯ್ಯೂಬ್ ಬಿಕೆ ಕರಾಯ, ಜಯ ವಿಕ್ರಮ ಕಲ್ಲಾಪು, ಯೂಸುಫ್ ಹಾಜಿ ಪೆದಮಲೆ, ಸುಲೈಮಾನ್ ಕರ್ಪಾಡಿ, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

Related posts

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ನೂತನ ಕಚೇರಿ ಉದ್ಘಾಟನೆ: ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ನಾವೂರು ಆರೋಗ್ಯ ಕ್ಲಿನಿಕ್ ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭೇಟಿ, ಪರಿಶೀಲನೆ

Suddi Udaya

ಫೆ.12ರಿಂದ ಮರೋಡಿ ಕ್ಷೇತ್ರದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವ

Suddi Udaya

ತುಮಕೂರಿನಲ್ಲಿ ‘ಜಿ.ಎನ್.ಆರ್ ಕಲ್ಪತರು ಸಿರಿ ಮಾರ್ಟ್’ ಸಿರಿ ಉತ್ಪನ್ನಗಳ ನೂತನ ಮಾರಾಟ ಮಳಿಗೆ ಶುಭಾರಂಭ

Suddi Udaya

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಐ.ಟಿ. ಕ್ಲಬ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya

ಮಹಾವೀರ ಜಯಂತಿ ರಜೆ ಹಿನ್ನಲೆ ಮಾ.30ರಂದು ನಡೆಯಬೇಕಾಗಿದ್ದ ಎಸ್ಸೆಸ್ಸೆಲ್ಸಿ ತೃತೀಯ ಭಾಷೆ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ

Suddi Udaya
error: Content is protected !!