October 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಾಜ್ಯ ಸರಕಾರದಿಂದ ಹೈನುಗಾರರ ಹಿತ ಕಾಯುವ ನಿರ್ಧಾರ: ಸಂತೋಷ್ ಕುಮಾರ್ ಲಾಯಿಲ

ಬೆಳ್ತಂಗಡಿ: ಹಾಲಿನ ಹೊಸ ದರ ಹೆಚ್ಚಳವಾಗಲಿದ್ದು, ರೂ.7 ನೇರವಾಗಿ ರೈತರಿಗೆ ಪಾವತಿಯಾಗಲಿದೆ. ಅವರ ಆದಾಯ ಲೀಟರ್‌ಗೆ 47 ರೂ.ಗೆ ಏರಿಕೆಯಾಗಲಿದ್ದು ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ.

ಹೈನುಗಾರಿಕೆಯನ್ನು ನಂಬಿ‌ ಬದುಕುವವರು ಪಶು ಆಹಾರದ ಬೆಲೆ ಏರಿಕೆ ಸೇರಿದಂತೆ ಉತ್ಪಾದನಾ ವೆಚ್ಚ ಏರಿಕೆ ಮತ್ತು ಬರಗಾಲದಿಂದ ಕಂಗೆಟ್ಟಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ‌. ಹಾಲಿನ ದರ ಏರಿಕೆಯ ಸಿಂಹಪಾಲು ನೇರವಾಗಿ ಹೈನುಗಾರರ ಖಾತೆಗೆ ತಲುಪಲಿದೆ. ಈ ಮೂಲಕ ಹೈನುಗಾರಿಕೆ ನಂಬಿ ಬದುಕುತ್ತಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗಲಿದೆ. ಇದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ‌ಹೈನುಗಾರರ ಪರವಾಗಿ ಇರುವ ಕಾಳಜಿಯಾಗಿದ್ದು, ಜಿಲ್ಲೆಯ ಹೈನುಗಾರರ ಪರವಾಗಿ ರಾಜ್ಯ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ದ.ಕ. ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ಸಂತೋಷ್ ಕುಮಾರ್ ಲಾಯಿಲಾ ತಿಳಿಸಿದ್ದಾರೆ.

Related posts

ಕಳೆಂಜ: ಲಕ್ಷ್ಮಣ ಗೌಡ ನಿಧನ

Suddi Udaya

ಕಳೆಂಜ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Suddi Udaya

ಗುರುವಾಯನಕೆರೆ ಶಕ್ತಿನಗರದ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್: ಬೈಕ್ ಸವಾರ ಸಾವು

Suddi Udaya

ವೇಣೂರು: ಭಾರತೀಯ ಜೈನ್ ಮಿಲನ್ ವತಿಯಿಂದ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್‌ರವರಿಗೆ ಅಭಿನಂದನೆ

Suddi Udaya

ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ಶಾಕ್: ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು

Suddi Udaya

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಐ.ಟಿ. ಕ್ಲಬ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya
error: Content is protected !!