November 1, 2026
ಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ನಯನಾಡು ಗೆಳೆಯರ ಬಳಗದ ಸಹ ಸಂಸ್ಥೆ ಗೆಳೆಯರ ಬಳಗ ಸಹಕಾರ ಸಂಘ ಉದ್ಘಾಟನೆ

ಪುಂಜಾಲಕಟ್ಟೆ : ಸಾಮಾಜಿಕ ಸೇವೆಗಾಗಿ ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಸೇವಾ ಸಂಸ್ಥೆ ಬಂಟ್ವಾಳ ತಾಲೂಕಿನ ನಯನಾಡು ಗೆಳೆಯರ ಬಳಗದಿಂದ ನಡೆಸಲ್ಪಡುವ ಗೆಳೆಯರ ಬಳಗ ಸಹಕಾರ ಸಂಘ ನಿಯಮಿತ, ಪುಂಜಾಲಕಟ್ಟೆ ಇದರ ಉದ್ಘಾಟನೆಯು ನ.1 ರಂದು ಪುಂಜಾಲಕಟ್ಟೆ ಅಮೀರ್ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.

ನಯನಾಡು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ ಧರ್ಮಗುರು ವಂ| ಫಾ| ಅನಿಲ್ ಅವಿಲ್ಡ್ ಲೊಬೋ, ನೈನಾಡು ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಗೋವಿಂದ ಭಟ್ ಆಶೀರ್ವಚನಗೈದರು. ಗೆಳೆಯರ ಬಳಗ ಸಹಕಾರ ಸಂಘ ನಿಯಮಿತ ಅಧ್ಯಕ್ಷ ನೆಲ್ಲಿಸ್ಟರ್ ಗ್ಯಾನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.

ಹ್ಯುಮಾನಿಟಿ ಟ್ರಸ್ಟ್ ಸಂಸ್ಥಾಪಕ ರೋಷನ್ ಬೆಳ್ಳಣ್  ಕಚೇರಿ ಉದ್ಘಾಟಿಸಿದರು. ಇರ್ವತ್ತೂರು ಶಾರದೋತ್ಸವ ಸಮಿತಿ ಅಧ್ಯಕ್ಷ ಡಾ| ರಾಮಕೃಷ್ಣ ಎಸ್.ಲೋಗೋ ಅನಾವರಣ ಮಾಡಿದರು. ನಯನಾಡು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ ಧರ್ಮಗುರು ವಂ| ಫಾ| ಅನಿಲ್ ಅವಿಲ್ಡ್ ಲೊಬೋ ಗಣಕಯಂತ್ರ,  ನೈನಾಡು ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಗೋವಿಂದ ಭಟ್  ಭದ್ರತಾ ಕೊಠಡಿ, ಸಿಇಓ ಕೊಠಡಿಯನ್ನು ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷ ತುಂಗಪ್ಪ ಬಂಗೇರ ಬಂಟ್ವಾಳ ತಾಲೂಕು ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ಅಧ್ಯಕ್ಷರ ಕೊಠಡಿಯನ್ನು ಉದ್ಘಾಟಿಸಿದರು. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪ್ರಥಮ ಉಳಿತಾಯ ಖಾತೆ ಹಸ್ತಾಂತರಿಸಿದರು.

ಭಾಜಪಾ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮುಟೂರು,
ಮಂಗಳೂರಿನ ವಕೀಲ ನವನೀತ್ ಡಿ. ಹಿಂಗಾಣಿ, ನಿಖಾನ್ ಚರ್ಚ್ ಧರ್ಮಗುರು ವಂ. ಫಾ. ಅನಿಲ್ ರೋಶನ್ ಲೋಬೋ, ಬಂಟ್ವಾಳ ಬ್ಲಾಕ್ ಕಿಸಾನ್ ಘಟಕ ಅಧ್ಯಕ್ಷ ಸುಧಾಕರ ಶೆಣೈ ಖಂಡಿಗ, ಬಿ. ಸಿ. ರೋಡ್ ನ ವಕೀಲ ತುಳಸಿದಾಸ್, ಮಡಂತ್ಯಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹನೀಫ್ ಪುಂಜಾಲಕಟ್ಟೆ, ಅಮೀರ್ ಕಾಂಪ್ಲೆಕ್ಸ್ ಮಾಲಕ ಮೊಹಮ್ಮದ್ ಅಮೀರ್‌, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹರ್ಷಿಣಿ ಪುಷ್ಪಾನಾಂದ, ಶಾರಾದ, ಮಾಜಿ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ, ಉದ್ಯಮಿ ಹರೀಂದ್ರ ಪೈ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಗೌರವ ಸಲಹೆಗಾರ ಜೊಯಲ್ ಲೋಬೋ, ಉಪಾಧ್ಯಕ್ಷ ಅನಿಲ್ ರೋಶನ್ ಮೊರಾಸ್, ನಿರ್ದೇಶಕರಾದ ಮಧುಕರ ಶೆಟ್ಟಿ, ಜೀವನ್ ಫೆರ್ನಾಂಡಿಸ್, ವಸಂತ ಸಾಲಿಯಾನ್, ಪ್ರೇಮ್ ಲಾಯ್ಡ್ ಮಿರಾಂಡ, ಲೊಕೇಶ್, ಅನಿಲ್ ವೊರಾಸ್, ಜೋಯ್ಸ್ ಪಿಂಟೋ, ಸಂತೋಷ್ ಫೆರ್ನಾಂಡಿಸ್, ಡೈನಾ ಶರಲ್ ಡಿಸೋಜಾ, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಡೋನ್ ಪ್ರವೀಣ್ ಕ್ರಾಸ್ತ  ಪ್ರಾಸ್ತವಿಸಿ  ಸ್ವಾಗತಿಸಿದರು, ನಿಖಿತಾ ಆರ್. ಸಾಲಿಯಾನ್ ಸಿದಕಟ್ಟೆ ನಿರೂಪಿಸಿದರು.

ಗೆಳೆಯರ ಬಳಗದಿಂದ ಶೀಘ್ರವಾಗಿ ರಸ್ತೆ, ಮನೆ, ಪಾರ್ಕ್ ನಿರ್ಮಾಣ, ರಕ್ತದಾನ, ಆರೋಗ್ಯ ಶಿಬಿರಗಳು, ಪುಸ್ತಕ ವಿತರಣೆ, ವಿಕಲಚೇತನರಿಗೆ ಹಾಗೂ ಗಂಭೀರ ರೋಗಿಗಳಿಗೆ ಆರ್ಥಿಕ ಸಹಾಯ, ಸೌಹಾರ್ದತೆಗಾಗಿ ದೀಪಾವಳಿ, ಕ್ರಿಸ್ಮಸ್ ಸೌಹಾರ್ದ ಕೂಟ ಮತ್ತು ಇಫ್ತಾರ್ ಕೂಟಗಳ ಆಚರಣೆ, ಹೀಗೆ ಸುಮಾರು 160ಕ್ಕೂ ಹೆಚ್ಚು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲಾಗಿರುವುದಾಗಿ ಸಂಘಟನೆ ತಿಳಿಸಿದೆ.

Related posts

ಜಮಲಾಬಾದ್ ಕೋಟೆಗೆ(ಗಡಾಯಿ ಕಲ್ಲು) ರೋಪ್‌ವೇ ನಿರ್ಮಾಣಕ್ಕೆ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ನೇಮಕ

Suddi Udaya

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಸ್ಪತ್ರೆ ಮೇಲ್ದರ್ಜೆಗಾಗಿ ಧಾರ್ಮಿಕ ಆಯುಕ್ತರಿಗೆ ಮನವಿ

Suddi Udaya

ತಣ್ಣೀರುಪಂತ: ನವಚೇತನಾ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನೂತನ ಕಟ್ಟಡದ ಉದ್ಘಾಟನೆ

Suddi Udaya

ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಪೂಜೆ ಹಾಗೂ ರೆಖ್ಯ ಗ್ರಾಮದ ಸಮಗ್ರ ಅಭಿವೃದ್ಧಿಗೆ ರೂ. 15ಕೋಟಿ ಅನುದಾನ ನೀಡಿರುವ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಫೆ.15 (ನಾಳೆ) ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಲ್ಲಿ ಶಾಸಕ ಹರೀಶ್ ಪೂಂಜರವರ ವಿಶೇಷ ಪ್ರಯತ್ನದಲ್ಲಿ ರೂ.26 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ “ಅಕ್ಷಯ ಪಾಕಶಾಲೆ” ಲೋಕಾರ್ಪಣೆ

Suddi Udaya
error: Content is protected !!