November 1, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿ

ಎರಡು ಜಿಲ್ಲೆಗಳ ಸುಗಮ ಸಂಚಾರ ವ್ಯವಸ್ಥೆಗೆ ಶೀಘ್ರ ಕ್ರಮ‌ ಜರುಗಬೇಕಿದೆ; ಜಿ.ಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ: ಶಿಶಿಲ-ಬೈರಾಪುರ ರಸ್ತೆ ಹಕ್ಕೊತ್ತಾಯಕ್ಕೆ ಬೆಂಬಲ

ಬೆಳ್ತಂಗಡಿ; ಎರಡು ಜಿಲ್ಲೆಗಳನ್ನು ಅತ್ಯಂತ ಸಮೀಪದಿಂದ ಸಂಪರ್ಕ ಸಾಧಿಸಬಹುದಾದ ಘಾಟಿ ರಹಿತ ಸುಗಮ ಸಂಚಾರ ವ್ಯವಸ್ಥೆಯ ಪೂರ್ಣ ಅವಕಾಶವಿರುವ ಶಿಶಿಲ ಬೈರಾಪುರ ರಸ್ತೆ ಮರು ನಿರ್ಮಾಣ ಯೋಜನೆಗೆ ಸಂಬಂಧಪಟ್ಟ ಮೂಲಸೌಕರ್ಯ ಮತ್ತು ಸಂಪರ್ಕ ಇಲಾಖೆಗಳು ಶೀಘ್ರದಲ್ಲೇ ಕ್ರಮ ಕೈಗೊಳ್ಳುವಂತಾಗಲಿ ಎಂದು ಜಿ.ಪಂ ಮಾಜಿ ಸದಸ್ಯೆ ಹಾಗೂ ಶಿಕ್ಷಣ – ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ ಆಗ್ರಹಿಸಿದ್ದಾರೆ.

ಈ ಸಂಬಂಧ ನವಂಬರ 2 ರಂದು ಸರ್ವ ಪಕ್ಷ ಪ್ರತಿನಿಧಿಗಳ ಒಟ್ಟುಗೂಡುವಿಕೆಯೊಂದಿಗೆ ಅರಸಿನಮಕ್ಕಿಯಲ್ಲಿ ನಡೆಯುವ ಹಕ್ಕೊತ್ತಾಯ ಸಭೆಗೆ ಪೂರ್ಣ ಬೆಂಬಲ ನೀಡುವುದಾಗಿಯೂ ಅವರು ಘೋಷಿಸಿದ್ದಾರೆ.

ಉತ್ತಮ ರಸ್ತೆ ಸಂಪರ್ಕವು ಒಂದು ಪ್ರದೇಶದ ಪ್ರಗತಿಗೆ ಬುನಾದಿಯಾಗಿದೆ. ಇದಕ್ಕಾಗಿ ಪ್ರಕೃತಿಗೆ ಕನಿಷ್ಠ ಹಾನಿಯಾಗುವ ರೀತಿಯಲ್ಲಿ ಸೃವೆ ನಡೆಸಿ ಇರುವ ಕಚ್ಚಾ ರಸ್ತೆಯನ್ನೇ ಸರ್ವ ಋತು ರಸ್ತೆಯಾಗಿ ಪರಿವರ್ತಿಸುವಲ್ಲಿ ಆದ್ಯತೆ ನೀಡಬೇಕು. ಇಂಧನ ಮತ್ತು ಸಮಯ ಉಳಿತಾಯ, ಸಮೀಪದ ಸಂಪರ್ಕ ಸಾಧ್ಯತೆ ಗಳನ್ನು ಇಲಾಖೆಗಳು ಮನಗಂಡು ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಬೇಕು.


ಆ‌ ಮೂಲಕ ಕರಾವಳಿ ಮತ್ತು ಮಲೆನಾಡಿನ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಈ‌ ಹಕ್ಕೊತ್ತಾಯ ಸಭೆಯಲ್ಲಿ ಭಾಗವಹಿಸಿ ಜನಪ್ರತಿನಿಧಿಗಳಿಗೆ ಈ ಹೋರಾಟದ ಬಗ್ಗೆ ಸದಭಿಪ್ರಾಯ ಮೂಡುವಂತೆ
ಮಾಡುವಲ್ಲಿ ಯಶಸ್ವಿಯಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts

ಪುದುವೆಟ್ಟು: ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ

Suddi Udaya

ಉಜಿರೆಯಲ್ಲಿ ಹಲಸು ಮತ್ತು ಹಣ್ಣಿನ ಮೇಳದ ಉದ್ಘಾಟನೆ

Suddi Udaya

ಜೂ.6: ಕಕ್ಕಿಂಜೆ ವಿದ್ಯುತ್ ನಿಲುಗಡೆ

Suddi Udaya

ಸೇವಾ ನಿವೃತ್ತಿ ಹೊಂದಿ ಸ್ವಾಗ್ರಾಮಕ್ಕೆ ಆಗಮಿಸಿದ ಅಶೋಕ್ ಕುಮಾರ್ ರವರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಗೆ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಪಣಕಜೆ: ಶ್ರೀ ಕೃಷ್ಣ ಜನ್ಮಾಷ್ಟಮಿಯ ನೂತನ ಸಮಿತಿ ರಚನೆ

Suddi Udaya
error: Content is protected !!