November 3, 2026
ತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಖಂಡಿಗ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವಿಜ್ಞಾಪನ ಪತ್ರ ಬಿಡುಗಡೆ-ದೇವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಶೀಘ್ರ ಕ್ರಮ: ಶಾಸಕ ಹರೀಶ್ ಪೂಂಜ ಭರವಸೆ

ತೆಂಕಕಾರಂದೂರು: ಖಂಡಿಗ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವವು 2027ರ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಬ್ರಹ್ಮಕಲಶೋತ್ಸವದ ವಿಜ್ಞಾಪನ ಪತ್ರವನ್ನು ಶಾಸಕ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಹರೀಶ್ ಪೂಂಜ ಅವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಿತಿಯ ಬೇಡಿಕೆಯಂತೆ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು, ಅದರ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ, ದೇವಸ್ಥಾನದ ಆವರಣದಲ್ಲಿ ಶೌಚಾಲಯ ನಿರ್ಮಾಣಕ್ಕೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ನೂರಿತ್ತಾಯ, ಪ್ರಧಾನ ಅರ್ಚಕ ರತ್ನಾಕರ ನೂರಿತ್ತಾಯ, ರಂಗನಾಥ ನೂರಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್., ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಕೋಶಾಧಿಕಾರಿ ಪದ್ಮ ನಾಯ್ಕ ಖಂಡಿಗ, ಉಪಾಧ್ಯಕ್ಷರಾದ ಸಂತೋಷ್ ಹೆಗ್ಡೆ ಮಾರುತಿ ನಿಲಯ, ಸುಧಾಮಣಿ ಆರ್., ಕಾರ್ಯದರ್ಶಿಗಳಾದ ರಾಜೀವ್ ಸಾಲ್ಯಾನ್ ಮುಂಡೂರು, ಸುರೇಖಾ ಶೆಟ್ಟಿ ನೂಜಿ, ರಮೇಶ್ ಹೆಗ್ಡೆ ಕಾಪಿನಡ್ಕ, ಜೊತೆ ಕಾರ್ಯದರ್ಶಿಗಳಾದ ಶರತ್ ಕಡಂಬು, ಪ್ರಕಾಶ್ ಆಚಾರ್ಯ ಕುಕ್ಕೆಟ್ಟು, ಪ್ರಶಾಂತ್ ನಾಯ್ಕ ಖಂಡಿಗ, ವಸಂತ ನಾಯ್ಕ ಖಂಡಿಗ, ಜೊತೆ ಕೋಶಾಧಿಕಾರಿಗಳಾದ ಭೋಜ ಪೂಜಾರಿ ಮಜಲು, ಸೌಮ್ಯ ಮೋಹನ್ ಬಂಗೇರ, ನೀಷ್ಮ ಜಯಂತ್ ಪೂಜಾರಿ, ಪದಾಧಿಕಾರಿಗಳಾದ ಮೋಹನ್ ಬಂಗೇರ, ಸಂತೋಷ್ ಕುಮಾರ್ ಮುಂಡೂರು, ರಮಾನಾಥ್ ರೈ ಗರಿಯಾರು, ಶರತ್ ಕಾಡಬಾಗಿಲು, ವೆಂಕಪ್ಪ ನಾಯ್ಕ ಅಶ್ವಥ ಪಳಿಕೆ, ನಾರಾಯಣ ಪೂಜಾರಿ ಕಡಂಬು, ಉದಯ ನಾಯ್ಕ ಅಶ್ವಥ ಪಳಿಕೆ, ಸಾಂತಪ್ಪ ನಾಯ್ಕ ಖಂಡಿಗ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.

ಸಾನ್ವಿ ಬಂಗೇರ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಜೀವ್ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಪದ್ಮ ನಾಯ್ಕ ವಂದಿಸಿದರು.

Related posts

ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 12 ವರ್ಷ: ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಮೇಲಂತಬೆಟ್ಟು: ನಡುವಡ್ಕ ನಿವಾಸಿ ಹೊನ್ನಮ್ಮ ನಿಧನ

Suddi Udaya

ಉಜಿರೆ: ಎಸ್ ಡಿ ಯಂ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಮಚ್ಚಿನ: ಕುದ್ರಡ್ಕ ನಿವಾಸಿ ಅಣ್ಣಿ ಪೂಜಾರಿ ನಿಧನ

Suddi Udaya

“ನಮ್ಮೂರು ನಮ್ಮ ಕೆರೆ” ವಿಶಿಷ್ಟ ಸೇವೆಗಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಿಜಯವಾಣಿ ವಿಜಯರತ್ನ ಅಂತರಾಷ್ಟ್ರೀಯ ಪ್ರಶಸ್ತಿ

Suddi Udaya

ಪತ್ರಕರ್ತ ಭುವನೇಶ್ ಗೇರುಕಟ್ಟೆಯವರಿಂದ ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ದೃಷ್ಟಿಯಿಂದ ಕೇಶದಾನ

Suddi Udaya
error: Content is protected !!