November 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಮರೋಡಿ ಗ್ರಾಮದ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ದಾಂತಗಳನ್ನು ಒಪ್ಪಿ ಪ್ರಧಾನಿ ನರೇಂದ್ರ ಮೋದಿಜಿಯವರ ಆಡಳಿತ ವೈಖರಿಯನ್ನು ಮೆಚ್ಚಿ, ಶಾಸಕ ಹರೀಶ್ ಪೂಂಜರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮರೋಡಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ವಿಶು ಕುಮಾರ್ ಜೈನ್, ಜಯಪ್ರಕಾಶ್ ಪಾಂಡಿ, ಸಂತೋಷ್ ಕಲ್ಪನೆ, ಯೋಗೇಂದ್ರ ಆಚಾರ್ಯ, ಪ್ರವೀಣ್ ಬಲ್ಲಾಳ, ಶಿವಪ್ರಸಾದ್ ಕಲ್ಪನೆ, ರಮೇಶ್ ಸಾಲಿಯಾನ್ ಬನತ್ಯರಡ್ಡ, ಬಾಲಕೃಷ್ಣ ಪಾದೆ, ನಿತೇಶ್ ಕಲ್ಡೆ, ದೀಕ್ಷಿತ್ ಶೆಟ್ಟಿಯವರು ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮಂಗಳೂರು ವಿಭಾಗ ಸಹಪ್ರಭಾರಿ ಜಯಂತ್ ಕೋಟ್ಯಾನ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ, ಪ್ರಶಾಂತ್ ಎಂ ಪಾರೆಂಕಿ, ಜಿಲ್ಲಾ ಮನ್ ಕಿ ಬಾತ್ ಪ್ರಮುಖ್ ಸೀತಾರಾಮ್ ಬೆಳಾಲು, ಮುಖಂಡರಾದ ಸದಾನಂದ ಉಂಗಿಲಬೈಲು, ಮೋಹನ್ ಅಂಡಿಂಜೆ, ರತ್ನಾಕರ್ ಬುಣ್ಣನ್, ಪದ್ಮಶ್ರೀ ಜೈನ್, ರಾಜೇಶ್ ಮೂಡುಕೋಡಿ, ಮಾಜಿ ಪಂಚಾಯತ್ ಸದಸ್ಯರುಗಳು, ಪ್ರಮುಖರು,ಕಾರ್ಯಕರ್ತರು ಜೊತೆಗಿದ್ದರು.

Related posts

ಉರುವಾಲು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ

Suddi Udaya

ಖ್ಯಾತ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿಯವರಿಗೆ ಅಭಿನಂದನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ

Suddi Udaya

ಆರಂಬೋಡಿ: ಗಂಟಲಿನ ಚಿಕ್ಕ ಪೊರೆಯ ಸಮಸ್ಯೆಯಿಂದ ಬಳಲುತ್ತಿರುವ 2ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾಗಿ

Suddi Udaya

ಎಕ್ಸೆಲ್ ನ ವಿದ್ಯಾರ್ಥಿಗಳು ಜೆ ಇ ಇ ದ್ವಿತೀಯ ಸುತ್ತಿನಲ್ಲೂ ಅಮೋಘ ಸಾಧನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಣ್ಣೀರುಪಂತ ವಲಯದ ಭಜನಾ ಮಂಡಳಿಯ ಸಭೆ

Suddi Udaya

ಕುವೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆ

Suddi Udaya
error: Content is protected !!