ವೇಣೂರು: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಮುಖ್ಯ ಶಿಕ್ಷಕಿ ವೀಣಾ ಮತ್ತು ಮತ್ತು ಉಪ ಮುಖ್ಯ ಶಿಕ್ಷಕಿಕಾವ್ಯಶ್ರೀ ಮತ್ತು ಶಿಕ್ಷಕ ವೃಂದ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು.

ಕನ್ನಡ ಶಿಕ್ಷಕಿ ಅಪರ್ಣಾ ಮಾತನಾಡಿ ಕನ್ನಡಾಭಿಮಾನ ಒಂದು ದಿನಕ್ಕೆ ಸೀಮಿತವಲ್ಲ, ನಿತ್ಯ ಭಾಷಾ ಬಳಕೆಯಲ್ಲಿ ಕನ್ನಡ ಇದ್ದರೆ, ಅದು ಜೀವಂತ ಭಾಷೆಯಾಗಿ ಉಳಿಯುತ್ತದೆ ಎಂದರು.
ಶಿಕ್ಷಕ ಕೃಷ್ಣಪ್ಪ ಎಂ.ಕೆ ಮತ್ತು ವಸತಿ ನಿಲಯ ಮೇಲ್ವಿಚಾರಕ ಕೊಟ್ರೇಶ್ ಕನ್ನಡ ನಾಡು ನುಡಿಯ ಬಗ್ಗೆ ವಿವರಿಸಿದರು.
ಶಿಕ್ಷಕಿ ಸರ್ವಾಣಿ ಸಮಗ್ರ ನಿರ್ವಹಣೆ ಮಾಡಿದರು. ವಿದ್ಯಾರ್ಥಿಗಳು, ಶಾಲಾ ಬೋಧಕ ಬೋಧಕೇತರ ವೃಂದ ಸಹಕರಿಸಿದರು











