November 2, 2026
ತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳುಸಮಸ್ಯೆ

ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿ ಆಗ್ರಹಿಸಿ ಅರಸಿನಮಕ್ಕಿಯಲ್ಲಿ ವಾಹನ ಜಾಥಾ-ಬೃಹತ್ ಹಕ್ಕೋತ್ತಾಯ ಸಮಾವೇಶ

ಬೆಳ್ತಂಗಡಿ: ಶಿಶಿಲ- ಬೈರಾಪುರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿ ಪಡಿಸಿ ಹಕ್ಕೋತ್ತಾಯ ಸಮಿತಿ, ಶಿಶಿಲ ಇದರ ವತಿಯಿಂದ ಸೋಮವಾರ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿ ವಾಹನ ಜಾಥಾ ಹಾಗೂ ಬೃಹತ್ ಹಕ್ಕೋತ್ತಾಯ ಸಮಾವೇಶ ನಡೆಯಿತು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಅಭಿವೃದ್ಧಿಗೆ ವೇಗ ನೀಡಬೇಕು. ಈ ಭಾಗದ ಜನರ ಸಂಚಾರ, ಆರೋಗ್ಯ, ಕೃಷಿ ಹಾಗೂ ವ್ಯಾಪಾರ ವಹಿವಾಟಿಗೆ ಅನುಕೂಲ ಕಲ್ಪಿಸಬೇಕು ಎಂಬ ಒತ್ತಾಯ ಸಮಾವೇಶದಲ್ಲಿ ವ್ಯಕ್ತವಾಯಿತು.

ಸಮಾವೇಶಕ್ಕೂ ಮೊದಲು ಅರಸಿನಮಕ್ಕಿ ಪರಿಸರದ ಏಳು ಗ್ರಾಮಗಳ ಗ್ರಾಮಸ್ಥರಿಂದ ಅರಸಿನಮಕ್ಕಿ ಆಟದ ಮೈದಾನದಿಂದ ಹಕ್ಕೊತ್ತಾಯ ಸಮಾವೇಶ ಸ್ಥಳದ ವರೆಗೆವಾಹನ ಜಾಥಾ ನಡೆಯಿತು. ಜಾಥಾಗೆ ಚಾಲನೆ ನೀಡಿದ ಮಾಜಿ ಸಚಿವ ಬಿ.ಬಿ. ಲಿಂಗಯ್ಯ ಮಾತನಾಡಿ, ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗಾಗಿ ಈ ಹಿಂದೆಯೂ ಸಾಕಷ್ಟು ಪ್ರಯತ್ನಗಳು ಹಾಗೂ ಹೋರಾಟಗಳು ನಡೆದಿವೆ. ರಸ್ತೆ ಅಭಿವೃದ್ಧಿಯ ಬೇಡಿಕೆಗೆ ಎಲ್ಲರೂ ಒಗ್ಗಟ್ಟಿನ ಧ್ವನಿ ನೀಡಬೇಕು ಎಂದು ಅವರು ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ಜನರ ಒಗ್ಗಟ್ಟು ಮತ್ತು ಶಕ್ತಿಯನ್ನು ತೋರಿಸುವ ಮೂಲಕ ಶಿಶಿಲ-ಬೈರಾಪುರ ಭಾಗದ ಗ್ರಾಮಸ್ಥರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಹೋರಾಟ ರಸ್ತೆ ಅಭಿವೃದ್ಧಿಯ ಯಶಸ್ಸಿಗೆ ನಾಂದಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಗ್ರಾಮೀಣ ಜನರ ಕಷ್ಟಗಳನ್ನು ಪರಿಹರಿಸಲು ರಸ್ತೆ ಅಭಿವೃದ್ಧಿ ಅತ್ಯಗತ್ಯ. ಈ ರಸ್ತೆ ಮಲೆನಾಡು ಮತ್ತು ತುಳುನಾಡನ್ನು ಬೆಸೆಯುವ ಸಂಪರ್ಕ ಕೊಂಡಿಯಾಗಲಿದೆ ಎಂದು ತಿಳಿಸಿದರು.

ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ, ರಸ್ತೆ ಅಭಿವೃದ್ಧಿಗೊಂಡರೆ ಈ ಭಾಗದ ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವೇಗ ದೊರೆಯುವುದರೊಂದಿಗೆ ಜನರ ಜೀವನಮಟ್ಟ ಸುಧಾರಿಸಲಿದೆ ಎಂದು ಹೇಳಿದರು.

ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿಪಡಿಸಿ ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಅಭಿವೃದ್ಧಿಗೆ ಒತ್ತಾಯಿಸಿ ಜನಪ್ರತಿನಿಗಳಿಗೆ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್. ನರಗುಂದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಶಿಶಿಲದಿಂದ ಅರಸಿನಮಕ್ಕಿ ತನಕ ವಾಹನ ಜಾಥ ನಡೆಯಿತು. ಧರ್ಮಸ್ಥಳ ಪೊಲೀಸ್ ಠಾಣೆಯ ಎಸ್‌ಐ ಸಮರ್ಥ್ ಆರ್ ಗಾಣೀಗೇರ ಪೊಲೀಸ್ ಬಂದೋಬಸ್ತು ನೀಡಿದ್ದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಣ್ಣ ನಿಡ್ವಾಳೆ ಮೂಡಿಗೆರೆ, ಬೆಳ್ತಂಗಡಿ ಸಿ.ಪಿ.ಐ.ಎಂ. ತಾಲೂಕು ಕಾರ್ಯದರ್ಶಿ ಬಿ.ಎಂ. ಭಟ್ ಕೆ.ಪಿ.ಸಿ.ಸಿ. ಜಿಲ್ಲಾ ಕಾರ್ಯದರ್ಶಿ ಎ.ಸಿ. ಮ್ಯಾಥ್ಯು, ಕರ್ನಾಟಕ ಗೃಹ ಮಂಡಳಿ ಮಾಜಿ ಅಧ್ಯಕ್ಷರು ಹಾಲಪ್ಪ ಗೌಡ್ರು, ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ ಹಕ್ಕೋತ್ತಾಯ ಸಮಿತಿ ಕಾರ್ಯದರ್ಶಿಧರ್ಮರಾಜ್ ಗೌಡ ಅಡ್ಕಾಡಿ, ಚಿಕ್ಕಮಗಳೂರು ಕೆ.ಆರ್.ಆರ್.ಡಿ.ಎ. ನಿವೃತ್ತ ಎ.ಇ.ಇ. ಎಚ್. ಎಂ. ಶಿವಪ್ರಕಾಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕೊಕ್ಕಡ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಮಾಜಿ ಅಧಕ್ಷ ನಾಗೇಶ್ ಕುಮಾರ್ ಗೌಡ, ಕೆಂಪೇಗೌಡ ಒಕ್ಕಲಿಗ ಸಂಘದ ಅಧ್ಯಕ್ಷ ಬಕ್ಕಿ ಪ್ರಸಾದ್, ತಾ.ಪಂ.ಮಾಜಿ.ಸದಸ್ಯ ವಾಮನ ತಮನ್ಕರ್, ಪ್ರಮುಖರಾದ ಜಯರಾಮ ನೆಲ್ಲಿತ್ತಾಯ, ಸಂಪತ್ ಬಿ.ಸುವರ್ಣ, ಕೊರಗಪ್ಪ ನಾಯ್ಕ್, ಈಶ್ವರ ಬೈರಾ, ನವೀನ್ ನೆರಿಯ, ಉರಬನೆ ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ನಚಿಕೇತ್, ಸಂತೋಷ್, ಮೋಯಿದ್ದಿನ್, ಸಮಿತ್ರೇ ಗೌಡ ಬೈರಾಪುರ, ಅರಸಿನಮಕ್ಕಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸುಧೀರ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.ರಮೇಶ್ ಬೈರಕಟ್ಟೆ ಹಕ್ಕೋತ್ತಾಯ ವಿಷಯವನ್ನು ಪ್ರಾಸ್ತಪಿಸಿದರು. ಶಿಶಿಲ ಗ್ರಾ. ಪಂ. ಮಾಜಿ ಅಧ್ಯಕ್ಷ ಸಂದೀಪ್ ಶಿಶಿಲ ಸ್ವಾಗತಿಸಿ, ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ರಾಘವೇಂದ್ರ ನಾಯಕ್ ವಂದಿಸಿ, ಪ್ರವೀಣ್ ಕುಲಾಲ್ ನಿರೂಪಿಸಿದರು.

Related posts

ಬೆಳಾಲು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಅನಂತ ಚತುರ್ದಶಿ ನೋಂಪು ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶಿಬಾಜೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಅಕ್ರಮ ಜೂಜಾಟದ ಮೇಲೆ ವೇಣೂರು ಪೊಲೀಸರ ದಾಳಿ: 17 ಮಂದಿ ಆರೋಪಿಗಳ ಬಂಧನ

Suddi Udaya

ನಾರಾವಿ: ಮನೆಯಲ್ಲಿ ಯಾರು ಇಲ್ಲದ ವೇಳೆ ರೂ. 9.5 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya

ಪಾಂಡವರಕಲ್ಲು ಶ್ರೀ ರಾಜನ್ ದೈವ ಕೊಡಮಣಿತ್ತಾಯ ಶ್ರೀ ಬ್ರಹ್ಮ ಬೈದೆರೆ ಗರೋಡಿ ಕ್ಷೇತ್ರದ ಆಡಳಿತ ಮೊಕ್ತೇಸರ ರತ್ನಕುಮಾರ್ ಆರಿಗ ನಿಧನ

Suddi Udaya
error: Content is protected !!