ಬೆಳ್ತಂಗಡಿ: ಉಜಿರೆಯ ಪ್ರತಿಷ್ಠಿತ ಸಹನಾಶ್ರೀ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಇದರ ನೂತನ 2ನೇ ಶಾಖೆಯು ನ.2ರಂದು ಇಂದಬೆಟ್ಟು ತೇಜಸ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದ.ಕ ಜಿಲ್ಲಾ ಸಚಿವರಾದ ಯು.ಟಿ. ಖಾದರ್ ಫರೀದ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ರಾಜೇಶ್ ಪುದುಶೇರಿಯಂತಹ ಯುವಕರ ಪ್ರಾಮಾಣಿಕ ಬದ್ಧತೆ, ಪ್ರಯತ್ನಕ್ಕೆ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡುವುದಕ್ಕೆ ಬಂದವನು ನಾನು. ರಾಜೇಶ್ ಪುದುಶೇರಿ ಅವರ ವ್ಯಕ್ತಿತ್ವ ಎಲ್ಲಾ ಯುವಕರಿಗೆ ಮಾದರಿಯಾಗಲಿ.ಸಹನಾಶ್ರೀ ಬ್ಯಾಂಕ್ ಸ್ವಾಭಿಮಾನ, ಕಠಿಣ ಪರಿಶ್ರಮದ ಸಂಕೇತವಾಗಿದೆ ಎಂದರು.

ಎಸ್ರ ಫೌಂಡೇಶನ್ ನ ಅಧ್ಯಕ್ಷರಾದ ರೇ। ಫಾ| ಶಾಜಿ ಮ್ಯಾಥ್ಯ ಮ್ಯಾಥ್ಯೂ ವೆಟಮ್ ತಡತ್ತಿಲ್ ಅವರು ಆಶೀರ್ವಚನಗೈದರು. ಬಂಗಾಡಿ ಅರಮನೆಯ ರವಿರಾಜ್ ಬಳ್ಳಾಲ್ ದೀಪ ಪ್ರಜ್ವಲನೆಗೊಳಿಸಿದರು. ಸಹನಾಶ್ರೀ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಹಾಗೂ ಸಹನಾಶ್ರೀ ಫೌಂಡೇಶನ್ ಸ್ಥಾಪಕಾಧ್ಯಕ್ಷರಾದ ರಾಜೇಶ್ ಪುದುಶೇರಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ ಹರೀಶ್ ಕುಮಾರ್, ಬೆಳ್ತಂಗಡಿ ತಾಲೂಕು ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕಾಂಗ್ರೆಸ್ ಮುಖಂಡಉದಯ್ ಶೆಟ್ಟಿ ಮುನಿಯಾಲ್, ಭಾರತೀಯ ಆಹಾರ ನಿಗಮ ಸದಸ್ಯ ವೇಣು ಯಾದವ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಮಿತಾ ಪೂಜಾರಿ, ಹಿರಿಯ ಸಹಕಾರಿ ಧುರಿಣಲಕ್ಷಣ ಗೌಡ ಇರ್ತಿಲಾಲ್, ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್ ನಾವೂರು, ಡಿ.ಎಸ್.ಎಸ್ ಅಂಬೇಡ್ಕರ್‌ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ.ಕೆ. ವಸಂತ್, ದ.ಕ ಸಹಕಾರಿ ಅಭಿವೃದ್ಧಿ ಅಧಿಕಾರಿ ನಂದನ್ ಬಿ.ಎನ್, ದೀಪಕ್ ಪಿಲಾರ್ ಕೌನ್ಸಿಲರ್ ಸೋಮೇಶ್ವರ ಪುರಸಭೆ, ಅಲ್ಪಸಂಖ್ಯಾತರ ಘಟಕ ಬೆಳ್ತಂಗಡಿ ಅಧ್ಯಕ್ಷ ಪಿ.ಟಿ. ಸೆಬಾಸ್ಟಿಯನ್, ಡಾ. ವಾಣಿ ಸುಗುಣ ಕುಮಾರ್ ಭಾಗವಹಿಸಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ವೇದಿಕೆಯಲ್ಲಿ ಸಚಿವರಾದ ಯು.ಟಿ. ಖಾದರ್ ಫರೀದ್, ಸಂಘದ ಅಧ್ಯಕ್ಷ ರಾಜೇಶ್ ಪುದುಶೇರಿ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ ಹಿರಿಯ ಸಹಕಾರಿ ಧುರಿಣ ಲಕ್ಷಣ ಗೌಡ ಇರ್ತಿಲಾಲ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ವೀರಪ್ಪ ಮೊಯ್ಲಿ, ಎಲಿಯಾ, ಸುಲೈಮಾನ್ ಎರ್ಮಲ,ಪಿ.ಡಿ ಆಂತೋನಿ, ನಾಟಿ ವೈದ್ಯ ಗಂಗಯ್ಯ ಮುಗೇರ, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡ ಮಹಮ್ಮದ್ ಪುತ್ತುಮೋನು, ಉರಗ ರಕ್ಷಕ ಪ್ರಸನ್ನ ಬಂಗಾಡಿ, ಯಕ್ಷಗಾನ ಕಲಾವಿದ ಜನಾರ್ಧನ ಗುಡಿಗಾರ್ ರವರನ್ನು ಸನ್ಮಾನಿಸಲಾಯಿತು.

ಸಿಬ್ಬಂದಿಗಳಾದ ಸ್ವಾತಿ ಹರಿಪ್ರಸಾದ್, ಸಂಪತ್ ಕುಮಾರ್ ಬಿ.ಎ, ರಕ್ಷಿತ್, ಸುಪ್ರೀತಾ, ಸ್ವಾತಿ, ಮಹಮ್ಮದ್ ಸಹಕರಿಸಿದರು. ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯ ಸ್ವಾಗತಿಸಿದರು. ತನ್ಸಿಫ್ ಬಿಎಂ ಕಿಲ್ಲೂರು ನಿರೂಪಿಸಿದರು.












