November 3, 2026
Uncategorized

ಬೆಳ್ತಂಗಡಿಯಲ್ಲಿ ತಿರಂಗಾ ನಡಿಗೆ ಮತ್ತು ಪ್ರತಿಭಟನೆ :ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂವಿಧಾನ ವಿರೋಧಿ:ಶಿವಸುಂದರ್

ಬೆಳ್ತಂಗಡಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂವಿಧಾನ ವಿರೋಧಿಯಾದುದು. ಇದರ ವಿರುದ್ಧ ನಾವು ಸಂವಿಧಾನದ ಆಧಾರಿತ ಹೋರಾಟ ನಡೆಸುತ್ತಿದ್ದರೆ , ಬಿಜೆಪಿ, ಸಂಘಪರಿವಾರ ಮನುಸ್ಮೃತಿ ಆಧಾರಿತ ಹೋರಾಟ ನಡೆಸಿದ್ದಾರೆ. ಆದುದರಿಂದ ದೇಶದಾದ್ಯಂತ ಸಂವಿಧಾನ ಮತ್ತು ಮನುಸ್ಮೃತಿ ನಡುವಿನ ಸಂಘರ್ಷ ಆರಂಭವಾಗಿದ್ದು , ಅಂತಿಮ ಜಯ ಸಂವಿಧಾನಕ್ಕೆ ಲಭಿಸಲಿದೆ ಎಂದು ಖ್ಯಾತ ಅಂಕಣಕಾರ , ಚಿಂತಕ ಶಿವಸುಂದರ್ ಹೇಳಿದರು.

ಅವರು ಲೋಕತಂತ್ರ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಸೋಮವಾರ ಬೆಳ್ತಂಗಡಿಯಲ್ಲಿ ನಡೆದ ತಿರಂಗಾ ನಡಿಗೆ ಮತ್ತು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಎಸ್ಐಆರ್ ಹೆಸರಿನಲ್ಲಿ ದೇಶದಾದ್ಯಂತ 13 ಕೋಟಿ ಮತದಾರರನ್ನು ರಾಜ್ಯದಲ್ಲಿ 1 ಕೋಟಿ ಮತದಾರರನ್ನು ಕೈಬಿಡಲಾಗಿದ್ದು , ಇದನ್ನು ಸಹಿಸಲು ಸಾಧ್ಯವಿಲ್ಲ. ನುಸುಳುಕೋರರನ್ನು ಪತ್ತೆ ಹಚ್ಚುವ ನೆಪದಲ್ಲಿ ಭಾರತೀಯ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ದೇಶದ್ರೋಹಿ ಕೆಲಸವನ್ನು ಚುನಾವಣಾ ಆಯೋಗದ ಮೂಲಕ ಜ್ಞಾನೇಶ್ ಕುಮಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು ರಾಜ್ಯದಲ್ಲಿ 1 ಕೋಟಿ ಮತದಾರರನ್ನು ಕೈಬಿಟ್ಟಿರುವ ಚುನಾವಣಾ ಆಯೋಗದ ಕ್ರಮವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ ಅವರು ಎಸ್ಐಆರ್ ರದ್ದುಗೊಳಿಸುವ ಹಾಗೂ ಜ್ಞಾನೇಶ್ ಕುಮಾರ್ ರಾಜಿನಾಮೆ ನೀಡುವ ತನಕವೂ ಪ್ರಜಾಪ್ರಭುತ್ವ ಉಳಿಸುವ ಹೋರಾಟಗಳು ನಡೆಯಲಿದೆ ಎಂದರು.

ಲೋಕತಂತ್ರ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ಸಂಚಾಲಕ ಶೇಖರ್ ಲಾಯಿಲ ಮಾತನಾಡಿ ಬಿಜೆಪಿ ವಿರೋಧಿ ಮತದಾರರನ್ನು ಕಿತ್ತೆಸೆಯಲು ನರೇಂದ್ರ ಮೋದಿ ಮತ್ತು ಅಮಿಶ್ ಶಾ ತಂಡ ಜ್ಞಾನೇಶ್ ಕುಮಾರ್ ಮೂಲಕ ಆರ್ ಎಸ್ ಎಸ್ ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸುತ್ತಿದೆ. ದಲಿತ, ಆದಿವಾಸಿ, ಮುಸ್ಲಿಂ, ಕ್ರೈಸ್ತ, ಹಿಂದುಳಿದ ವರ್ಗಗಳ ಮತದಾರರನ್ನು ವ್ಯವಸ್ಥಿತವಾಗಿ ಹೊರಗಿಡಲಾಗುತ್ತಿದೆ. ಸ್ವಾಯತ್ತ ಸಂಸ್ಥೆಯಾಗಿದ್ದ ಚುನಾವಣಾ ಆಯೋಗವನ್ನು ಇಂದು ಆರ್ ಎಸ್ ಎಸ್ ಕಚೇರಿಯಾಗಿ ಪರಿವರ್ತಿಸಲಾಗಿದೆ. ದೇಶದ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ದೇಶದಾದ್ಯಂತ ನಡೆಯುತ್ತಿರುವ ಜನಾಂದೋಲನಕ್ಕೆ ಶಕ್ತಿ ತುಂಬಲು ಈ ಹೋರಾಟ ಬೆಳ್ತಂಗಡಿಯಲ್ಲಿ ನಡೆಸಲಾಗಿದೆ ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ಜಿಲ್ಲಾ ಸಂಚಾಲಕ , ನ್ಯಾಯವಾದಿ ವಿನೋದ್ ಮಸ್ಕರೇನಸ ಆರ್ ವೈಎ ಜಿಲ್ಲಾ ಉಪ ಸಂಚಾಲಕ ಲುಕ್ಮಾನ್ ನೆಲ್ಯಾಡಿ , ವೆಲ್ಪೆರ್ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಪದರಂಗಿ , ಎಸ್ಕೆಎಸ್ಎಸ್ಎಫ್ ನ ರಾಜ್ಯ ಉಪಾಧ್ಯಕ್ಷ ಕೆ.ಎಸ್ ಇಕ್ಬಾಲ್ ಬಾಳಿಲ ಮಾತನಾಡಿದರು.

ನೇತೃತ್ವವನ್ನು ಲೋಕತಂತ್ರ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ಸಹ ಸಂಚಾಲಕರಾದ ಶಾಫಿ ಬಂಗಾಡಿ , ಗ್ರೇಸಿ ಲೋಬೋ , ವೆಲ್ಪೆರ್ ಪಾರ್ಟಿ ಜಿಲ್ಲಾಧ್ಯಕ್ಷ ಎಂ‌ ದಿವಾಕರ ರಾವ್ , ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಜಾರುದ್ದೀನ್ , ಸೋಲಿಡಾರ್ಟಿ ಯೂತ್ ಮೂಮೆಂಟ್ ಜಿಲ್ಲಾಧ್ಯಕ್ಷ ಅಸ್ಲಾಂ ಪಂಜಲ , ಮುಖಂಡರಾದ ಸಂಜೀವ್ ನಾಯ್ಕ್ , ನಿಲೇಶ್ ಹೆಚ್ ಪೆರಿಂಜೆ ಮೊದಲಾದವರು ವಹಿಸಿದ್ದರು.
ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದ ವರೆಗೆ ಬಾರಿ ಮಳೆಯ ನಡುವೆಯೂ ತಿರಂಗಾ ನಡಿಗೆ ನಡೆಯಿತು. ಪ್ರತಿಭಟನಾಕಾರರು ಮಳೆಯಲ್ಲಿ ನೆನೆಯುತ್ತಲೆ ನಡಿಗೆಯಲ್ಲಿ ಪಾಲ್ಗೊಂಡರು. ಪ್ರತಿಭಟನೆಕಾರರೊಂದಿಗೆ ಶಿವಸುಂದರ್ ರವರು ನೆನೆಯುತ್ತಲೆ ನಡಿಗೆಯಲ್ಲಿ ಪಾಲ್ಗೊಂಡರು.

Related posts

ಸುದ್ದಿ ಉದಯ ವರದಿಯ ಫಲಶ್ರುತಿ: ಬಾರ್ಯ ಸರಳಿಕಟ್ಟೆ ಮೇಗಿನ ಪುಯಿಲದಲ್ಲಿ ತುಂಡಾಗಿ ಬೀಳುತ್ತಿರುವ ವಿದ್ಯುತ್ ತಂತಿಗಳು ವರದಿ ಬೆನ್ನಲ್ಲೇ ಮೆಸ್ಕಾಂ ಇಲಾಖೆಯಿಂದ ದುರಸ್ತಿ ಕಾರ್ಯ

Suddi Udaya

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ಕ್ಯೂಆರ್ ಕೋಡ್ ಮತ್ತು ಲೋಗೋ ಬಿಡುಗಡೆ

Suddi Udaya

ಪ್ರಾಜೆಕ್ಟ್ ಡಿಸೈನ್ ವಿಭಾಗದಲ್ಲಿ ಎಕ್ಸ್ ಪ್ರೋ 201 ಅವಾರ್ಡ್, ವಾರಾಣಸಿ ಸುಬ್ರಾಯ ಭಟ್ ಅವಾರ್ಡ್, ಪ್ರೋಡೆಕ್ಟ್ ಇಂಜಿನಿಯರ್ ಅವಾರ್ಡ್ ಪಡೆದ ಅಜಿತ್ ಕುಮಾರ್ ತೆಂಕಕಾರಂದೂರು

Suddi Udaya

ಅಕ್ರಮ ಗಣಿಗಾರಿಕೆ : ಶಶಿರಾಜ್ ಶೆಟ್ಟಿ ಮತ್ತು ಪ್ರಮೋದ್ ಗೌಡ ಜಾಮೀನು

Suddi Udaya

ವೇಣೂರು: ಪಶು ಅಧಿಕಾರಿ ಸುಕೀರ್ತಿ ಜೈನ್ ಸೇವಾ ನಿವೃತ್ತಿ: ಸನ್ಮಾನ

Suddi Udaya

ವೇಣೂರು: ಮೂಡುಕೋಡಿಯಲ್ಲಿ ಗಾಳಿ ಮಳೆಗೆ ಮನೆಗೆ ಮರ ಬಿದ್ದು ಹಾನಿ: ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ ರಾಜೇಶ್ ಪೂಜಾರಿ ಮೂಲಕ ಮನೆ ದುರಸ್ತಿ, ವಿದ್ಯುತ್ ಕಂಬಗಳ ಮರುಸ್ಥಾಪನೆ

Suddi Udaya
error: Content is protected !!