ಬೆಳ್ತಂಗಡಿ; ಭಾರತ ರಾಷ್ಟ್ರೀಯ ಕಾಂಗ್ರೆಸ್ ಕುವೆಟ್ಟು ಗ್ರಾಮ, ವಾರ್ಡ್ ಸಂಖ್ಯೆ 2 ರ ಸಮಿತಿ ರಚನೆಯು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರ ನೇತೃತ್ವದಲ್ಲಿ ನಡೆಯಿತು.
ಇದೇ ವೇಳೆ ಈ ಸಮಿತಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಿ ಪದಾಧಿಕಾರಿಗಳನ್ನು ಹಾಗೂ ಸಲಹೆಗಾರರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮೊಹಮ್ಮದ್ ನಝೀರ್, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಬಿ.ಎಚ್., ಉಪಾಧ್ಯಕ್ಷರುಗಳಾಗಿ ಸುಮಿತ್ ಪೂಜಾರಿ ಮತ್ತು ಗುಲಾಬಿ, ಜೊತೆ ಕಾರ್ಯದರ್ಶಿಯಾಗಿ ಸಿರಾಜ್ ಎಚ್., ಕೋಶಾಧಿಕಾರಿಯಾಗಿ ನಿಸಾರ್ ಪಿ.ಕೆ ಇವರು ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಕಾಸಿಂ ಬದ್ಯಾರ್, ಸಲಹೆಗಾರರಾಗಿ ಹಾರಿಸ್ ಮದಡ್ಕ, ಗೋಪಿನಾಥ್, ಧನಂಜಯ ರಾವ್ ಇವರನ್ನೂ ಆರಿಸಲಾಯಿತು.













