ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು, ಇವರು ನಡೆಸುವ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮೆಸ್ಕಾಂ ಬೆಳ್ತಂಗಡಿ ಉಪವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿರುವ ಲೀಲಾವತಿ ಬಿ. ಮತ್ತು ಹರ್ಷ ಕೆ ಕುತ್ಯಾರು ದಂಪತಿ ಪುತ್ರಿ, ಹೋಲಿ ರೇಡಿಮೆರ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ “ಕಲಾ ನಿಕೇತನ ” ನೃತ್ಯ ಸಂಸ್ಥೆಯ ನೃತ್ಯಾರ್ಥಿ, . ಲಹರಿ ಕೆ ಇವರು ಶೇ.96.75% ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಇವರಿಗೆ ನೃತ್ಯಗುರು, ವಿದುಷಿ ವಿದ್ಯಾ ಮನೋಜ್ ಇವರು ತರಬೇತಿ ನೀಡಿರುತ್ತಾರೆ ಮತ್ತು ಸಂಗೀತ ಗುರುಗಳಾದ ವಿಜಯಲಕ್ಷ್ಮಿ ರಾವ್ ಪಿ. ಇವರ ಶಿಷ್ಯೆಯಾಗಿರುತ್ತಾರೆ.













