November 3, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಅಳದಂಗಡಿ ಜುಮ್ಮಾ ಮಸ್ಜಿದ್ ಮಹಾಸಭೆ: ನೂತನ ಅಧ್ಯಕ್ಷರಾಗಿ ಅಬ್ದುಲ್‌ ಅಝೀಝ್ ಎ.ಕೆ ಆಯ್ಕೆ

ಬೆಳ್ತಂಗಡಿ; ನೂರುಲ್ ಇಸ್ಲಾಂ ಜುಮ್ಮಾ ಮಸ್ಜಿದ್ ಮತ್ತು ಮದರಸ ಅಳದಂಗಡಿ ಇದರ ವಾರ್ಷಿಕ ಮಹಾಸಭೆ ಅ.30 ರಂದು ನಡೆದು ನೂತ‌ನ ಆಡಳಿತ ಮಂಡಳಿಯ ರಚಿಸಲಾಯಿತು.

ಜಮಾಅತ್ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ನಿರ್ದೇಶನುಸಾರ ಜಮಾಅತ್ ಗೌರವಾಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಇವರ‌ ನೇತೃತ್ವದಲ್ಲಿ ಜುಮಾ ನಮಾಜ್ ಬಳಿಕ ಮಹಾಸಭೆಯ ಪ್ರಕ್ರೀಯೆಗಳು ನಡೆದವು.

ಅಧ್ಯಕ್ಷತೆಯನ್ನು ಮಬ್ಯಾಝ್ ಸುಂಕದಕಟ್ಟೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಿತಿ ರಚಿಸಲಾಗಿ ನೂತನ ಅಧ್ಯಕ್ಷರಾಗಿ ಉದ್ಯಮಿ ಅಬ್ದುಲ್ ಅಝೀಝ್ ಎ.ಕೆ, ಪ್ರ.ಕಾರ್ಯದರ್ಶಿಯಾಗಿ ಹಾಜಿ ಅಬ್ದುಲ್ ಖಾದರ್, ಕೋಶಾಧಿಕಾರಿಯಾಗಿ ಅಬ್ದುಲ್ ಕರೀಂ, ಉಪಾಧ್ಯಕ್ಷರಾಗಿ ಇಸಾಕ್ ಅಳದಂಗಡಿ, ಜೊತೆ ಕಾರ್ಯದರ್ಶಿಯಾಗಿ ನವಾಝ್ ಅಳದಂಗಡಿ ಮತ್ತು ರಫೀಕ್ ಸುಪಾರಿ, ಸದಸ್ಯರಾಗಿ ಹಸೈನಾರ್ ಪಡ್ಯೂಡಿ, ಹಮೀದ್ ಪಡ್ಯೂಡಿ, ಅಬ್ದುಲ್ ಅಝೀಝ್ ಸುಂಕದಕಟ್ಟೆ, ರಝಾಕ್ ಸುಂಕದಕಟ್ಟೆ ಹಾಗೂ ಆಸೀಫ್ ಪಿಶ್ ಇವರನ್ನು ಆಯ್ಕೆ ಮಾಡಲಾಯಿತು.

ನೂರುಲ್ ಇಸ್ಲಾಂ ಜುಮಾ ಮಸ್ಜಿದ್ ಖತೀಬ್ ಮುಸ್ತಫಾ ಹಿಮಮಿ ಫುರ್ಖಾನಿ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಅಬುಬಕ್ಕರ್ ಅಳದಂಗಡಿ ವರದಿ ವಾಚನ ಮತ್ತು ಲೆಕ್ಕಪತ್ರ ಮಂಡಿಸಿದರು.

Related posts

ನಾಳೆ (ಏ.19): ವಿ.ಹಿಂ.ಪ. ಬೆಳ್ತಂಗಡಿ ಪ್ರಖಂಡದಿಂದ ಉಜಿರೆಯಲ್ಲಿ ರಾಮೋತ್ಸವ; ಚಕ್ರವರ್ತಿ ಸೂಲಿಬೆಲೆಯವರಿಂದ ಧಾರ್ಮಿಕ ಉಪನ್ಯಾಸ

Suddi Udaya

ಜ.24: ಬೆಳ್ತಂಗಡಿಯಲ್ಲಿ “ಬಪ್ಪನಾಡು ಕ್ಷೇತ್ರ ಮಹಾತ್ಮೆ” ಯಕ್ಷಗಾನ ಬಯಲಾಟ

Suddi Udaya

ಧರ್ಮಸ್ಥಳ ಕ್ಷೇತ್ರ ಹಾಗೂ ಡಾ.ಡಿ. ಹೆಗ್ಗಡೆಯವರ ಜತೆ ನಾವು ನಿಲ್ಲುತ್ತೇವೆ: ಮಾಜಿ ಸಚಿವ ಜನಾರ್ದನ ಪೂಜಾರಿ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ

Suddi Udaya

ಕುಮಟಾ ನೆರೆಪೀಡಿತ ಪ್ರದೇಶಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತುರ್ತು ನೆರವು

Suddi Udaya

ಬೆಳ್ತಂಗಡಿ ನ್ಯಾಯಾಲಯ ಸಂಕೀರ್ಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Suddi Udaya
error: Content is protected !!