November 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಾರ್ಯ: ಪೆರಿಯೊಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಬಾರ್ಯ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಯೊಟ್ಟು, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಯುವವಾಹಿನಿ ಉಪ್ಪಿನಂಗಡಿ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಬಾರ್ಯಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಿಲಿಗೂಡು-ಬಾರ್ಯ ಇವರ ಸಹಯೋಗದೊಂದಿಗೆ 2026-27ನೇ ಸಾಲಿನ ಸಿ.ಎಸ್.ಆರ್ ಚಟುವಟಿಕೆ-ಪ್ರಾಜೆಕ್ಟ್ ಐ-ಕೇರ್ ಅಡಿಯಲ್ಲಿ ನ.1ರಂದು ಉಚಿತ ನೇತ್ರ ತಪಾಸಣಾ ಶಿಬಿರವನ್ನು ನಡೆಸಲಾಯಿತು.

ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಅಶಿತ್ ಎಂ.ವಿ. ಶಿಬಿರವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಅಧ್ಯಕ್ಷ ಮೋಹನ್ ಗೌಡ, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಮನೋಜ್ ಎನ್. ಸಾಲಿಯಾನ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಯೊಟ್ಟು ಇದರ ಮುಖ್ಯೋಪಧ್ಯಾಯ ಹರೀಶ್ ಹಾಗೂ ಜಸ್ಟಿಸ್ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೃಷಿಕೇಶ್ ಅಮಿನ್ ಭಾಗವಹಿಸಿದ್ದರು.

ಜೆ.ಜಿ.ಎಂ-ಎಂ.ಎಸ್. ಆದ ಡಾ. ಕೆ. ಯೋಗಿಶ್ ಸ್ವಾಗತಿಸಿ, ಪ್ರಾಜೆಕ್ಟ್ ಐ-ಕೇರ್ ಕುರಿತು ಮಾಹಿತಿ ನೀಡಿದರು. ಜಿ.ಎಂ-ಎಚ್.ಆರ್. ಆದ ಶ್ರೀ ಚೇತನ್ ಮೆಂಡೋನ್ಸ ಕಂಪನಿ ಹಾಗೂ ಸಿ.ಎಸ್.ಆರ್ ಚಟುವಟಿಕೆಗಳ ಕುರಿತು ಪರಿಚಯಿಸಿದರು.

ಪಿ.ಪಿ.ಎಲ್-ಮಂಗಳೂರು ಘಟಕದ ಸಿ.ಎಂ.ಒ ಷಣ್ಮುಗಂ ಪಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಹಾಯಕ ವ್ಯವಸ್ಥಾಪಕ ಅಭಿನಂದನ್ ಮತ್ತು ಸಹಾಯಕ ವ್ಯವಸ್ಥಾಪಕ-ಎಚ್ ಆರ್. ವಿವೇಕ್ ಕೋಟ್ಯಾನ್ ಶಿಬಿರದ ನಿರ್ವಹಣೆಯನ್ನು ಸಂಯೋಜಿಸಿದರು. ನಯನಾ ಮನೋಹರ್ ಕಾರ್ಯಕ್ರಮ ನಿರೂಪಿಸಿದರು. ಧನ್ಯಶ್ರೀ ಮತ್ತು ಪ್ರಾಪ್ತಿ ಪ್ರಾರ್ಥಿಸಿದರು. ಮನೋಜ್ ಎನ್ ಸಾಲ್ಯಾನ್ ಧನ್ಯವಾದವಿತ್ತರು.

ದೇರಳಕಟ್ಟೆಯ ಮಂಗಳೂರಿನ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಡಾ. ಜಯರಾಮ್ ಶೆಟ್ಟಿ, ಡಾ. ಹೃಷಿಕೇಶ್ ಅಮಿನ್, ಡಾ. ವಿಜಯ್ ಪೈ ಹಾಗೂ ವೈದ್ಯರ ತಂಡವು ರೋಗಿಗಳನ್ನು ತಪಾಸಣೆ ನಡೆಸಿ ಅಗತ್ಯ ಸಲಹೆ ಹಾಗೂ ಚಿಕಿತ್ಸೆಯನ್ನು ನೀಡಿದರು.

ಶಿಬಿರದಲ್ಲಿ ಒಟ್ಟು 176 ಜನರನ್ನು ತಪಾಸಣೆ ಮಾಡಲಾಗಿದ್ದು, ಇವರಲ್ಲಿ 111 ಜನರಿಗೆ ಕಣ್ಣಿನ ದೃಷ್ಟಿ ದೋಷ ಸರಿಪಡಿಸಲು ಬಿ.ಪಿ.ಎಲ್ ವತಿಯಿಂದ ಉಚಿತವಾಗಿ ಕನ್ನಡಕಗಳನ್ನು ಒದಗಿಸಲಾಗುವುದು ಮತ್ತು 27 ಜನರನ್ನು ಶಸ್ತ್ರಚಿಕಿತ್ಸೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಉಚಿತವಾಗಿ ಶಿಫಾರಸು ಮಾಡಲಾಗಿದೆ. ಶಿಬಿರದಲ್ಲಿ ಸಕ್ಕರೆ ಕಾಯಿಲೆಗಾಗಿ ರಕ್ತ ತಪಾಸಣೆಯನ್ನು ಸಹ ನಡೆಸಲಾಯಿತು.

Related posts

ಉಜಿರೆ: ಜಿ.ಪಂ ಮಾಜಿ ಸದಸ್ಯ ತುಂಗಪ್ಪ ಗೌಡ ಮರಕಡ ನಿಧನ

Suddi Udaya

ಸೀನಿಯರ್ ನ್ಯಾಶನಲ್ ನೆಟ್ಬಾಲ್ ಪಂದ್ಯಾಟ : ಉಜಿರೆಯ ಎಸ್.ಡಿ.ಎಂ ವಿದ್ಯಾರ್ಥಿಗಳ ಸಾಧನೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯಲ್ಲಿ ಭಾವೈಕ್ಯತೆಯ ಸಂಗಮ ಕಾರ್ಯಕ್ರಮ

Suddi Udaya

ಗುರುವಾಯನಕೆರೆ:ಎಕ್ಸೆಲ್ ಕಾಲೇಜಿನಲ್ಲಿ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್ : ಶೈಕ್ಷಣಿಕ ಸಾಧನೆಗಳ ಮೂಲಕ ರಾಜ್ಯದಲ್ಲಿ ಗುರುತಿಸ್ಪಟ್ಟ ಕಾಲೇಜು ಎಕ್ಸೆಲ್

Suddi Udaya

ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾಸಿಕ ಸಭೆ.

Suddi Udaya

ಮೊಗ್ರು ಪರಿಸರದಲ್ಲಿ ಮಹಾಸಂಪರ್ಕ ಅಭಿಯಾನ ಮತ್ತು ಮತಯಾಚನೆ

Suddi Udaya
error: Content is protected !!