ಪಡoಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಉತ್ಸವದ ಸಲುವಾಗಿ ಭವ್ಯವಾದ ಚಂದ್ರಮಂಡಲ ರಥ, ಪಲ್ಲಕ್ಕಿ ಹಾಗೂ ಬ್ರಹ್ಮರಥವನ್ನು ಸಮರ್ಪಿಸಲು ಭಕ್ತಾದಿಗಳ ಸಹಕಾರದೊಂದಿಗೆ ಹಿರಿಯರು ಯೋಜನೆಯನ್ನು ರೂಪಿಸಿದ್ದಾರೆ.
ಈ ಐತಿಹಾಸಿಕ ರಥಗಳ ನಿರ್ಮಾಣಕ್ಕೆ ಅಂದಾಜು ರೂ.1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಯೋಜನೆಗೆ ಗುರುವಾಯನಕೆರೆ ಮಂಜುಶ್ರೀ ಶಾಮಿಯಾನ ಇದರ ಮಾಲೀಕ ಬೋಜ ಕುಲಾಲ್ ಮತ್ತು ಮನೆಯವರು ರೂ.1 ಲಕ್ಷ ದೇಣಿಗೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಹರಿಪ್ರಸಾದ್ ಇರ್ವತ್ರಾಯ, ಹಿರಿಯರಾದ ಕೃಷ್ಣ ರೈ ಸಬರಬೈಲು, ದಾಮೋದರ್ ಕುoದರ್ ಸಬರಬೈಲು ಉಪಸ್ಥಿತರಿದ್ದರು













