November 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಶ್ರೀ ಧ.ಮ.ಅ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯರ ಅಧಿಕಾರ ಹಸ್ತಾಂತರ

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರ ಅಧಿಕಾರ ಹಸ್ತಾಂತರ ” ಕಾರ್ಯಕ್ರಮ ಅ.31ರಂದು ನಡೆಯಿತು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಸಂಸ್ಕಾರ, ಕೀರ್ತಿ ಮತ್ತು ಇಲ್ಲಿನ ಶ್ರೇಷ್ಠತೆಯನ್ನು ಸವಿವರವಾಗಿ ತಿಳಿಸಿ ಎಂದು ನಿವೃತ್ತ ಗೊಳ್ಳಲಿರುವ ಮುಖ್ಯೋಪಾಧ್ಯಯ ಬಾಲಕೃಷ್ಣ ನಾಯಕ್ ಅವರ ಅಧಿಕಾರ ಅವಧಿಯಲ್ಲಿ ಅವರು ಮಾಡಿದ ಶತಮಾನೋತ್ಸವದ ಕಾರ್ಯಕ್ರಮವನ್ನು ಸ್ಮರಿಸಿ, ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ನೂತನ ಮುಖ್ಯೋಪಾಧ್ಯಾಯರಾಗಿ ಜೋಸೆಫ್ ರವರು ಅಧಿಕಾರ ವಹಿಸಲಿದ್ದಾರೆ ಎಂಬುದನ್ನು ತಿಳಿಸಿದರು ಹಾಗೂ ನೂತನ ಮುಖ್ಯೋಪಾಧ್ಯಾಯರು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರು. ಹಾಗೂ ಎಲ್ಲರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಈ ಶಾಲೆಯನ್ನು ಮುನ್ನಡೆಸಲು ಸೂಕ್ತವಾದ ವ್ಯಕ್ತಿ ಎಂದು ಅಭಿಪ್ರಾಯಪಟ್ಟರು, ನೂತನ ಮುಖ್ಯೋಪಾಧ್ಯಾಯರಿಗೆ ಶುಭ ಕೋರಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್ ಮತ್ತು ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಕೂಸಪ್ಪ ಗೌಡ ಸ್ವಾಗತಿಸಿ, ಪರಮೇಶ್ವರ್ ನಿರೂಪಿಸಿ, ವಂದಿಸಿದರು.

Related posts

ಕಲ್ಮಂಜ: ನಿಡಿಗಲ್ ಆದರ್ಶನಗರದ ನಿವಾಸಿ ಚಂದ್ರಶೇಖರ್ ಎಮ್. ನಿಧನ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಒರಿಸ್ಸಾ ರಾಜ್ಯದ ಸಹಕಾರಿ ಪ್ರತಿನಿಧಿಗಳ ಭೇಟಿ

Suddi Udaya

ಧರ್ಮಸ್ಥಳ: ಜೋಡುಸ್ಥಾನ ನಿವಾಸಿ ಶ್ರೀನಿವಾಸ್ ಭಟ್ ನಿಧನ

Suddi Udaya

ಉಜಿರೆ : ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಅತ್ಯುತ್ತಮ ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ಆಗಿ ಪ್ರಮೀಳಾ ರಿಗೆ ಜಿಲ್ಲಾ ಪ್ರಶಸ್ತಿ

Suddi Udaya

ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯಲ್ಲಿ ಪೋಷಕರಿಂದ ಶ್ರಮದಾನ 

Suddi Udaya
error: Content is protected !!