November 4, 2026
ಪ್ರಮುಖ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವೇಣೂರು: ಭಾಷಣ ಸ್ಪರ್ಧೆಯಲ್ಲಿ ಧನುಶ್ರೀ ಪ್ರಥಮ, ಪ್ರಬಂಧ ಸ್ಪರ್ಧೆಯಲ್ಲಿ ಅನ್ವಿತ ದ್ವಿತೀಯ – ರಾಜ್ಯಮಟ್ಟಕ್ಕೆ ಆಯ್ಕೆ

ವೇಣೂರು: ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಉಪನಿರ್ದೇಶಕರ ಕಚೇರಿ, ದಕ್ಷಿಣ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ವೇಣೂರಿನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.

ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಧನುಶ್ರೀ ಎಸ್. ಕುಲಾಲ್ ಪ್ರಥಮ ಸ್ಥಾನ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಅನ್ವಿತ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿಶೇಷವೆಂದರೆ, ಸತತ ಎರಡನೇ ವರ್ಷವೂ ಈ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ.

ವಿದ್ಯಾರ್ಥಿನಿಯರ ಈ ಸಾಧನೆಗೆ ಕಾಲೇಜಿನ ಉಪಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ವರ್ಗ, ಎಸ್‌ಡಿಎಂಸಿ ಕಾರ್ಯಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

Related posts

ಬಳಂಜ ಗ್ರಾ.ಪಂ. ನ ನೂತನ ಅಧ್ಯಕ್ಷರಾಗಿ ಶೋಭಾ ಕುಲಾಲ್, ಉಪಾಧ್ಯಕ್ಷರಾಗಿ ಯಶೋಧರ ಶೆಟ್ಟಿ ಅವಿರೋಧವಾಗಿ ಆಯ್ಕೆ

Suddi Udaya

ಉಜಿರೆ: ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆ ಕೂಡ ನೇಣುಬಿಗಿದು ಆತ್ಮಹತ್ಯೆ

Suddi Udaya

ಕಕ್ಯಪದವು ಎಲ್‌ಸಿಆರ್ ವಿದ್ಯಾಸಂಸ್ಥೆ: ಕಾಲೇಜು ವಿಭಾಗದಲ್ಲಿ ವಾಣಿಜ್ಯ ಚಟುವಟಕೆ

Suddi Udaya

ಮಚ್ಚಿನ ಸಪರಿವಾರ ಶ್ರೀ ಶಾಸ್ತಾರ ದೇವಸ್ಥಾನ ಮಾಣೂರು ಇದರ ನೂತನ ಭಜನಾ ಮಂಡಳಿಯ ಸಮಿತಿ ರಚನೆ

Suddi Udaya

ನಕಲಿ ನೋಟು ಅಡ್ಡೆ ಮೇಲೆ ಪೊಲೀಸರ ದಾಳಿ : ಪ್ರಿಂಟಿಂಗ್‌ ಮೆಷಿನ್‌ ಜಪ್ತಿ, 7 ಮಂದಿ ವಶಕ್ಕೆ

Suddi Udaya

ಚಾರ್ಮಾಡಿ: ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹೋಮಕುಂಡದ ಭೂಮಿ ಪೂಜೆ

Suddi Udaya
error: Content is protected !!