November 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲೋಬೊ ಮೋಟಾರ್ಸ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಹಬ್ಬದ ಆಫರ್‌ಗಳು

ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ ಬೆಳ್ತಂಗಡಿ ಸಂತೆಕಟ್ಟೆ ಲೋಬೊ ಟವರ್ಸ್‌ನಲ್ಲಿರುವ ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಲೋಬೊ ಮೋಟಾರ್ಸ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಹಬ್ಬದ ಆಫರ್‌ಗಳನ್ನು ಘೋಷಿಸಲಾಗಿದೆ.

ಟಿವಿಎಸ್ ಕಂಪನಿಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಖರೀದಿಗೆ ಆಕರ್ಷಕ ಉಡುಗೊರೆಗಳು ಲಭ್ಯವಿವೆ. ರೂ.3000 ಎಕ್ಸ್‌ಚೇಂಜ್‌ ಬೋನಸ್‌, ರೂ.10000 ತನಕ ಉಳಿತಾಯ ಮಾಡುವ ಸುವರ್ಣಾವಕಾಶ, ಮುಂಗಡ ಪಾವತಿ ಕೇವಲ ರೂ. 3999ರಿಂದ ಪ್ರಾರಂಭ, ನಿಮ್ಮ ಯಾವುದೇ ಹಳೆಯ ದ್ವಿಚಕ್ರ ವಾಹನವನ್ನು ಟಿವಿಎಸ್‌ನೊಂದಿಗೆ ಬದಲಾಯಿಸುವ ಅವಕಾಶವಿದೆ.

ಇದರೊಂದಿಗೆ ಗ್ರಾಹಕರ ವಾಹನಗಳಿಗೆ ಹೊಸ ವಿಮೆ ಹಾಗೂ ವಿಮೆ ನವೀಕರಣವನ್ನು ಅತೀ ಕಡಿಮೆ ದರದಲ್ಲಿ ಮಾಡಿಸಿಕೊಳ್ಳುವ ಸೌಲಭ್ಯವೂ ಇದೆ. ಹಬ್ಬದ ವಿಶೇಷ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಲು ಗ್ರಾಹಕರು ಸಮೀಪದ ಲೋಬೊ ಮೋಟಾರ್ಸ್ ಶೋರೂಂಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಾಹನ ಖರೀದಿಗೆ ಆಕರ್ಷಕ ಉಚಿತ ಕೊಡುಗೆಗಳು
ಲೋಬೊ ಮೋಟಾರ್ಸ್ನಲ್ಲಿ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ ಹಲವು ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಉಚಿತ ಹೆಲ್ಮೆಟ್, ಉಚಿತ ಪೆಟ್ರೋಲ್, ಉಚಿತ ಬಾಡಿ ಕವರ್, ಐದು ವರ್ಷಗಳ ಉಚಿತ ಎಂಜಿನ್ ವಾರಂಟಿ, ರೂ. 15 ಲಕ್ಷದ ಉಚಿತ ರೈಡರ್ ವಿಮೆ, ರೋಡ್‌ಸೈಡ್ ಅಸಿಸ್ಟೆನ್ಸ್, ಉಚಿತ ಟ್ರಾವೆಲ್ ಬ್ಯಾಗ್, ಪ್ರಮುಖ ಆಕರ್ಷಣೆಗಳಾಗಿವೆ.

Related posts

ತೆಕ್ಕಾರಿನ ಯುವಕನನ್ನು ಕೆದಿಲದಲ್ಲಿ ಅಪಹರಿಸಿ ಹಲ್ಲೆ ಆರೋಪ-ಪ್ರಕರಣ ದಾಖಲು

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ವತಿಯಿಂದ ಕೋಲ್ಕತ್ತಾದ ಮೆಡಿಕಲ್ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಖಂಡಿಸಿ ಪಂಜಿನ ಮೆರವಣಿಗೆ

Suddi Udaya

ಅ. 25: ಬರೆಂಗಾಯದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ ಶ್ರೀ ಸೋಮನಾಥೇಶ್ವರ ಬಯಲಾಟ ಸೇವಾ ಸಮಿತಿ

Suddi Udaya

ಕುದುರೆಮುಖ ರಾಷ್ಟ್ರೀಯ ಉದ್ಯಾನವನ: ಸ್ವಯಂ ಪ್ರೇರಿತ ಪುನರ್ವಸತಿಗೆ ಒಲವು ಹೊಂದಿರುವ ಕುಟುಂಬಗಳು ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಅರಣ್ಯ ಸಚಿವರ ಭೇಟಿ

Suddi Udaya

ಮಂಗಳೂರು ಕಥೋಲಿಕ್ ಸಭಾ ವತಿಯಿಂದ ಬೆಳ್ತಂಗಡಿ ಪತ್ರಕರ್ತ ಹೆರಾಲ್ಡ್ ಪಿಂಟೊ ರಿಗೆ ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!