ಬೆಳ್ತಂಗಡಿ: ಇಲ್ಲಿನ ಆದ್ಯಾ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಆಧಿನಾಥ್ ಬಜಾಜ್ ಶೋರೂಮ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ ಎಂದು ಸಂಸ್ಥೆಯ ಮಾಲಕ ರಾಜೇಶ್ ತಿಳಿಸಿದ್ದಾರೆ.
ದೀಪಾವಳಿ ಪ್ರಯುಕ್ತ ಬಜಾಜ್ ದ್ವಿಚಕ್ರ ವಾಹನಗಳನ್ನು ಆಕರ್ಷಕ ಮುಂಗಡ ಪಾವತಿ ಹಾಗೂ ಶೇ.6.99ರ ಬಡ್ಡಿದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಪಲ್ಸರ್ ಎನ್‌ಎಸ್ 200ಗೆ ರೂ.15,999, ಪಲ್ಸರ್ 150ಗೆ ರೂ.12,999, ಪಲ್ಸರ್ ಎನ್ 160ಗೆ ರೂ.20999, ಬಜಾಜ್ ಚೇತಕ್‌ಗೆ ರೂ.2999 ಹಾಗೂ ಫ್ರೀಡಂ ಬೈಕ್‌ಗೆ ರೂ.10999 ಮುಂಗಡ ಪಾವತಿಯೊಂದಿಗೆ ಖರೀದಿಸಬಹುದಾಗಿದೆ. ರೂ. 4999ರಿಂದ ಮುಂಗಡ ಪಾವತಿ ಆರಂಭವಾಗುವ ಯೋಜನೆಯೂ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.
ಗ್ರಾಹಕರಿಗೆ ಒಂದು ವರ್ಷದ ಉಚಿತ ಸೇವೆ, ಎಕ್ಸ್ಪ್ರೆಸ್ ಸರ್ವಿಸ್, ಬಡ್ಡಿಯಲ್ಲಿ ರೂ. 4000ದವರೆಗೆ ಉಳಿತಾಯ ಹಾಗೂ ಉಚಿತ ಹೆಲ್ಮೆಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಗ್ರಾಹಕರ ಯಾವುದೇ ವಾಹನಗಳಿಗೆ ಹೊಸ ವಿಮೆ ಮಾಡಿಸುವುದು ಹಾಗೂ ವಿಮೆ ನವೀಕರಣವನ್ನು ಅತ್ಯಂತ ಕಡಿಮೆ ದರದಲ್ಲಿ ಮಾಡಿಕೊಡಲಾಗುತ್ತದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರು ತಮ್ಮ ಇಷ್ಟದ ಬಜಾಜ್ ವಾಹನವನ್ನು ಆಕರ್ಷಕ ಕೊಡುಗೆಗಳೊಂದಿಗೆ ಖರೀದಿಸಲು ಇದು ಉತ್ತಮ ಅವಕಾಶವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಬೆಳ್ತಂಗಡಿಯ ಆಧಿನಾಥ್ ಬಜಾಜ್ ಶೋರೂಮ್ ಅನ್ನು ಸಂಪರ್ಕಿಸಬಹುದು ಎಂದು ರಾಜೇಶ್ ತಿಳಿಸಿದ್ದಾರೆ.















