November 12, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಾಧಕರು

ಉರಗ ತಜ್ಞ ಸ್ನೇಕ್ ಜೋಯ್ ಅವರಿಗೆ ಅಭಿನಂದನಾ ಸನ್ಮಾನ ಕಾರ್ಯಕ್ರಮ

ಬೆಳ್ತಂಗಡಿ: ಪಟ್ರಮೆ ಕಲಾಯಿ – ಉರಗಗಳ ಸಂರಕ್ಷಣೆ ಹಾಗೂ ಜನಜಾಗೃತಿ ಕಾರ್ಯದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಉರಗ ತಜ್ಞ ಸ್ನೇಕ್ ಜೋಯ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ, ಫ್ರೆಂಡ್ಸ್ @ ವಿಂಗ್ಸ್ ಉಜಿರೆ–ಧರ್ಮಸ್ಥಳ ವತಿಯಿಂದ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಪಟ್ರಮೆ ಕಲಾಯಿ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಡ್ತೂರು ರಾಜೀವ ಶೆಟ್ಟಿ, ಅಬೂಬಕ್ಕರ್ ಉಜಿರೆ, ಗಣೇಶ್ ಗೌಡ ಕಲಾಯಿ, ಸೀತಾರಾಮ ಗೌಡ ಪುತ್ತೂರು, ಅಜಯ್ ಧರ್ಮಸ್ಥಳ, ಚಂದನ್ ಕಾಮತ್ ಧರ್ಮಸ್ಥಳ, ಉಮೇಶ್ ಪ್ರಭು ಧರ್ಮಸ್ಥಳ, ಶ್ರೀಧರ್ ಉಜಿರೆ ಸೇರಿದಂತೆ ಊರಿನ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಮಾನಂದ ಶೆಟ್ಟಿ ಕಲಾಯಿ ಅವರು ಸ್ನೇಕ್ ಜೋಯ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಉರಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಪ್ರಕೃತಿ ಮತ್ತು ಜೀವಸಂಕುಲದ ಸಂರಕ್ಷಣೆಯಲ್ಲಿ ಸಲ್ಲಿಸುತ್ತಿರುವ ಅವರ ಸೇವೆಯನ್ನು ಗಣ್ಯರು ಶ್ಲಾಘಿಸಿದರು.

ಕಾರ್ಯಕ್ರಮವನ್ನು ನಿರ್ದೇಶಕ ಮನು ಉಜಿರೆ ನಿರೂಪಿಸಿದರು.

Related posts

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪಿ. ಕುಶಾಲಪ್ಪ ಗೌಡ, ಉಪಾಧ್ಯಕ್ಷರಾಗಿ ಮಹಾಬಲ ಶೆಟ್ಟಿ ಆಯ್ಕೆ

Suddi Udaya

ಮಾ.22: ಬೆಳ್ತಂಗಡಿಯಲ್ಲಿ ಐ ಕೇರ್ ಒಪ್ಟಿಕಲ್ಸ್ ಶುಭಾರಂಭ

Suddi Udaya

ಮುಗ್ಗ ಗುತ್ತಿನ ಮನೆತನದ ವಿದ್ಯಾರ್ಥಿಗಳಿಗೆ ಪುರಸ್ಕಾರ

Suddi Udaya

ದೇಶದಲ್ಲಿ ನೋಂದಾವಣೆಯಾಗದಿರುವ ದೊಡ್ಡ ಸಂಸ್ಥೆ ಆರ್.ಎಸ್.ಎಸ್. ಮಾತ್ರ,: ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರಿ ಜನರಲ್ ರೆ. ಡಾ. ಮಾಣಿ ವೆಳುತ್ತೇಡತ್ತುಪರಂಬಿಲ್ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯ ಸಂತಾಪ

Suddi Udaya

ಜು.24 ರಂದು ಬೆಳ್ತಂಗಡಿ ರಾಜಕೇಸರಿ ಸಂಘಟನೆ ವತಿಯಿಂದ ಆಟಿ ಅಮಾವಾಸ್ಯೆ ಆಚರಣೆ : ಪತ್ರಿಕಾಗೋಷ್ಠಿ

Suddi Udaya
error: Content is protected !!