28.2 C
ಪುತ್ತೂರು, ಬೆಳ್ತಂಗಡಿ
October 1, 2026
ಗ್ರಾಮಾಂತರ ಸುದ್ದಿನಿಧನವರದಿ

ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರಿ ಜನರಲ್ ರೆ. ಡಾ. ಮಾಣಿ ವೆಳುತ್ತೇಡತ್ತುಪರಂಬಿಲ್ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯ ಸಂತಾಪ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರಿ ಜನರಲ್ ರೆ. ಡಾ. ಮಾಣಿ ವೆಳುತ್ತೇಡತ್ತುಪರಂಬಿಲ್ ಅವರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯವು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.

ವೈದಿಕ ಸೇವೆ, ಶಿಕ್ಷಣ ಹಾಗೂ ಧರ್ಮಸಭೆಯ ವಿವಿಧ ಸೇವೆಗಳಲ್ಲಿ ಸಮರ್ಪಿತ ಜೀವನವನ್ನು ನಡೆಸಿದವರಾಗಿದ್ದರು ಫಾ. ಮಾಣಿ. ದಿವಂಗತರಾದ ಮಾಣಿ ಮತ್ತು ತ್ರೇಸ್ಯಮ್ಮ ಅವರ ಪುತ್ರರಾಗಿದ್ದ ಅವರು ಎಂಟು ಮಕ್ಕಳಲ್ಲಿ ಒಬ್ಬರಾಗಿದ್ದರು. ಅವರ ಸಹೋದರರಾದ ಜೋಸ್ ಮತ್ತು ಸ್ಕರಿಯಾ, ಸಹೋದರಿಯರಾದ ಮರಿಯಾ, ಎಲಿಜಬೆತ್, ಜೆಸ್ಸಿ, ಫಿಲೋಮಿನಾ ಮತ್ತು ತ್ರೇಸ್ಯ ಅವರು ಕುಟುಂಬದ ಸದಸ್ಯರಾಗಿದ್ದಾರೆ.

ನೀಲ್ಯಾಡ್ಕ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಉಡಾನೆಯ ಸೇಂಟ್ ಆಂಥೋನೀಸ್ ಹೈಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ತಲಶ್ಶೇರಿಯ ಸೇಂಟ್ ಜೋಸೆಫ್ ಮೈನರ್ ಸೆಮಿನರಿ ಹಾಗೂ ಕೋಟಯಂ ವಡವಾತೂರಿನ ಸೇಂಟ್ ಥಾಮಸ್ ಅಪೋಸ್ತೋಲಿಕ್ ಸೆಮಿನರಿಯಲ್ಲಿ ವೈದಿಕ ತರಬೇತಿ ಪಡೆದರು. ಮೈಸೂರಿನ KSOU ಹಾಗೂ ರೋಮ್‌ನ Pontifical University of the Holy Crossನಲ್ಲಿ ಉನ್ನತ ಶಿಕ್ಷಣ ಪಡೆದ ಅವರು 2006ರಲ್ಲಿ ರೋಮ್‌ನಿಂದ ಡಾಕ್ಟರೇಟ್ ಪದವಿ ಪಡೆದರು.

ಬೆದೂರು, ಚೆಂಪನೋಡ, ಮುದೂರು, ಬಂಗಾಡಿ, ಧರ್ಮಸ್ಥಳ, ಬೆಳ್ತಂಗಡಿ, ಕುಟ್ರಪಾಡಿ ,ಸಿದ್ದಾಪುರ (ಕೊಡಗು), ಜಡ್ಕಲ್ ಹಾಗೂ ಕಂಕನಾಡಿ ಸೇರಿದಂತೆ ವಿವಿಧ ಧರ್ಮಕೇಂದ್ರಗಳಲ್ಲಿ ಅವರು ವೈದಿಕ ಸೇವೆ ಸಲ್ಲಿಸಿದರು.ಅವರ ಕುಟುಂಬದ ಸದಸ್ಯರು ಹಾಗೂ ಬಂಧುಗಳಿಗೆ ಬೆಳ್ತಂಗಡಿ ಧರ್ಮಪ್ರಾಂತ್ಯವು ತನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಅವರ ಆತ್ಮಶಾಂತಿಗಾಗಿ ಧರ್ಮಪ್ರಾಂತ್ಯದ ಭಕ್ತರು ಪ್ರಾರ್ಥನೆಯಲ್ಲಿ ಒಂದಾಗಿದ್ದಾರೆ.

Related posts

ಎಕ್ಸೆಲ್ ಕಾಲೇಜಿನಲ್ಲಿ ನ್ಯೂಸ್ 18 ವತಿಯಿಂದ ವಿದ್ಯಾದೀಪ ವಿಶೇಷ ಕಾರ್ಯಕ್ರಮ

Suddi Udaya

ಆನೆದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಗೌಡರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ಕುಟುಂಬಸ್ಥರಿಗೆ ಸಾಂತ್ವನ – ಪರಿಹಾರ ಧನದ ಚೆಕ್ ಹಸ್ತಾಂತರ

Suddi Udaya

ಯುಗಳ ಮುನಿಶ್ರೀಗಳ ದೀಕ್ಷಾ ಮಹೋತ್ಸವದ ರಜತ ಸಂಭ್ರಮ ಬೆಳಿಗ್ಗೆ ಭಗವಾನ್ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ

Suddi Udaya

ಮಿತ್ತಬಾಗಿಲು ಕುಕ್ಕಾವು ರಕ್ಷಾಬಂಧನ ಸಡಗರ

Suddi Udaya

ನಾವೂರು ಹಿ.ಪ್ರಾ. ಶಾಲಾ ಹಳೇ ವಿದ್ಯಾರ್ಥಿ ಸಂಘ ರಚನೆ ಅಧ್ಯಕ್ಷರಾಗಿ ಸೆಬಾಸ್ಟಿನ್ ವಿ.ಪಿ., ಪ್ರಧಾನ ಕಾರ್ಯದರ್ಶಿ ರಜತ್ ಮೋರ್ತಾಜೆ

Suddi Udaya

ಎ.22: ಸಾವ್ಯದಲ್ಲಿ 12 ನೇ ವರ್ಷದ ಸಾಮೂಹಿಕ ಶ್ರೀ ಶನಿಪೂಜೆ

Suddi Udaya
error: Content is protected !!