ಬೆಳ್ತಂಗಡಿ: 2026-27 ಮುಂಗಾರು ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಹಂತದಲ್ಲಿ ಮಹಜರ್ ಆಪ್ ಮೂಲಕ ಮೇಲ್ವಿಚಾರಕರಿಂದ ಬೆಳೆ ಸಮೀಕ್ಷೆ ಮಾಡಲು ವೆಬ್ ಅಪ್ಲಿಕೇಶನ್ ನಲ್ಲಿ ಬೆಳೆ ಸಮೀಕ್ಷೆ ಆಗದಿರುವ ಪ್ಲಾಟ್ ಗಳಿಗೆ ಒಬ್ಜೆಕ್ಷನ್ (Objection) ಹಾಕಲು ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ರೈತರೂ ಬೆಳೆ ದರ್ಶಕ ಮೊಬೈಲ್ ತಂತ್ರಾಂಶವನ್ನು ( https://play.google.com/store/apps/details?id=com.crop.offcskharif_2021 ) download ಮಾಡಿಕೊಂಡು ತಮ್ಮ ಹೆಸರಿನಲ್ಲಿರುವ, ಬೆಳೆ ಇರುವಂತಹ ಎಲ್ಲಾ ಸರ್ವೇ ನಂಬರ್ ಗಳಲ್ಲಿ ಬೆಳೆ ದಾಖಲೆ ಆಗಿರುವುದನ್ನು ಪರೀಕ್ಷಿಸಿಕೊಂಡು, ಒಂದು ವೇಳೆ ಬೆಳೆ ಸಮೀಕ್ಷೆ ಆಗದೆ ಇದ್ದಲ್ಲಿ, https://cropsurvey.karnataka.gov.in/2026/CropSurveyDetails/frmnagovtaquiredd_Objection_WebLogin.aspx
ಲಿಂಕ್ ಮೂಲಕ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು, ಸರ್ವೇ ನಂಬರ್ ನಮೂದಿಸಿ, ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡು, ಬೆಳೆ ಸಮೀಕ್ಷೆ ಆಗದ ಪ್ಲಾಟ್ ಗಳಿಗೆ ಮಾತ್ರ FRUITS ID ಯಲ್ಲಿ ನೋಂದಣಿ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ objection ಹಾಕಿ, ಕೂಡಲೇ, ನಿಮ್ಮ ಗ್ರಾಮಕ್ಕೆ ನೇಮಿಸಿರುವ ಮೇಲ್ವಿಚಾರಕರನ್ನು ಸಂಪರ್ಕಿಸಿ ಬೆಳೆ ಸಮೀಕ್ಷೆ ಮಾಡಿಸಿಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರುತ್ತಾರೆ.








