September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಜ.10-11: ಮೇಲಂತಬೆಟ್ಟು ಬದಿನಡೆ ಶ್ರೀ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ನಾಗಬ್ರಹ್ಮಮಂಡಲೋತ್ಸವ

ಬೆಳ್ತಂಗಡಿ: ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಸನ್ನಿಧಾನದಲ್ಲಿ ಲೋಕಕಲ್ಯಾಣಾರ್ಥವಾಗಿ ವೇದಮೂರ್ತಿ ಮುಂಡೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳ ಸಂಕಲ್ಪದಂತೆ ಅಷ್ಟೋತ್ತರ ಶತಸಂಖ್ಯೆ ನಾರಿಕೇಳ ಶ್ರೀ ಮಹಾಗಣಪತಿ ಹವನ, ನಾಗತನುತರ್ಪಣ ಹಾಗೂ ನಾಗಬ್ರಹ್ಮಮಂಡಲ ಸೇವೆಯು ಜ.10, 11 ರಂದು ನಡೆಯಲಿದೆ.


ಕಾರ್ಯಕ್ರಮಗಳು: ಜ.10 ಬೆಳಗ್ಗೆ ಶ್ರೀ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಸಾಮೂಹಿಕ ದೇವತಾ ಪ್ರಾರ್ಥನೆ. ಸ್ವಸ್ತಿ ಪುಣ್ಯಾಹ ವಾಚನ, ಸಪ್ತಶುದ್ಧಿ, ಪಂಚಾಮೃತ ಅಭಿಷೇಕ, ಪ್ರಧಾನ ಹೋಮ ಕಲಶಪೂರಣೆ, ಕಲಶಾಭಿಷೇಕ, ಗಣಪತಿ ಅಥರ್ವಶೀರ್ಷ ಪಾರಾಯಣ, ಸ್ಥಳದ ದೈವಗಳಿಗೆ ಕಲಶಾಭಿಷೇಕ, ಪಂಚಪರ್ವ, ಮಧ್ಯಾಹ್ನ ಅಷ್ಟೋತ್ತರ ಶತಸಂಖ್ಯೆ ನಾರಿಕೇಳ ಶ್ರೀ ಮಹಾಗಣಪತಿ ಹವನ, ಪೂರ್ಣಾಹುತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ನಾಗಬ್ರಹ್ಮನಿಗೆ ತನುತರ್ಪಣ ಸೇವೆ, ಮಹಾಪೂಜೆ ಪ್ರಸಾದ ವಿತರಣೆ, ಲಘು ಉಪಾಹಾರವಿದೆ.


ಜ.11 ನಾಗಬ್ರಹ್ಮ ದೇವರಿಗೆ ಪಂಚಾಮೃತ ಅಭಿಷೇಕ, ನಾಗನಕಟ್ಟೆಯಲ್ಲಿ ಪಂಚಾಮೃತ ಅಭಿಷೇಕ, ತಂಬಿಲ, ನಲ್ಕೆತ್ತಾರಿನಲ್ಲಿ ಕೊಡಮಣಿತ್ತಾಯ ದೈವ ಸನ್ನಿಧಿಯಲ್ಲಿ ಪ್ರಾರ್ಥನೆ, ನರಸಿಂಹ ದೇವರ ಕಟ್ಟೆಯಲ್ಲಿ ಪ್ರಾರ್ಥನೆ ಹಾಗೂ ಪೂಜೆ, ಕುತ್ತೋðಡಿಯ ಕರ್ತಜ್ಜನಿಗೆ ಹೂ-ಹಣ್ಣು ಇಟ್ಟು ಪ್ರಾರ್ಥನೆ, ಶ್ರೀ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಆಶ್ಲೇಷಬಲಿ, ನಾಗಬ್ರಹ್ಮಮಂಡಲ ವೇದಿಕೆಯ ಮಂಟಪ ಸಂಸ್ಕಾರ, ಮಂಜಸೇವೆ ದರ್ಶನ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀ ನಾಗಬ್ರಹ್ಮ ದೇವರಿಗೆ ಹಾಲಿಟ್ಟು ಸೇವೆ, ನಾಗನಕಟ್ಟೆಯಲ್ಲಿ ಹಾಲಿಟ್ಟು ಸೇವೆ ಶ್ರೀ ಗೋಪಾಲಕೃಷ್ಣ ತಂತ್ರಿಗಳಿAದ ನಾಗಬ್ರಹ್ಮಮಂಡಲ ಪೂಜೆ, ನಾಗಪಾತ್ರಿ ಶ್ರೀ ರಾಮಚಂದ್ರ ಕುಂಜಿತ್ತಾಯ, ಶ್ರೀ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗ ಇವರ ನೇತೃತ್ವದಲ್ಲಿ ನಾಗಕನ್ನಿಕೆಯಾಗಿ ಶ್ರೀ ಬಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯ ಇವರಿಂದ ನಾಗಬ್ರಹ್ಮಮಂಡಲ ಸೇವೆ.


ಖಾವಂದರು, ಸ್ವಾಮೀಜಿ, ಗಣ್ಯರು ಭಾಗಿ: ನಾಗಬ್ರಹ್ಮಮಂಡಲ ಪುಣ್ಯಫಲದ ಸೇವೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ೧೦೦೮ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅದ್ಯಕ್ಷರಾದ ಕೆ. ಹರೀಶ್ ಕುಮಾರ್, ಎಂಎಲ್ಸಿ ಪ್ರತಾಪಸಿಂಹ ನಾಯಕ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಜನ ಪ್ರತಿನಿಧಿಗಳು, ಭಕ್ತರು, ಊರವರು ಭಾಗವಹಿಸಲಿದ್ದಾರೆ.

1008 ಹಿಂಗಾರ ಬೇಕು:
ನಾಗಬ್ರಹ್ಮಮಂಡಲ ಸೇವೆಗಾಗಿ ಸುಮಾರು 1008 ಹಿಂಗಾರ ಬೇಕಾಗುತ್ತದೆ. ಈಗಾಗಲೇ ಒಂದೇ ಗ್ರಾಮದ ಭಕ್ತರು 400 ಹಿಂಗಾರ ನೀಡುತ್ತಾರೆ. ಬೇರೆಲ್ಲಾ ತಯಾರಿಗಳು ನಡೆದಿದೆ. ದೇವಸ್ಥಾನದ ಅಧ್ಯಕ್ಷ ನಾರಾಯಣ ಪೂಜಾರಿ ಮತ್ತು ಆಡಳಿತ ಮಂಡಳಿಯ ಸದಸ್ಯರ ಪೂರ್ಣಪ್ರಮಾಣದ ಸಹಕಾರ ನೀಡುತ್ತಿದ್ದಾರೆ. ಹತ್ತು ಸಾವಿರಕ್ಕಿಂತ ಹೆಚ್ಚು ಭಕ್ತರು ಸೇರಬಹುದು. ಭಕ್ತರು ಹಣ್ಣುಕಾಯಿ, ಸೇವೆ ಮಾಡಬಹುದು.

Related posts

ತನ್ನ ತಾಯಿಯನ್ನು ಎತ್ತಿಕೊಂಡು ಬಂದು ಮತಚಲಾಯಿಸಿದ ಮಗ: ಅನಾರೋಗ್ಯದ ನಡುವೆಯೂ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ ರೋಹಿಣಿ

Suddi Udaya

ಅ.23 ಶ್ರೀ ಮಹಾಗಣಪತಿ ದಂತ ಚಿಕಿತ್ಸಾಲಯ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಶಿರ್ಲಾಲು: ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದ ಕಲಾಮಂಟಪಕ್ಕೆ ಶಿಲಾನ್ಯಾಸ

Suddi Udaya

ಬೆಳ್ತಂಗಡಿ ಪಶುವೈದ್ಯ ಆಸ್ಪತ್ರೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಡಾ.ಮಂಜ ನಾಯ್ಕ ಹಾಗೂ ಡಾ.ಜಯ ಕೀರ್ತಿ ಜೈನ್ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಉಜಿರೆಯಲ್ಲಿ ವಿಶೇಷ ಚೇತನರ ಗ್ರಾಮ ಸಭೆ

Suddi Udaya

ಜಿಲ್ಲಾ ಒಕ್ಕಲಿಗರ ಗೌಡರ ಸೇವಾ ಸಂಘಕ್ಕೆ ಬೆಳ್ತಂಗಡಿಯಿಂದ ಐದು ಜನ ಆಯ್ಕೆ

Suddi Udaya
error: Content is protected !!