November 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ದೀಪಾವಳಿ ಆಚರಣೆ

ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಪ್ರತಿ ವರ್ಷ ದೀಪಾವಳಿ ಆಚರಣೆ ವಿಜ್ರಂಭಣೆಯಿಂದ ಸoಘದ ಛಾಯಾ ಭವನದಲ್ಲಿ ಆಚರಿಸುತ್ತಿದ್ದು ಈ ವರ್ಷ ವಲಯದ ಮಾಜಿ ಅಧ್ಯಕ್ಷ ಹಿರಿಯ ಸದಸ್ಯ ಸುಂದರ್ ಕೆ ಸಂಧ್ಯಾ ಸ್ಟುಡಿಯೋ ಬೆಳ್ತಂಗಡಿ ಅವರ ಮನೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು

ಕಾರ್ಯಕ್ರಮದಲ್ಲಿ ದೀಪಾವಳಿ ಆಚರಣೆ ಬಗ್ಗೆ ಹಾಗೂ ಸುಂದರ್ ಕೆ ಅವರ ಸoಘದ ಒಡನಾಟ ಬಗ್ಗೆ ವಲಯದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ. ಜಗದೀಶ್ ಜೈನ್ ಧರ್ಮಸ್ಥಳ. ವಲಯದ ಗೌರವಾಧ್ಯಕ್ಷ ವಿಲ್ಸನ್ ಗೋನ್ಸಾಲಿಸ್ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಸಾoಸ್ಕ್ರತಿಕ ಕಾರ್ಯದರ್ಶಿ ಸುರೇಶ್ ಬಿ ಕೌಡoಗೆ ಮಾತನಾಡಿದರು.

ಸoಘದ ಮಾಜಿ ಅಧ್ಯಕ್ಷ ಅಶೋಕ್ ಆಚಾರ್ಯ ನಾವೂರ ದೀಪಾವಳಿ ಆಚರಣೆಯ ಹಾಡು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತoದರು.

ಸುಂದರ್ ಕೆ ಮಾತನಾಡಿ ನಮ್ಮ ಸoಘಟನೆಯ ಪೂರಕವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಕ್ಕೆ ನನ್ನ ಸoಪೂರ್ಣ ಸಹಕಾರ ನೀಡುತ್ತೇನೆ ನನ್ನ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲು ಸಹಕರಿಸಿದ ಸoಘದ ಸರ್ವ ಸದಸ್ಯರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಲಯದ ಅಧ್ಯಕ್ಷ ರವಿ ಪೂಜಾರಿ, ಗೌರವಾಧ್ಯಕ್ಷ ವಿಲ್ಸನ್ ಗೋನ್ಸಾಲಿಸ್, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಕೋಶಾಧಿಕಾರಿ ಸುಜಿತ್ ರೈ ಪದ್ಮುoಜ, ವಲಯದ ಸದಸ್ಯರು ಉಪಸ್ಥಿತರಿದ್ದರು.

ಅಧ್ಯಕ್ಷ ರವಿ ಪೂಜಾರಿ ನಾರಾವಿ ಸ್ವಾಗತಿಸಿ, ಉಮೇಶ್ ಕುಮಾರ್ ಮದ್ದಡ್ಕ ಕಾರ್ಯಕ್ರಮ ನಿರೂಪಿಸಿ, ವಲಯದ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ ವಂದಿಸಿದರು.

Related posts

ವೇಣೂರು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ವಾಹನ ಜಾಥಾ,

Suddi Udaya

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ಮಹಾಸಭೆ: ರೂ.69.68 ಲಕ್ಷ ನಿವ್ವಳ ಲಾಭ, ಶೇ. 10.25ಡಿವಿಡೆಂಟ್ ಘೋಷಣೆ

Suddi Udaya

ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಷಾ ವಿವಾದಾತ್ಮಕ ಹೇಳಿಕೆ ಹಾಗೂ ಸಚಿವೆ ವಿರುದ್ಧ ಸಿ.ಟಿ ರವಿ ಹೇಳಿಕೆ ವಿರೋಧಿಸಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Suddi Udaya

ಬಳಂಜ: ನಾಲ್ಕೂರು ಕೃಷಿಕ ಕರಿಯ ಪೂಜಾರಿ ಅನಾರೋಗ್ಯದಿಂದ ನಿಧನ

Suddi Udaya

ಕೊಕ್ಕಡ: ಹಿರಿಯರ ಸೇವಾ ಪ್ರತಿಷ್ಠಾನದಿಂದ ದಶ ಸಾಧಕರಿಗೆ ಗೌರವಾರ್ಪಣೆ     

Suddi Udaya

ಸೆ.7: ಬಳಂಜ-ನಾಲ್ಕೂರು- ತೆಂಕಕಾರಂದೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya
error: Content is protected !!